mathhe Mungaaru (2010) - Kangalu Kanalide kaaneya

ಚಿತ್ರ: ಮತ್ತೆ ಮುಂಗಾರು [೨೦೧೦]

ಸಂಗೀತ: X Paul Raj

ಸಾಹಿತ್ಯ: ವಿ. ನಾಗೇಂದ್ರ ಪ್ರಸಾದ್



ಕಂಗಳು ಕನಲಿದೆ ಕಾಣೆಯ ಸಖಿ ನೀನು

ಕಣ್ಣಲಿ ಕಾಣುವ ಕಾತುರ ತಿಳಿ ನೀನು

ಕಂಬನಿ ಕಡಲಲಿ ಕರಗಿದೇ ಧುಮುಕಿ

ಹುಡುಕದೆ ಕಾರಣ ಮನ್ನಿಸೇ ಹುಡುಗಿ

ಒಮ್ಮೆ ನೀ ಕಾಣಿಸೇ ತೀರದಿ ಕೈ ಬೀಸಿ



ನಿನ್ನೆಯ ನೆನಪದು ನನ್ನುಸಿರನು ಬಿಗಿಯುತಿದೆ

ಸುಳಿವನೆ ನೀಡದೆ ಸುಳಿಯಲಿ ಸಿಲುಕಿಸಿದೆ

ಮನಸಿಗೆ ಮುಜುಗರ ತಂದಿತಾ ಅವಸರ

ಇನ್ನೆಂದು ನಿನ್ನ ಮನಸನು ಘಾಸಿ ಮಾಡೆನೆ

ಇನ್ನೆಂದು ದಾವಂತ ಬೇಡಮ್ಮ

ಸಂಗಾತಿ ಈ ದೂರ ಬೇಡಾ



ಬರುವೆ ನಾ ತೀರಕೆ ನಿನ್ನನೂ ಅರಸಿ

ಬರುವೆಯ ದುಗುಡದ ಬೇಲಿಯಾ ಸರಿಸಿ



ಕಂಗಳು ಕನಲಿದೆ ಕಾಣೆಯ ಸಖಿ ನೀನು

ಕಣ್ಣಲಿ ಕಾಣುವ ಕಾತುರ ತಿಳಿ ನೀನು

ಕಂಬನಿ ಕಡಲಲಿ ಕರಗಿದೇ ಧುಮುಕಿ

ಹುಡುಕದೆ ಕಾರಣ ಮನ್ನಿಸೇ ಹುಡುಗೀ...



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು