SRI MANJUNATHA - ANANDA PARAMANANDA

ಆನಂದ.. ಪರಮಾನಂದ.... ಪರಮಾನಂದ....ll
ತಾಯಿ ತಂದ ಜನುಮದಿಂದ ಜನುಮಾನಂದ...
ಗುರುವು ತಂದ ಪುಣ್ಯದಿಂದ ಜಗದಾನಂದಾ.....
ನಿಸರಿ ಸರಿಗ....ಮಮರಿಸ ನಿಸರಿಸ ದನಿಪಮ ಗಮರಿಸ.... ಆನಂದಾ ಪರಮಾನಂದ...11ಪll

ಬಾಳಿನ ಜೊತೆಬಂದ ಸಕಲಕೂ ಸಮನಾದ ಮಡದಿಯ ನೆರಳಿಂದ ಧರ್ಮಾನಂದ...
ಹ್ರದಯದ ನೋವನ್ನು..ಪ್ರೀತಿಯ ಸುಧೆ ಮಾಡಿ ನಾಲ್ವರ ನಗಿಸುವುದೆ ಭವ್ಯಾನಂದ...
ಬೆಲ್ಲದ ಕಣದೊಳಗೆ ಬೇವಿನ ಎಲೆಯಿರುವ......
ಬೆಲ್ಲದ ಕಣದೊಳಗೆ ಬೇವಿನ ಎಲೆಯಿರುವ ಬಾಳು ತಂದ ಹಬ್ಬದಿಂದ ಬ್ರಹ್ಮಾನಂದ...
ಗುರುವು ತಂದ ಪುಣ್ಯದಿಂದ ಜನುಮಾನಂದ..
ನಿಸರಿ ಸರಿಗ....ಮಮರಿಸ ನಿಸರಿಸ ದನಿಪಮ ಗಮರಿಸ.... ಆನಂದಾ ಪರಮಾನಂದ...11ಪll

ವಂಶದ ಲತೆಯಲ್ಲಿ ವಂಶದ ಸುಮವಾಗಿ ಅರಳುವ ಮಗನಿಂದ ಮಧುರಾನಂದ...
ಬೆಳೆಯುವ ಶಶಿಯಂತೆ ಮಗನು ಮೆರೆದಾಗ ಹೆತ್ತವರೊಡಲಲ್ಲಿ ಸ್ವರ್ಗಾನಂದ...
ದಾನ.. ಧರ್ಮಗಳ ಬಲದಲ್ಲಿ ಆ ಮಗನು.....
ದಾನ... ಧರ್ಮಗಳ ಬಲದಲ್ಲೇ.. ಆ ಮಗನು ನೂರು ಕಾಲ ಬಾಳಿದಾಗ ಪುಣ್ಯಾನಂದ...
ನಾವು ತಂದ ಪುಣ್ಯದಲ್ಲೆ ನಮಗಾನಂದ..
ನಿಸರಿ ಸರಿಗ....ಮಮರಿಸ ನಿಸರಿಸ ದನಿಪಮ ಗಮರಿಸ.... ಆನಂದಾ ಪರಮಾನಂದ...11ಪll

ಕಾಮೆಂಟ್‌‌ ಪೋಸ್ಟ್‌ ಮಾಡಿ

2 ಕಾಮೆಂಟ್‌ಗಳು

Akash song ಹೇಳಿದ್ದಾರೆ…
Nice song singing f SPB and lyric and music Hansaleka