Sri Manjunatha - Thanuvina Manege Baa

ಬಾಳೆಲೆಯಲೀ....ಪ್ರಾಣ ಬಡಿಸಿದೆ...
ಉಣ ಬಾರೋ ಜವರಾಯಾ....ಈಶ್ವರ...
ತನುವಿನ ಮನೆಗೆ ಬಾ ಅತಿಥಿ..ಬಾ ಅತಿಥಿ..ಬಾ ಅತಿಥಿ
ತನುವಿನ ಮನೆಗೆ ಬಾ ಅತಿಥಿ..ಬಾ ಅತಿಥಿ..ಬಾ ಅತಿಥಿ
ಆತ್ಮನ ರುಚಿಗೆ..ಬಾ..ಅತಿಥಿ..
ಒಲೆಯ ದೇಹ ಕೆಲವು ಸೌದೆ
ಹೃದಯ ಪಾತ್ರೆ ನೆತ್ತರೊಡನೆ ಆತ್ಮ ದಿನಸಿ...
ತಾನೇ ಕುದಿದು ತಾನೇ ಉಕ್ಕಿ
ತಾನೇ ಬಸಿದು ತಾನೇ ಆದ ಆತ್ಮ ಭಕ್ಷ್ಯ...
ಉಂಡರೆ ತೇಗುವೆ ಶಿವನೆದೆ ಸಾಗುವೆ..
ಬಾಲೆಳೆಯಲಿ..ಪ್ರಾಣ ಬಿಸಿಯಿದೆ...
ಉಣ ಬಾರೋ ಜವರಾಯ....ಹರ..
ತನುವಿನ ಮನೆಗೆ ಬಾ ಅತಿಥಿ..ಬಾ ಅತಿಥಿ..ಬಾ ಅತಿಥಿ
ಆತ್ಮನ ರುಚಿಗೆ...ಬಾ ಅತಿಥಿ...
ಬಂಧ ಕಿತ್ತು ಭಕ್ತಿಯಿತ್ತು
ಬಂದನಂತೆ ಬುಜದಿ ಹೊತ್ತು ಹೋಗು ತಂದೆ..
ಪಾಪ ಪುಣ್ಯ ಲೆಕ್ಕ ನೋಡಿ
ಶೂನ್ಯದಲ್ಲಿ ಬೆಳೆಯ ನೀಡಿ ಹರಸು ತಂದೆ.
ಲಾಲಿಯ ರೂಪವೇ ಪಾಶದ ವೇಷವೆ..
ಬಾಲೆಳೆಯಲಿ...ಪ್ರಾಣ ಬಡಬಡಿಸಿದೆ...
ಉಣ ಬಾರೋ ಜವರಾಯ.....ಶಂಕರ....
ತನುವಿನ ಮನೆಗೆ ಬಾ ಅತಿಥಿ..ಬಾ ಅತಿಥಿ..ಬಾ ಅತಿಥಿ
ತನುವಿನ ಮನೆಗೆ ಬಾ ಅತಿಥಿ..ಬಾ ಅತಿಥಿ..ಬಾ ಅತಿಥಿ
ಆತ್ಮನ ರುಚಿಗೆ...ಹ್ಹ್ ಹ್ಹ್..ಬಾ ಅತಿಥಿ...

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು