Yaava kaviyu bareyalaara -ಯಾವ ಕವಿಯು ಬರೆಯಲಾರ Lyrics Bhagyada Lakshmi Baramma 1986

ಚಿತ್ರ :  ಭಾಗ್ಯದ ಲಕ್ಷ್ಮಿ ಬಾರಮ್ಮ 
ನಿರ್ದೇಶನ: ಸಿಂಗೀತಂ ಶ್ರೀನಿವಾಸ ರಾವ್ 
ಸಂಗೀತ: ಸಿಂಗೀತಂ ಶ್ರೀನಿವಾಸ ರಾವ್ 
ಸಾಹಿತ್ಯ: ಚಿ ಉದಯಶಂಕರ್ 
ಗಾಯನ: ಡಾ|| ರಾಜ್ ಕುಮಾರ್
Bhagyada lakshmi baramma
ಯಾವ ಕವಿಯು  - ಭಾಗ್ಯದ ಲಕ್ಷ್ಮಿ ಬಾರಮ್ಮ 

 ಯಾವ ಕವಿಯು ಬರೆಯಲಾರ 
ಒಲವಿನಿಂದ ಕಣ್ಣೋಟದಿಂದ , 
 ಹೃದಯದಲ್ಲಿ ನೀ ಬರೆದ ಈ ಪ್ರೇಮ ಗೀತೆಯ 
।। ಯಾವ ।।


ನಿನ್ನ ಕವಿತೆ ಎಂಥ ಕವಿತೆ 
ರಸಿಕರಾಡೋ ನುಡಿಗಳಂತೆ ।೨।
ಮಲ್ಲೆ ಹೂವು ಅರಳಿದಂತೆ , ಚಂದ್ರಕಾಂತಿ ಚೆಲ್ಲಿದಂತೆ 
ಜೀವ ಜೀವ ಅರಿತು ಬೆರೆತು ಸುಖವ ಕಾಣುವಂತೆ 
।। ಯಾವ ।।

ಪ್ರೇಮ ಸುಮವು ಅರಳುವಂತೆ , 
ಪ್ರಣಯ ಗಂಧ ಚೆಲ್ಲುವಂತೆ 
ಕಂಗಳೆರಡೂ ದುಂಬಿಯಾಗಿ 
ಭ್ರಮರ ಗೀತೆ ಹಾಡುವಂತೆ ।೨।
ಜೇನಿಗಾಗಿ ತುಟಿಗಳೆರಡೂ ಸನಿಹ ಸೇರುವಂತೆ .. 
।। ಯಾವ ।।

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು