Commercial

Your Ad Here

Abhay _ Darshan - Yako Eno Yako eno  

Posted by Manjunatha Swamy.M.H in

ಚಿತ್ರ : ಅಭಯ್
ಗಾಯನ: ಸೋನು ನಿಗಮ್
ಸಾಹಿತ್ಯ: ವಿ.ನಾಗೆಂದ್ರ ಪ್ರಸಾದ್
ಸಂಗೀತ: ವಿ.ಹರಿಕ್ರಿಷ್ಣ

ಯಾಕೋ ಏನೋ.... ಯಾಕೋ ಎನೋ...
ಜೊತೆಯಲಿ ಬೆರೆತೆವು ಜಗವನೇ ಮರೆತೆವು
ನನಗೆ ನೀನು ಇನ್ನು ನಿನಗೆ ನಾನು
ನನಗೆ ನೀನು ಇನ್ನು ನಿನಗೆ ನಾನು
ಯಾಕೋ ಏನೋ.... ಯಾಕೋ ಎನೋ...
ಜೊತೆಯಲಿ ಬೆರೆತೆವು ಜಗವನೇ ಮರೆತೆವು
ನನಗೆ ನೀನು ಇನ್ನು ನಿನಗೆ ನಾನು
ನನಗೆ ನೀನು ಇನ್ನು ನಿನಗೆ ನಾನು

ನೀನೆ.. ಮೊದಲ ಹುಡುಗಿಯು ನೀನೆ..
ಕೊನೆಯ ಸನಿಹವು ನೀನೆ....
ಹಗಲುಗನಸಲು ನೀನೆ...ಇರುಳು ನೆನಪಲು
ಅದೇನಾಯ್ತೊ ಕಾಣೇ ನಾನು ಎದೆ ತುಂಬ ನಿನದೇ ಸುದ್ದಿ
ಕೇಳೇ ಜಾಣೆ ಪ್ರೀತಿ ಆಣೇ ಆದೇ ನಾನು ನಿನ್ನ ಬಂಧಿ
ಜೊತೆಗೆ ನೀನು ಇರಲು ಬದುಕು ಜೇನು..
ನನಗೆ ನೀನು ಇನ್ನು ನಿನಗೆ ನಾನು

ಕಣ್ಣಾ.. ಕೊಳದ ಒಳಗಡೆ ನಿನ್ನಾ..
ಅಡಗಿಸಿಡುವೆನು ಚಿನ್ನಾ....
ಜನುಮ ಜನುಮಕು ನನ್ನಾ.. ಬದುಕು ಅರಳಿಸು
ನಾನೇ ನಿನ್ನ ಹ್ರಿದಯದ ಚೋರ ನನ್ನಾ ಆಣೆ ಭಾಷೆ ನೇರ
ನೀನೆ ನನ್ನ ಪ್ರೇಮದ ಸಾರ ನಿನ್ನ ಒಲವೆ ನನಗಾಧಾರ
ಮಿನುಗು ಬಾರೇ ನನ್ನ ಮಿನುಗುತಾರೆ
ನನಗೆ ನೀನು ಇನ್ನು ನಿನಗೆ ನಾನು

ಯಾಕೋ ಏನೋ.... ಯಾಕೋ ಎನೋ...
ಜೊತೆಯಲಿ ಬೆರೆತೆವು ಜಗವನೇ ಮರೆತೆವು
ನನಗೆ ನೀನು ಇನ್ನು ನಿನಗೆ ನಾನು
ನನಗೆ ನೀನು ಇನ್ನು ನಿನಗೆ ನಾನು

Edakallu Guddada mele- Santhosha Aha  

Posted by Manjunatha Swamy.M.H in

ಚಿತ್ರ: ಎಡಕಲ್ಲು ಗುಡ್ಡದ ಮೇಲೆ (೧೯೭೩)
ಸಂಗೀತ: ಎಂ. ರಂಗರಾವ್
ಸಾಹಿತ್ಯ: ವಿಜಯನಾರಸಿಂಹ
ಹಡಿದವರು: ಎಸ್. ಪಿ. ಬಾಲಸುಬ್ರಹ್ಮಣ್ಯಂ, ಪಿ. ಸುಶೀಲ

(ಎಸ್. ಪಿ.)
ಸಂತೋಷ ಅ ಹಾ ಅ ಹಾ, ಸಂಗೀತ ಒಹೊ ಒಹೊ,
ರಸಮಯ ಸಂತೋಷ, ಸುಖಮಯ ಸಂಗೀತ
ಹೊಸ ಹೊಸ ಭಾವತುಂಬಿ ನಸು ನಗೆ ಹೊಮ್ಮಿ ಚಿಮ್ಮಿ, ಮೈ ತುಂಬಿದೇ..ಎಯ್

ಏಳು ಸ್ವರಗಳ ಭಾವಗೀತೆಯ ಸಂಗೀತಾ, ಏಳು ಬಣ್ಣದ ಭೂಮಿ ಧಮನಿಗೆ ಸಂತೂಷ
ರಾಗ ಸಂಗೀತ, ಗೆಲುವಿನ ಯೋಗ ಸಂತೊಷ,
ರಾಗ ಸಂಗೀತ..ಗೆಲುವಿನ ಯೋಗ ಸಂತೊಷ,
ಹಾದಿಗೆಲ್ಲಾ, ಹೂವುಚೆಲ್ಲಿ,
ಹಾದಿಗೆಲ್ಲಾ ಹೂವುಚೆಲ್ಲಿ ಓಡಿಓಡಿ ಸಾಗುವಲ್ಲಿ ಹಾಡಿಹಾಡಿ ಮೂಡಿಬಂತು ಏನೋ ಮೋಡಿ..ಈ

ಸಂತೋಷ ಅಹಾ ಅಹಾ, ಸಂಗೀತ ಎಹೆ ಎಹೆ,
ರಸಮಯ ಸಂತೋಷ ಸುಖಮಯ ಸಂಗೀತ
ಹೊಸ ಹೊಸ ಭಾವತುಂಬಿ ನಸು ನಗೆ ಹೊಮ್ಮಿ ಚಿಮ್ಮಿ, ಮೈ ತುಂಬಿದೇ..ಎಯ್

ಜುಳು ಜುಳು ಹರಿಯುವ ನೀರಿನ ಅಲೆಗಳ ಸಂಗೀತ, ಸುಯಿ ಸುಯಿ ಎನ್ನುತ ಬೀಸುವ ಗಾಳಿಗೆ ಸಂತೊಷ
ಸ್ವರ್ಗ ಸಂಗೀತಾ., ನಿಸರ್ಗ ಸಂತೊಷ., ಸ್ವರ್ಗ ಸಂಗೀತಾ...ನಿಸರ್ಗ ಸಂತೊಷ,
ಸನ್ನೆ ಮಾಡಿ, ಒ ಕಯ್ಯ ಬೀಸಿ,
ಹ ಸನ್ನೆಮಾಡಿ ಕಯ್ಯಬೀಸಿ ಗುಟ್ಟುಹೇಳಿ ಬೆಟ್ಟಸಾಲು ಹಾಡಿಹಾಡಿ ಹೇಳಿಬಂತು, ಏನೋಮೊಡೀ.

(ಪಿ. ಸುಶೀಲ)
ಕದ್ದು ಹಾಡುವ ಕೋಗಿಲೆ ಕೊರಳಿನ ಸಂಗೀತ, ಮುದ್ದು ಜಿಂಕೆಗೆ ಜಿಗಿದು ನೆಗೆಯುವ ಸಂತೊಷ.
ನಾದ ಸಂಗೀತಾ...ಉನ್ಮಾದ ಸಂತೊಷ, ನಾದ ಸಂಗೀತಾ...ಉನ್ಮಾದ ಸಂತೊಷ,
ಗುಬ್ಬಿ ಹಕ್ಕಿ, ಬಾಚಿ ಬಾಚಿ,
ಗುಬ್ಬಿಹಕ್ಕಿ ಬಾಚಿಬಾಚಿ ಹಾಕಿದೆಂದು ಹೊಲದಲ್ಲಿ ಹಾಡಿಹಾಡಿ ಓಡಿಬಂತು ಏನೋಮೊಡೀ.

(ಎಸ್. ಪಿ.)
ಸಂತೋಷ ಅಹಾ ಅಹಾ, ಸಂಗೀತ ಎಹೆ ಎಹೆ
ರಸಮಯ ಸಂತೋಷ ಸುಖಮಯ ಸಂಗೀತ,
ಹೊಸ ಹೊಸ ಭಾವತುಂಬಿ ನಸು ನಗೆ ಹೊಮ್ಮಿ ಚಿಮ್ಮಿ, ಮೈ ತುಂಬಿದೇ..ಎಯ್

chandu - Avala Olava Nage -Avala Moga Sirige  

Posted by Manjunatha Swamy.M.H in

ಅವಳ ಒಲವ ನಗೆ... ಅವಳ ಮೊಗ ಸಿರಿಗೆ......
ಅಂದದ..ಬಿಂದಿಗೆ..

ಅವಳ ಒಲವ ನಗೆ. ಅವಳ ಮೊಗ ಸಿರಿಗೆ. ಅಂದದ ಬಿಂದಿಗೆ...
ಅವಳೊಂದು ಅಮೃತ ಬಿಂದು
ಬರಿ ಬಿಂಕಾನೆ ಅವಳ ಉಡುಗೆ....
ಅವಳ ಒಲವ ನಗೆ. ಅವಳ ಮೊಗ ಸಿರಿಗೆ. ಅಂದದ ಬಿಂದಿಗೆ...
ಅದೇನೋ ಮಿಂಚು ಆ ಕಣ್ಣಲಿ
ಹೆಜ್ಜೆನ ಹಿಂಡು ಸರತಿಯಲಿ
ಓಡಾಡುತಾವೆ ಆ ತುಟಿಯಲಿ
ಆಸೆಗಳಿಗಾಸೆ ಹಾರಿಬಿಡುವ ಹಂಸೆ ತನಗಾರು ಸಾಟಿ ಎಂದು ಎಣಿಸೋ ರತಿ.
ಅವಳ ಒಲವ ನಗೆ. ಅವಳ ಮೊಗ ಸಿರಿಗೆ. ಅಂದದ ಬಿಂದಿಗೆ...
ಅವಳೊಂದು ಅಮೃತ ಬಿಂದು ಬರಿ ಬಿಂಕಾನೆ ಅವಳ ಉಡುಗೆ..
ಹಾಡೋ ರಿಗಂತೂ ಅವಳೇ ಧನಿ
ಬರೆಯೋರಿಗಂತೂ ಬಾರಿ ಗಣಿ
ಆ ಗಣಿಯೆ ನನ್ನೀ ಉಸಿರ ದಣಿ
ಮೋಡಗಳ ಬಾನು ಮಳೆಯಾಗದೆನು ಹಾಳಂತ ಪ್ರೀತಿ ಎಂದು ಹುಸಿಯಾಗದು,
ಅವಳ ಒಲವ ನಗೆ. ಅವಳ ಮೊಗ ಸಿರಿಗೆ. ಅಂದದ ಬಿಂದಿಗೆ...
ಅವಳೊಂದು ಅಮೃತ ಬಿಂದು ಬರಿ ಬಿಂಕಾನೆ ಅವಳ ಉಡುಗೆ,

Nalla- Malage malage Gubbi Mari  

Posted by Manjunatha Swamy.M.H in

ಸಂಗೀತ - ಸಾಹಿತ್ಯ ಡಾ!! ವಿ. ನಾಗೇಂದ್ರ ಪ್ರಸಾದ್
ಹಾಡಿ : ರಾಜೇಶ್ ಕೃಷ್ಣನ್

ಮಲಗೆ ಮಲಗೆ ಗುಬ್ಬಿ ಮರಿ
ಕೊಡಿಸುವೆ ನಿನಗೆ ತುತ್ತೂರಿ
ಮನೆ ದೇವರಾಣೆ ನೆರಳಾಗುತೀನಿ
ಹೆಸರಿಲ್ಲದಿರೋ ಬಂಧುವೇ ಜನುಮಾಂತರದ ಬಂಧವೇ
ಆರಾರೋ ಆರಿರಾರೋ ಆರಾರೋ ಆರಿರಾರೋ
ಆರಾರೋ ಆರಿರಾರೋ ಆರಾರೋ ಆರಿರಾರೋ
ಮಲಗೆ ಮಲಗೆ ಗುಬ್ಬಿ ಮರಿ
ಕೊಡಿಸುವೆ ನಿನಗೆ ತುತ್ತೂರಿ
ಮನೆ ದೇವರಾಣೆ ನೆರಳಾಗುತೀನಿ
ಹೆಸರಿಲ್ಲದಿರೋ ಬಂಧುವೇ ಜನುಮಾಂತರದ ಬಂಧವೇ
ಆರಾರೋ ಆರಿರಾರೋ ಆರಾರೋ ಆರಿರಾರೋ
ಆರಾರೋ ಆರಿರಾರೋ ಆರಾರೋ ಆರಿರಾರೋ
ಆ ಬ್ರಹ್ಮ ತೋಚಿದ್ದು ಗೀಚುತ್ತಾನಮ್ಮ
ಆ ಮರ್ಮ ಬಲ್ಲೋರು ಇಲ್ಲಿ ಯಾರಮ್ಮ
ಇಲ್ಲಿ ಹುಟ್ಟಿದಂತ ನಮಗೆಲ್ಲ ಸ್ವರ್ಗ ಮೇಲಂತೆ
ಮೇಲೆ ಎಲ್ಲೋ ಇರುವ ದೇವರಿಗೆ ಇಲ್ಲಿ ಗುಡಿಯಂತೆ
ಇಲ್ಲಿ ಹುಟ್ಟಿದಂತ ನಮಗೆಲ್ಲ ಸ್ವರ್ಗ ಮೇಲಂತೆ
ಮೇಲೆ ಎಲ್ಲೋ ಇರುವ ದೇವರಿಗೆ ಇಲ್ಲಿ ಗುಡಿಯಂತೆ
ಚಿತ್ರ ವಿಚಿತ್ರ ಕಣೆ ಲೋಕವೇ
ಆರಾರೋ ಆರಿರಾರೋ ಆರಾರೋ ಆರಿರಾರೋ
ಆರಾರೋ ಆರಿರಾರೋ ಆರಾರೋ ಆರಿರಾರೋ
ಮಲಗೆ ಮಲಗೆ ಗುಬ್ಬಿ ಮರಿ
ಕೊಡಿಸುವೆ ನಿನಗೆ ತುತ್ತೂರಿ
ಮನೆ ದೇವರಾಣೆ ನೆರಳಾಗುತೀನಿ
ಬಾಳಲ್ಲಿ ನೋವೆಮ್ಬುದೆಲ್ಲ ಮಾಮೂಲಿ
ನಾವಿಲ್ಲಿ ಗೆಲ್ಲೋದು ನಮ್ಮ ಕೈಯಲ್ಲಿ
ಸಿಹಿ ಕನಸುಗಳು ಬರಲಿ ಎಂದು ಲಾಲಿ ಹಾಡುವೆ
ಈ ಬಡವ ಕೊಟ್ಟ ಕೈಯಲ್ಲಿ ತುತ್ತು ಮರೆಯಬೇಡವೆ
ಸಿಹಿ ಕನಸುಗಳು ಬರಲಿ ಎಂದು ಲಾಲಿ ಹಾಡುವೆ
ಈ ಬಡವ ಕೊಟ್ಟ ಕೈಯಲ್ಲಿ ತುತ್ತು ಮರೆಯಬೇಡವೆ
ಲಾಭಾನ ಕೇಳೋದಿಲ್ಲ ಲಾಲಿ ಎಂದು
ಆರಾರೋ ಆರಿರಾರೋ ಆರಾರೋ ಆರಿರಾರೋ
ಆರಾರೋ ಆರಿರಾರೋ ಆರಾರೋ ಆರಿರಾರೋ
ಮಲಗೆ ಮಲಗೆ ಗುಬ್ಬಿ ಮರಿ
ಕೊಡಿಸುವೆ ನಿನಗೆ ತುತ್ತೂರಿ
ಮನೆ ದೇವರಾಣೆ ನೆರಳಾಗುತೀನಿ
ಹೆಸರಿಲ್ಲದಿರೋ ಬಂಧುವೇ ಜನುಮಾಂತರದ ಬಂಧವೇ
ಆರಾರೋ ಆರಿರಾರೋ ಆರಾರೋ ಆರಿರಾರೋ
ಆರಾರೋ ಆರಿರಾರೋ ಆರಾರೋ ಆರಿರಾರೋ

Manasaare Kanna Haniyondige  

Posted by Manjunatha Swamy.M.H in

ಕಣ್ಣ ಹನಿಯೊ೦ದಿಗೆ ಕೆನ್ನೆ ಮಾತಾಡಿದೆ,
ಕನಸುಗಳು ಕೂತಿವೆ ಏನು ಮಾತಾಡದೆ...
ಮರೆಯದ ನೋವಿಗೆ ಮೆಲ್ಲಗೆ, ಮೆಲ್ಲಗೆ
ನೆನಪುಗಳ ಹಾವಳಿಗೆ ಹೃದಯ ಹಾಳಾಗಿದೆ.

ಕಣ್ಣ ಹನಿಯೊ೦ದಿಗೆ ಕೆನ್ನೆ ಮಾತಾಡಿದೆ,

ಮನದಲಿ ನಿ೦ತಿದೆ, ಕುದಿಯುವ ಭಾವ ನದಿಯೊ೦ದು
ಸುಡುತಿದೆ ವೇದನೆ, ಒಲವಿನ ಕಲ್ಪನೆ ತ೦ಪನು ಬೀರದೆ...
ಬೇಗುದಿಯ ಬಿಡುಗಡೆಗೆ ಹೃದಯ ಹೋರಾಡಿದೆ.

ಕಣ್ಣ ಹನಿಯೊ೦ದಿಗೆ ಕೆನ್ನೆ ಮಾತಾಡಿದೆ,
ಕನಸುಗಳು ಕೂತಿವೆ ಏನು ಮಾತಾಡದೆ...

ಮಿಡಿತದ ಮುನ್ನುಡಿ, ಎದೆಯಲಿ ಗೀಚಿ ನಡೆವರೆಗೂ...
ಉಳಿಯಲಿ ಹೇಗೆನಾ?
ಮನದ ನೀವೇದನೆ ಮೌನವೇ ಕೇಳುನೀ.....
ದಯವಿರಿಸಿ ತುಳಿಯದಿರು ಹೃದಯ ಹೂವಾಗಿದೆ...

ನಿನ್ನ ದನಿ ಕೇಳಿದೆ....ನನ್ನ ನಗು ಕಾಡಿದೆ...
ಸಣ್ಣ ದನಿಯೊ೦ದಿಗೆ...ನನ್ನ ಮನ ಕೂಗಿದೆ...
ನಿನ್ನಯ ಮೌನವೂ....ನನ್ನೆದೆ ಗೀರಲೂ...
ಕನಸುಗಳ ಗಾಯದಿ ಹೃದಯ ಹೋಳಾಗಿದೆ..

ಕಣ್ಣ ಹನಿಯೊ೦ದಿಗೆ ಕೆನ್ನೆ ಮಾತಾಡಿದೆ,
ಕನಸುಗಳು ಸೋತಿವೆ ಏನು ಮಾತಾಡದೆ...
ಮರೆಯದ ನೋವಿಗೆ ಮೆಲ್ಲಗೆ, ಮೆಲ್ಲಗೆ....
ನೆನಪುಗಳ ಹಾವಳಿಗೆ ಹೃದಯ ಹಾಳಾಗಿದೆ.

ಕಣ್ಣ ಹನಿಯೊ೦ದಿಗೆ ಕೆನ್ನೆ ಮಾತಾಡಿದೆ....

Manasaare- Ello Maleyaagide Endu Thangaaliyu  

Posted by Manjunatha Swamy.M.H in

ಚಿತ್ರ:ಮನಸಾರೆ
ಸಾಹಿತ್ಯ: ಜಯಂತ್ ಕಾಯ್ಕಿಣಿ
ಸಂಗೀತ: ಮನೋಮೂರ್ತಿ
ಗಾಯಕ: ಸೋನು ನಿಗಮ್

ಎಲ್ಲೋ ಮಳೆಯಾಗಿದೆಯೆಂದು ತಂಗಾಳಿಯು ಹೇಳುತಿದೆ...
ಇಲ್ಲೇ ಒಲವಾಗಿದೆಯೆಂದು ಕನಸೊಂದು ಬೀಳುತಿದೆ...
ವ್ಯಾಮೋಹವ ಕೇವಲ ಮಾತಿನಲಿ... ಹೇಳಲು ಬರಬಹುದೇ?
ನಿನ್ನ ನೋಡಿದ ಮೇಲೆಯೂ ಪ್ರೀತಿಯಲೀ... ಬೀಳದೆ ಇರಬಹುದೆ?
ಎಲ್ಲೋ ಮಳೆಯಾಗಿದೆಯೆಂದು ತಂಗಾಳಿಯು ಹೇಳುತಿದೆ...

ಕಣ್ಣಲಿ ಮೂಡಿದೆ ಹನಿಗವನ... ಕಾಯಿಸಿ ನೀ ಕಾಡಿದರೆ...
ನೂತನ ಭಾವದ ಆಗಮನ... ನೀ ಬಿಡದೇ... ನೋಡಿದರೇ...
ನಿನ್ನ ಧ್ಯಾನದಿ ನಿನ್ನದೆ ತೋಳಿನಲಿ ಹೀಗೆಯೇ ಇರಬಹುದೇ?
ಈ ಧ್ಯಾನವ ಕಂಡರೆ ದೇವರಿಗೂ ಕೊಪವು ಬರಬಹುದೇ?
ಎಲ್ಲೋ ಮಳೆಯಾಗಿದೆಯೆಂದು ತಂಗಾಳಿಯು ಹೇಳುತಿದೆ...
ಇಲ್ಲೇ ಒಲವಾಗಿದೆಯೆಂದು ಕನಸೊಂದು ಬೀಳುತಿದೆ...

ನೆನಪಿನ ಹೂಗಳ ಬೀಸಣಿಕೆ ನೀ ಬರುವ ದಾರಿಯಲಿ...
ಓಡಿದೆ ದೂರಕೆ ಬೀಸಲಿಕೆ ನೀನಿರುವ ಊರಿನಲಿ...
ಅನುಮಾನವೇ ಇಲ್ಲದೆ ಕನಸಿನಲಿ ಮೆಲ್ಲಗೆ ಬರಬಹುದೇ?
ಅಲೆಮಾರಿಯ ಹೃದಯದ ಡೇರೆಯಲಿ ನೀನು ಇರಬಹುದೇ?

ಎಲ್ಲೋ ಮಳೆಯಾಗಿದೆಯೆಂದು ತಂಗಾಳಿಯು ಹೇಳುತಿದೆ...
ಇಲ್ಲೇ ಒಲವಾಗಿದೆಯೆಂದು ಕನಸೊಂದು ಬೀಳುತಿದೆ...
ವ್ಯಾಮೋಹವ ಕೇವಲ ಮಾತಿನಲಿ... ಹೇಳಲು ಬರಬಹುದೇ?
ನಿನ್ನ ನೋಡಿದ ಮೇಲೆಯೂ ಪ್ರೀತಿಯಲೀ... ಬೀಳದೆ ಇರಬಹುದೆ?
ಎಲ್ಲೋ ಮಳೆಯಾಗಿದೆಯೆಂದು ತಂಗಾಳಿಯು ಹೇಳುತಿದೆ...

Baa Nodu Gelathi Neene Bari Neene  

Posted by Manjunatha Swamy.M.H in

ಬಾ ನೋಡು ಗೆಳತೀ ನವಿಲು ಗರಿಯು ಮರಿ ಹಾಕಿದೇ
ಕಣ್ಣಾ ಮುಚ್ಚಾಲೆ ಆಡುತಾ... ಅಡಗೀ ನೀನೆಲ್ಲೊ ಹೋದೆಯಾ..
ನಾ ಅರಸುತಿರುವೆನು .. ಇನ್ನೂ.. ನೀ ಕಾಣಲಾರೆಯಾ ||ಪ||

ನಾನು ನೀನು ಸೇರಿ ತಿ೦ದ ಬೋರೆಹಣ್ಣು ಎಲ್ಲಿದೇ
ಕದ್ದು ಹಚ್ಚಿಕೊ೦ಡ ಸ್ವಾದ ಹಾಗೆ ಇನ್ನು ಇಲ್ಲಿದೆ
ಲ೦ಗದಲ್ಲಿ ಹೆಕ್ಕಿ ತ೦ದ ಪಾರಿಜಾತ ಚೆಲ್ಲಿದೆ
ಬಾ ಹೊಳೆಯ ತು೦ಬಾ ಹನಿವ ಮಳೆಯಾ ದನಿ ಮೂಡಿದೆ || ೧ ||

ನಾನು ನೀನು ಸೇರಿ ಕ೦ಡ ತೇರು ಅಲ್ಲಿ ನಿ೦ತಿದೆ
ಊರ ಜಾತ್ರೆಯಲ್ಲಿ ಈಗ ಬೇರೆ ವೇಶ ಬ೦ದಿದೆ
ನೀನು ಬೇಕು ಎ೦ದ ಹೂವು ಜೇಬಿನಲ್ಲೆ ಕು೦ತಿದೆ
ಈ ಅಲೆವ ಮನಕೆ .. ನಿನ್ನ ನೆನಪು ಅತಿಯಾಗಿದೆ || ೨ ||

Followers

Chitika

Get Chitika Premium

B

Sitemeter

Posts