ಚಿತ್ರ: ನಾಗರ ಹಾವು (೧೯೭೨)
ಗಾಯಕರು: ಪಿ.ಬಿ. ಶ್ರೀನಿವಾಸ್
ರಚನೆ: ವಿಜಯ ನಾರಸಿಂಹ
ಸಂಗೀತ: ವಿಜಯ ಭಾಸ್ಕರ್
---------------------------------
ಬಾರೆ ಬಾರೆ ಚೆಂದದ ಚೆಲುವಿನ ತಾರೆ
ಬಾರೆ ಬಾರೆ ಒಲವಿನ ಚಿಲುಮೆಯ ಧಾರೆ ||

ಕಣ್ಣಿನ ಸನ್ನೆಯ ಸ್ವಾಗತ ಮರೆಯಲಾರೆ
ಚೆನ್ದುಟಿ ಮೇಲಿನ ಹೂನಗೆ ಮರೆಯಲಾರೆ
ಅಂದದ ಹೆಣ್ಣಿನ ನಾಚಿಕೆ ಮರೆಯಲಾರೆ
ಮೌನ ಗೌರಿಯ ಮೋಹದ ಕೈ ಬಿಡಲಾರೆ ||

ಬಾರೇ ಬಾರೇ
ಚೆಂದದ ಚೆಲುವಿನ ತಾರೆ
ಒಲವಿನ ಚಿಲುಮೆಯ ಧಾರೆ ||

ಬಾರೆ ಬಾರೆ ಚೆಂದದ ಚೆಲುವಿನ ತಾರೆ
ಬಾರೆ ಬಾರೆ ಒಲವಿನ ಚಿಲುಮೆಯ ಧಾರೆ ||

ಕೈಬಳೆ ನಾದದ ಗುಂಗನು ಅಳಿಸಲಾರೆ
ಮೈಮನ ಸೋಲುವ ಮತ್ತನು ಮರೆಯಲಾರೆ
ರೂಪಸಿ ರಂಭೆಯ ಸಂಗವ ತೊರೆಯಲಾರೆ
ಮೌನ ಗೌರಿಯ ಮೋಹದ ಕೈ ಬಿಡಲಾರೆ ||

ಬಾರೇ ಬಾರೇ
ಚೆಂದದ ಚೆಲುವಿನ ತಾರೆ
ಒಲವಿನ ಚಿಲುಮೆಯ ಧಾರೆ ||
__________________