LYRICS OF PARICHAYA KANNADA MOVIE

ನಡೆದಾಡುವ ಕಾಮನಬಿಲ್ಲು


ನಡೆದಾಡುವ ಕಾಮನಬಿಲ್ಲು - ಪರಿಚಯ(೨೦೦೯)
ಗಾಯಕರು : ಕೇಕೆ, ರಾಜಲಕ್ಷ್ಮಿ
ಸಾಹಿತ್ಯ : ಕವಿರಾಜ್

ನಡೆದಾಡುವಾ ಕಾಮನ ಬಿಲ್ಲು,
ಉಸಿರಾಡುವಾ ಗೊಂಬೆಯೂ ಇವಳು,
ಸಿಗಲಾರಳು ಹೋಲಿಕೆ ಗಿವಳು,
ಏನೆಂದರು ಸುಂದರ ಸುಳ್ಳು..!!

ನಡೆದಾಡುವಾ ಕಾಮನ ಬಿಲ್ಲು,
ಉಸಿರಾಡುವಾ ಗೊಂಬೆಯೂ ಇವಳು,
ಸಿಗಲಾರಳು ಹೋಲಿಕೆ ಗಿವಳು,
ಏನೆಂದರು ಸುಂದರ ಸುಳ್ಳು..!!

ನಡೆದಾಡುವಾ ಕಾಮನ ಬಿಲ್ಲು.....

ನಕ್ಕರೆ ಸೇರಿದ ಹಾಗೆ, ಸಾವಿರ ಶುಭಶಕುನ..
ಮಾತಿನ ಲಹರಿಯೇ ಒಂದು, ಸುಂದರ ಸವಿಗಾನ..
ನಕ್ಕರೆ ಸೇರಿದ ಹಾಗೆ, ಸಾವಿರ ಶುಭಶಕುನ..
ಮಾತಿನ ಲಹರಿಯೇ ಒಂದು, ಸುಂದರ ಸವಿಗಾನ..
ಬೆಳ್ಳಿಮೋಡ ಇವಳ ಮನಸ್ಸು ಮನಸ್ಸು,
ಮಿಂಚುಬಳ್ಳಿ ಅಂದದ ಮುನಿಸೂ..
ಸ್ವರ್ಗದಲ್ಲೂ ಇರದ ಸೊಗಸು ಸೊಗಸು..
ಮಾರುತ್ತಾಳೆ ಮಾಯದ ಕನಸು..
ಪದೇ ಪದೇ ಪದೇ ಪದೇ ಅರೆರೆ..,
ಮರುಳಾದೆ ನೋಡಿ, ಇವಳೆಂತಾ ಮೋಡಿ..!!!

ನಡೆದಾಡುವಾ ಕಾಮನ ಬಿಲ್ಲು,
ಉಸಿರಾಡುವಾ ಗೊಂಬೆಯೂ ಇವಳು..,

ದೀಪದ ಕಣ್ಣುಗಳಲ್ಲಿ, ಹುಣ್ಣಿಮೆ ಪ್ರತಿ ಕ್ಷಣವೂ,
ಕೆನ್ನೆಯ ದಿನ್ನೆಗಳಲ್ಲಿ, ಮುಗಿಯದ ಮುಂಜಾವು..,
ದೀಪದ ಕಣ್ಣುಗಳಲ್ಲಿ, ಹುಣ್ಣಿಮೆ ಪ್ರತಿ ಕ್ಷಣವೂ,
ಕೆನ್ನೆಯ ದಿನ್ನೆಗಳಲ್ಲಿ, ಮುಗಿಯದ ಮುಂಜಾವು..,
ಹೆಜ್ಜೆಹಾಕು ಇವಳ ಲಯಕೆ ಲಯಕ್ಕೆ, ಭೂಮಿಗುನು ಪುಳಕದ ಜಳಕ,
ಬಾನಿನಿಂದ ಕೆಳಗೆ ಇಣುಕಿ ಇಣುಕಿ, ದೇವರಿಗೂ ನೋಡುವ ತವಕ..
ಸವಿ ಸವಿ ಸವಿ ಸವಿ ಅಹ್ಹಾ.. ಈ ಹುಡುಗಿ ಜೇನು, ಶರಣಾದೆ ನಾನು..!!!

ನಡೆದಾಡುವಾ ಕಾಮನ ಬಿಲ್ಲು,
ಉಸಿರಾಡುವಾ ಗೊಂಬೆಯೂ ಇವಳು,
ಸಿಗಲಾರಳು ಹೋಲಿಕೆ ಗಿವಳು,
ಏನೆಂದರು ಸುಂದರ ಸುಳ್ಳು..!!
ನಡೆದಾಡುವಾ ಕಾಮನ ಬಿಲ್ಲು...,



ಕುಡಿನೋಟವೇ ಮನಮೋಹಕ - ಪರಿಚಯ(೨೦೦೯)
ಗಾಯಕರು : ಶಾನ್, ಶ್ರೇಯ ಗೋಶಲ್
ಸಾಹಿತ್ಯ : ಜಯಂತ್ ಕೈಕಿಣಿ

ಹೆಣ್ಣು : ಕುಡಿನೋಟವೇ.. ಮನಮೋಹಕ.. ಒಡನಾಟವೇ.. ಬಲು ರೋಚಕ..
ಗಂಡು : ಹುಡುಕಾಟವೇ.. ರೋಮಾಂಚಕ.. ಕುಡಿನೋಟವೇ.. ಮನಮೋಹಕ.. ಒಡನಾಟವೇ..
ಹೆಣ್ಣು : ಬಲು ರೋಚಕ..

ಹೆಣ್ಣು : ನೀ ಬಂದು ಹೋದ ಜಾಗ ಉಸಿರಾಡಿದೆ ಉಸಿರಾಡಿದೆ..
ಗಂಡು : ಬೆರಳೆಲ್ಲ ಓಲೆ ಗೀಚಿ.. ಮಸಿಯಾಗಿದೆ.. ಮಸಿಯಾಗಿದೆ..
ಹೆಣ್ಣು : ಕನಸ್ಸೊಂದು ಕುಲುಕುತ ಕೈಯಾ.. ತುಸು ದೂರ ಚಲಿಸಿದೆಯಲ್ಲ..!
ಗಂಡು : ಮನವೀಗ ಮರೆಯುತ ಮೈಯ್ಯ. ಗುರುತನ್ನೇ ಅರಸಿದೆಯೆಲ್ಲ..
ಹೆಣ್ಣು : ನಿನ್ನ ಕಂಡಾಗಲೇ ಜೀವಲೋಕ ..!!
ಗಂಡು : ಕುಡಿನೋಟವೇ.. ಮನಮೋಹಕ.. ಒಡನಾಟವೇ.. ಬಲು ರೋಚಕ..

ಹೆಣ್ಣು : ಅನುರಾಗಕ್ಕೀಗ ಮಾತೆ ಮಿತಿಯಾಗಿದೆ ಮಿತಿಯಾಗಿದೆ..
ಗಂಡು : ಜೊತೆಯಾದ ಮೇಲೆ ಪ್ರೀತಿ ಅತಿಯಾಗಿದೆ ಅತಿಯಾಗಿದೆ..
ಹೆಣ್ಣು : ಮರೆಮಾಚಿ ಕರೆಯಲು ನೀನು.. ಮನಸಾರೆ ಪರವಾಶ ನಾನು..
ಗಂಡು : ನೆನಪಾಗಿ ಸುಳಿಯಲು ನೀನು.. ನವಿರಾದ ಪರಿಮಳ ವೇನು..?
ಹೆಣ್ಣು : ನೀನೆ... ಈ ಜೀವದ ಭಾವಲೋಕ..
ಗಂಡು : ಕುಡಿನೋಟವೇ.. ಮನಮೋಹಕ..
ಹೆಣ್ಣು : ಒಡನಾಟವೇ.. ಬಲು ರೋಚಕ..
ಹೆಣ್ಣು : ಹುಡುಕಾಟವೇ..
ಗಂಡು : ರೋಮಾಂಚಕ..


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು