Lyrics of ABHAY



ಚಿತ್ರ: ಅಭಯ್
ಸಾಹಿತ್ಯ: ವಿ ನಾಗೇಂದ್ರ ಪ್ರಸಾದ್
ಸಂಗೀತ: ವಿ ಹರಿಕೃಷ್ಣ
ಗಾಯಕ: ಸೋನು ನಿಗಮ್

ಯಾಕೋ ಏನೋ... ಯಾಕೋ ಏನೋ...
ಜೊತೆಯಲೀ... ಬೆರೆತೆವೂ...
ಜಗವನೇ... ಮರೆತೆವೂ...
ನನಗೆ ನೀನೂ ಇನ್ನೂ ನಿನಗೆ ನಾನೂ...
ನನಗೆ ನೀನೂ ಇನ್ನೂ ನಿನಗೆ ನಾನೂ...

ಯಾಕೋ ಏನೋ... ಯಾಕೋ ಏನೋ...
ಜೊತೆಯಲೀ... ಬೆರೆತೆವೂ...
ಜಗವನೇ... ಮರೆತೆವೂ...
ನನಗೆ ನೀನೂ ಇನ್ನೂ ನಿನಗೆ ನಾನೂ...
ನನಗೆ ನೀನೂ ಇನ್ನೂ ನಿನಗೆ ನಾನೂ...

ನೀನೇ... ಮೊದಲ ಹುಡುಗಿಯೂ...
ನೀನೇ.. ಕೊನೆಯ ಸನಿಹವೂ...
ನೀನೇ.. ಹಗಲುಗನಸಲೂ...
ನೀನೇ...ಇರುಳು ನೆನಪಲೂ...
ಅದೇನಾಯ್ತು ಕಾಣೇ ನಾನೂ
ಎದೆ ತುಂಬಾ ನಿನದೇ ಸುದ್ದಿ...
ಕೇಳೆ ಜಾಣೆ ಪ್ರೀತಿ ಆಣೆ...
ಅದೇ ನಾನು ನಿನ್ನ ಬಂಧಿ...
ಜೊತೆಗೆ ನೀನು ಇರಲು ಬದುಕು ಜೇನು...
ನನಗೆ ನೀನೂ ಇನ್ನೂ ನಿನಗೆ ನಾನೂ...

ಕಣ್ಣಾ... ಕೊಳದ ಒಳಗಡೆ...
ನಿನ್ನಾ...ಅಡಗಿಡಿಸುವೆನು
ಚಿನ್ನಾ...ಜನುಮಜನುಮಕೂ...
ನನ್ನಾ... ಬದುಕು ಅರಳಿಸು
ನಾನೇ ನಿನ್ನ ಹೃದಯದ ಚೋರಾ
ನನ್ನ ಆಣೆ ಭಾಷೆ ನೇರಾ....
ನೀನೆ ನನ್ನ ಪ್ರೇಮದ ಸಾರಾ...
ನಿನ್ನಾ ಒಲವೇ ನನಗಾಧರಾ..
ಮಿನುಗು ಬಾರೆ ನನ್ನ ಮಿನುಗು ತಾರೆ...
ನನಗೆ ನೀನೂ ಇನ್ನೂ ನಿನಗೆ ನಾನೂ...

ಯಾಕೋ ಏನೋ... ಯಾಕೋ ಏನೋ...
ಜೊತೆಯಲೀ... ಬೆರೆತೆವೂ...
ಜಗವನೇ... ಮರೆತೆವೂ...
ನನಗೆ ನೀನೂ ಇನ್ನೂ ನಿನಗೆ ನಾನೂ...
ನನಗೆ ನೀನೂ ಇನ್ನೂ ನಿನಗೆ ನಾನೂ...



ಚಿತ್ರ: ಅಭಯ್
ಸಾಹಿತ್ಯ:ಜಯಂತ್ ಕಾಯ್ಕಿಣಿ
ಸಂಗೀತ: ವಿ ಹರಿಕೃಷ್ಣ
ಗಾಯಕಿ: ಸುನಿತಾ ಗೋಪರಾಜು

ಬಾನು ಕೆಂಪಾದಂತೆ ಗಾಳಿ ಇಂಪಾದಂತೆ...
ತಾಜಾ ಅನುರಾಗ ಶುರುವಾಗುವ ಲಕ್ಷಣವೇ?
ನೀನು ನೆನಪಾದಂತೆ ಜೀವ ನವಿರಾದಂತೆ
ತಾಜಾ ಅನುರಾಗ ಶುರುವಾಗುವ ಲಕ್ಷಣವೇ?
ಅತಿಯಾಗಿ ಸುಳಿವಂತ ಹಿತವಾಗಿ ಕಾಡುವಂತ ಆತಂಕವಾದಿಯೇ...
ನಿನಗಾಗಿ ಕಾಯುವೆ...
ಬಾನು ಕೆಂಪಾದಂತೆ ಗಾಳಿ ಇಂಪಾದಂತೆ
ತಾಜಾ ಅನುರಾಗ ಶುರುವಾಗುವ ಲಕ್ಷಣವೇ?

ಕಳೆದು ಹೋದೆ ನೋಡು ಹೇಗೆ ನಿನ್ನ ಧ್ಯಾನದಲ್ಲಿ ನಾನು
ಕನಸಿನಲ್ಲಿ ನನ್ನ ಹೀಗೆ ಎಳೆದುಕೊಂಡು ಹೋಗು ನೀನು
ಇನ್ನು ಚೂರೆ ಕಾಯಿಸು ಬಂದು ಚಂದ ಕಾಣಿಸು...
ಮಿತಿಮೀರಿ ಹಚ್ಚಿಕೊಂಡು ಬಲವಾಗಿ ಮೆಚ್ಚಿಕೊಂಡು
ಮನಸ್ಸೊಂದೆ ಆದ ಮೇಲೆ ಮರೆಯಾಗಿ... ದೂರ
ಇರಲಾರೆ ಇರಲಾರೆ
ಬಾನು ಕೆಂಪಾದಂತೆ ಗಾಳಿ ಇಂಪಾದಂತೆ
ತಾಜಾ ಅನುರಾಗ ಶುರುವಾಗುವ ಲಕ್ಷಣವೇ?

ಒಂದೇ ಮಾತು ನೂರು ಬಾರಿ ಹೇಳಬೇಕು ಎಂಬ ಆಸೆ
ಆದರೂ ಸಾಲದಾಗಿ ಹೋಯಿತೀಗ ನನ್ನ ಭಾಷೆ
ಮೌನ ಕೂಡ ಮಲ್ಲಿಗೆ ಸೋಕಿದಾಗ ಮೆಲ್ಲಗೆ
ಹೊಸ ರೆಕ್ಕೆ ಮೂಡಿ ಬಂತು ಹೃದಯಕ್ಕೆ ಈಗ ತಾನೆ
ಜೊತೆಯಲ್ಲಿ ಇಂದು ನಿನ್ನ ಕುಶಿಯಾಗೀ... ಹಾರಿ
ಬರಲೇನು ಬರಲೇನು
ಬಾನು ಕೆಂಪಾದಂತೆ ಗಾಳಿ ಇಂಪಾದಂತೆ
ತಾಜಾ ಅನುರಾಗ ಶುರುವಾಗಿದೆ ಈಕ್ಷಣವೇ
ಅತಿಯಾಗಿ ಸುಳಿವಂತ ಹಿತವಾಗಿ ಕಾಡುವಂತ ಆತಂಕವಾದಿಯೇ...
ನಿನಗಾಗಿ ಕಾಯುವೆ...

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು