Kallarali Hoovaagi(2006) - Bhoomi e bhoomi melee naadu by Hamsalekha

ಭೂಮಿ ಈ ಭೂಮಿ ಮೇಲೆ
ನಾಡು ಈ ನಾಡಲೆಮ್ಮ
ಕೋಟೆ ಈ ಕೋಟೆಗೆ ನೀನೆ ತಾಯಿ
ನವ ನವ ನವರಾತ್ರಿ
ಅಕ್ಕರೆಯ ಹಾಡ ತಂದಳು ದುರ್ಗೆ
ದಿಗ್ ದಿಗ್ ದಿಗ್ ಥೈ ದಿಗ್ ದಿಗ್ ದಿಗ್ ಥೈ
ಉಚ್ಚಂಗವ್ವ ದಿಗ್ ದಿಗ್ ಥೈ ಏಕನಾಥಿ ದಿಗ್ ದಿಗ್ ಥೈ
ಅಮ್ಮನಕ್ಕರೆಯಿಂದ ನಾಡು
ಈ ನಾಡಿನಕ್ಕರೆಯಿಂದ ನುಡಿಯು
ಈ ನುಡಿಯಕ್ಕರೆಯಿಂದ ಅರಿವು
ಈ ಅರಿವೆನಕ್ಕರೆಯಿಂದ ಶಿವನು
ಆ ಶಿವನು ತಂದ ಅಕ್ಕರೆಯ ವನವೇ ಕಂಡ್ಯ ಗೆಳೆತನ
ಆ ಗೆಳೆಯರಿತ್ತ ಅಕ್ಕರೆಯ ಒಲವೆ ಕಂಡ್ಯ ಜೀವನ
ಜೀವನಕ್ಕೆ ನಲ್ಮೆಯ ಸಂಗಾತಿ ದಿಗ್ ಥೈ ಥೈಥೈ
ಸಂಗಾತಿಗೆ ಸಂಪಿಗೆ ಹೂವಂತೆ ದೀಗ್ ದೀಗ್ ದೀಗ್ ದೀಗ್ ಥೈ
ಭೂಮಿ ಈ ಭೂಮಿ ಮೇಲೆ
ನಾಡು ಈ ನಾಡಲೆಮ್ಮ
ಕೋಟೆ ಈ ಕೋಟೆಗೆ ನೀನೆ ತಾಯಿ
ದಿಗ್ ದಿಗ್ ದಿಗ್ ಥೈ ದಿಗ್ ದಿಗ್ ದಿಗ್ ಥೈ
ಉಚ್ಚಂಗವ್ವ ದಿಗ್ ದಿಗ್ ಥೈ ಏಕನಾಥಿ ದಿಗ್ ದಿಗ್ ಥೈ
ತಾಯ ಪಾದಕೆ ಇದು ಬಲೆ ಇಷ್ಟ
ಆ ಪಾದ ಥೈ ಥೈ ಅಂದರೆ ಸುರಗಣ
ಆ ಸುರಗಣದ ಕೈಗಳು ಕೋಟಿ
ಆ ಕೋಟಿ ಆಯುಧ ಕುಣಿವವೋ ಎದ್ದು
ಹಾಆ ಇನ್ನು ಎದ್ದು ಹೊರಟರೆ ತಾಯಿ ರಕ್ಕಸರಿಗೆ ಯಮಘಂಡ
ಈ.... ಧರ್ಮದೊಟ್ಟೆ ಉರಿಸಿದರೆ ಕೇಳುತಾಳೆ ತಲೆದಂಡ
ಧರಣಿಗೆಲ್ಲ ಸಿಂಹದ ನಾಲಿಗೆಯ ದಿಗ್ ಥೈ ಥೈಥೈ
ಹಾಸಿ ಕೊಳೆವಳು ರಕ್ತದ ಮೈಲಿಗೆಯ ದೀಗ್ ದೀಗ್ ದೀಗ್ ದೀಗ್ ಥೈ
ಭೂಮಿ ಈ ಭೂಮಿ ಮೇಲೆ
ನಾಡು ಈ ನಾಡಲೆಮ್ಮ
ಕೋಟೆ ಈ ಕೋಟೆಗೆ ನೀನೆ ತಾಯಿ
ನವ ನವ ನವರಾತ್ರಿ
ಅಕ್ಕರೆಯ ಹಾಡ ತಂದಳು ದುರ್ಗೆ
ದಿಗ್ ದಿಗ್ ದಿಗ್ ಥೈ ದಿಗ್ ದಿಗ್ ದಿಗ್ ಥೈ
ಉಚ್ಚಂಗವ್ವ ದಿಗ್ ದಿಗ್ ಥೈ ಏಕನಾಥಿ ದಿಗ್ ದಿಗ್ ಥೈ

ಕಾಮೆಂಟ್‌‌ ಪೋಸ್ಟ್‌ ಮಾಡಿ

1 ಕಾಮೆಂಟ್‌ಗಳು

ಅನಾಮಧೇಯಹೇಳಿದ್ದಾರೆ…
It's just super.......