Samrat kannada - Namkade sambar andre nimkade tiliyodilla

ಚಿತ್ರ: ಸಾಮ್ರಾಟ್
ಸಂಗಿತ ಮತ್ತು ಸಾಹಿತ್ಯ: ಹಂಸಲೇಖ
ಗಂಡು: ವಾಹ್
ಹೆಣ್ಣು: ವಾಹ್
ಗಂಡು: ವಾಹ್
ಹೆಣ್ಣು: ವಾಹ್
ಹೆಣ್ಣು:
ನಿಮ್ಕಡೆ ಸಾಂಬರ್ ಅಂದ್ರೆ, ನಮ್ಕಡಿ ತಿಳಿಯೋದಿಲ್ಲ
ನಮ್ಕಡಿ ಡಾಂಬರ್ ಅಂದ್ರೆ, ನಿಮ್ಕಡಿ ತಿಳಿಯೋದಿಲ್ಲ
ನಿಮ್ಕಡಿ ಶಿರಾ ಅಂದ್ರೆ, ತಲೆ ಅಂತ ತಿಳ್ಕೊಂತಿರಿ
ನಮ್ಕಡಿ ಶಿರಾ ಅಂದ್ರೆ, ಕೇಸರಿಬಾತ್ ಅನ್ಕೋತೀವಿ
ಎಂತದು, ಎಂತದು ಹಾಡೋದೆಂತ, ಕೂಡೋದೆಂತ, ಕುಣುವುದೆಂತ
ಹೆಂಗಪ್ಪ, ಹೆಂಗಪ್ಪ, ಹಾಡೋದ್ಯ್ಹಾಂಗ, ಕೂಡೋದ್ಯ್ಹಾಂಗ, ಕುಣಿಯೋದ್ಯ್ಹಾಂಗ
ಗಂಡು:
ಬೆಳಗಾವಿ ಆದರೇನು, ಬೆಂಗಳೂರು ಆದರೇನು,
ನಗಬೇಕು ನಾವು ಮೊದಲು ಮಾತಾಡಲು, ಎದೆ ಭಾಷೆಯ ಅರಿವಾಗಲು
ಹುಬ್ಬಳ್ಳಿಯಾದರೇನು, ಭದ್ರಾವತಿ ಆದರೇನು,
ಬೆರಿಬೇಕು ನಾವು ಮೊದಲು ನಲಿದಾಡಲು, ನಾವೆಲ್ಲರೂ ಸರಿಹೋಗಲು.
ಹೆಣ್ಣು:
ಬೆಂಗ್ಳೂರಲ್ಲಿ ಬೊಂಡ ಅಂದ್ರೆ, ಅಲೂಗಡ್ಡೆ ಉಂಡೆಯಂತೆ,
ಮಂಗ್ಳೂರಲ್ಲಿ ಬೊಂಡ ಅಂದ್ರೆ, ಎಳನೀರ ಕಾಯಿಯಂತೆ
ಗದುಗಿನಲ್ಲಿ ಪೂರಿ ಜೊತೆ ಬಾಜಿ ಕೊಡುತ್ತಾರೆ,
ಮೈಸೂರಲ್ಲಿ ಕುಸ್ತಿಗಾಗಿ ಬಾಜಿ ಕಟ್ತಾರೆ.
ಗಂಡು:
ಮೈಸೂರಲಿ ಹೊಲ ಗದ್ದೆಗೆ ಭೂತಾಯಿ ಅಂತಾರೆ,
ಮಂಗ್ಳೂರಲಿ ಒಂದು ಮೀನಿಗೆ ಭೂತಾಯಿ ಅಂತಾರೆ
ಹೆಣ್ಣು:
ನಿಮ್ಕಡೆ ಭಂಗಿ ಅಂದ್ರೆ, ಹೊಗೆಸೊಪ್ಪು ಹಚ್ಚುವುದು, ಸೇದುವುದು.
ನಮ್ಕಡಿ ಭಂಗಿ ಅಂದ್ರೆ ಚೊಕ್ಕ ಮಾಡೋ ಮಾನವರ ನಾಮವದು
ಗಂಡು:
ಸಾವಿರ ಹೂವ ಎದೆ ಹನಿ ಬೇಕು, ಜೇನಿನ ಗೂಡಾಗಲು,
ಸಾವಿರ ಭಾವ ಸಂಧಿಸಬೇಕು ಕನ್ನಡ ನಾಡಾಗಲು
ಗುಡಿಗೇರಿ ಆದರೇನು, ಮಡಿಕೇರಿ ಆದರೇನು,
ದುಡಿ ಬೇಕು ನಾವು ಮೊದಲು ಧಣಿಯಾಗಲು, ಬಂಗಾರದ ಗಣಿಯಾಗಲು
ಹೆಣ್ಣು:
ಯಾವ ಭಾಷೆ ದೊಡ್ಡದು, ಯಾವುದು ಚಿಕ್ಕದು
ಯಾವ ಭಾಷೆ ಕಲಿಯೋದು, ಯಾವುದ್ ಬಿಡೋದು
ಗಂಡು:
ಜಯಭಾರತಿ ಮಡಿಲಲ್ಲಿವೆ ನೂರಾರು ಭಾಷೆಗಳು,
ನೂರಾರಲು ಗುರಿ ಇಲ್ಲದ ನೂರಾರು ಕವಲುಗಳು
ನೋಟಿನಲ್ಲಿ ಕಾಣುವುದು ಹದಿನಾಲ್ಕು ರಾಜ್ಯಗಳ ಲಿಪಿಗಳು
ಕನ್ನಡಕ್ಕೆ ಅಲ್ಲಿ ಉಂಟು ನಾಲ್ಕನೆಯ ದೊಡ್ಡ ಸ್ಥಾನ ಮಾನಗಳು
ಕನ್ನಡನಾಡ ಜನ್ಮದ ಹಿಂದೆ ತ್ಯಾಗಗಳ ಕಥೆಯಿದೆ
ಭೂಪಟದಲ್ಲಿ ಮೆರೆಯಲು ನಮಗೆ ಸಂಸ್ಕೃತಿಯ ಜೊತೆಯಿದೆ.
ಇಬ್ಬರು:
ಲ ಲಾಲ ಲಾಲ ಲಾಲ ಲಲಾ ಲಾಲ ಲಾಲ ಲಲಾ, ಲಾ ಲಾಲ ಲಾಲ ಲಲಲಾಲ
ಲ ಲಾಲ ಲಾಲ ಲಾಲ ಲಲಾ ಲಾಲ ಲಾಲ ಲಲಾ, ಲಾ ಲಾಲ ಲಾಲ ಲಲಲಾಲ

ಕಾಮೆಂಟ್‌‌ ಪೋಸ್ಟ್‌ ಮಾಡಿ

8 ಕಾಮೆಂಟ್‌ಗಳು

ಅನಾಮಧೇಯಹೇಳಿದ್ದಾರೆ…
vandanegalu manjunath swamy
Isana jewel couture ಹೇಳಿದ್ದಾರೆ…
Superb songs ... Single songs nalli Kannada n Karnataka da bagge tilisi kotta kavige sharanu
Manjunatha Swamy.M.H ಹೇಳಿದ್ದಾರೆ…
Dhanyavaadagalu ..!! Visit madtha iri. Thank you. Love you all..
Unknown ಹೇಳಿದ್ದಾರೆ…
ಧನ್ಯವಾದಗಳು ಮಂಜುನಾಥರವರೆ.....ಇನ್ನು ಎಷ್ಟು ಯುಗಗಳೇ ಆದರೂ ಇಂತಹ ಹಾಡುಗಳು ಬರುವುದಿಲ್ಲ.....ಜೈ ಕನ್ನಡಾಂಭೆ.....ಜೈ ವಿಷ್ಣು ಸಾರ್....ಜೈ ಹಂಸಲೇಖ ಸಾರ್
Unknown ಹೇಳಿದ್ದಾರೆ…
ಧನ್ಯವಾದಗಳು ಮಂಜುನಾಥರವರೆ.....ಇನ್ನು ಎಷ್ಟು ಯುಗಗಳೇ ಆದರೂ ಇಂತಹ ಹಾಡುಗಳು ಬರುವುದಿಲ್ಲ.....ಜೈ ಕನ್ನಡಾಂಭೆ.....ಜೈ ವಿಷ್ಣು ಸಾರ್....ಜೈ ಹಂಸಲೇಖ ಸಾರ್
SRIDHAR K R ಹೇಳಿದ್ದಾರೆ…
ಮಾನ್ಯರೇ,ಇಂತಹ ಮುದ್ದಾದ ಹಾಡನ್ನು ಸಾಲುಗಳ ರೂಪದಲ್ಲಿ ಕೊಡಮಾಡಿದ ನಿಮಗೆ ಹೃದಯ ಪೂರ್ವಕ ನಮನಗಳು💐🙏😍

ಕನ್ನಡ ನಾಡು ನುಡಿಗೆ ಶ್ರಮಿಸುವ ಕೈ ಎಂದಿಗೂ ಬರಿದಾಗದು..... ಮತ್ತಷ್ಟು ಪ್ರಯತ್ನಗಳು ನಿಮ್ಮಿಂದ ನಿರೀಕ್ಷಿಸುತ್ತೇವೆ.. ನಮ್ಮ ಸಹಾಯವನ್ನು ಅಗತ್ಯವಾಗಿ ನೀಡಲು ಹರ್ಷಿಸುತ್ತೇವೆ.
SRIDHAR K R ಹೇಳಿದ್ದಾರೆ…
ಇಂತಹ ಅದ್ಭುತ ಕನ್ನಡ ಹಾಡನ್ನು ಸಾಲುಗಳ ರೂಪದಲ್ಲಿ ಕೊಡಮಾಡಿದ ನಿಮ್ಮ ಪ್ರಯತ್ನ ಶ್ಲಾಘನೀಯ..... ಕನ್ನಡಕ್ಕಾಗಿ ಎತ್ತುವ ಕೈ ಯಾವತ್ತೂ ಬರಿದಾಗದು... ಮತ್ತಷ್ಟು ಇಂತಹ ಕಾರ್ಯಗಳನ್ನು ನಿಮ್ಮಿಂದ ನಿರೀಕ್ಷಿಸುತ್ತೇವೆ. ಹಾಗೂ ಅಗತ್ಯ ಸಹಾಯವನ್ನು ಮಾಡಲು ಸಿದ್ಧರಾಗಿದ್ದೇವೆ..... ಒಳಿತಾಗಲಿ ನಿಮಗೆ
Manjunatha Swamy.M.H ಹೇಳಿದ್ದಾರೆ…
SRIDHAR KR Dhanyavaadagalu sir, nimma prashamseye namage spoorthi.