ನಾ ನಗುವ ಮೊದಲೆನೆ, ಮಿನುಗುತಿದೆ ಯಾಕೋ ಹೊಸ ಮುಗುಳು ನಗೆ

ನಾ ನಗುವ ಮೊದಲೆನೆ - ಮನಸಾರೆ (2009)
ಗಾಯಕಿ: ಶ್ರೇಯ ಗೋಶಲ್
ಸಾಹಿತ್ಯ: ಯೋಗರಾಜ್ ಭಟ್

ನಾ ನಗುವ ಮೊದಲೆನೆ, ಮಿನುಗುತಿದೆ ಯಾಕೋ ಹೊಸ ಮುಗುಳು ನಗೆ
ನಾ ನುಡಿವ ಮೊದಲೆನೆ, ತೊದಲುತಿದೆ ಹೃದಯವಿದು ಒಳಗೊಳಗೇ..
ನಾ ನಡೆವ ಮೊದಲೆನೆ, ಎಳೆಯುತಿದೆ ದಾರಿ ಇದು ನಿನ್ನೆಡೆಗೆ,
ನಾ ಅರಿವ ಮೊದಲೆನೆ ಉರಿಯುತಿದೆ ದೀಪವಿದು ನನ್ನೊಳಗೆ,
ಒಂದು ಬಾರಿ ಹೇಳು ಮೆಲ್ಲಗೆ, ಯಾರು ಯಾರು ನೀ ನನಗೆ..
ನಾ ನಗುವ ಮೊದಲೆನೆ, ಮಿನುಗುತಿದೆ ಯಾಕೋ ಹೊಸ ಮುಗುಳು ನಗೆ

ತಿಳಿಸದೇ ನನಗೆ ಹುಡುಕಿದೆ ನಿನ್ನ, ನನ್ನಯ ಕಣ್ಣು..
ಸಿಹಿ ಸಂಕಟ ಸಾಕಾಗಿದೆ ಮುಂದೆ ಏನು..
ಕಲಿತಿದೆ ಮನವು ಕುಣಿಯುವುದನ್ನು ಕಂಡರೆ ನೀನು
ನಾನು ನನ್ನ ಪಾಡಿಗಿರಲು ಯಾಕೆ ಕಂಡೆ ನೀ ನನಗೆ...
ನಾ ನಗುವ ಮೊದಲೆನೆ, ಮಿನುಗುತಿದೆ ಯಾಕೋ ಹೊಸ ಮುಗುಳು ನಗೆ

ಕನವರಿಕೆಯಲಿ ನಿನ್ನಯ ಹೆಸರ ಕರೆಯಿತೆ ಹೃದಯ..
ನನಗೇತಕೆ ನನ್ನ ಮೇಲೆಯೇ ಈ ಸಂಶಯ
ಬರಿ ಕನಸ್ಸಿನಲ್ಲಿ ಆಗುವೆ ಏಕೆ ನನ್ನಯ ಇನಿಯ..
ಹೇಳು ಒಮ್ಮೆ ಹೇಳು ಇದುವೇ ಪ್ರೀತಿ..ಎಂದು ನೀ ನನಗೆ...

ನಾ ನಗುವ ಮೊದಲೆನೆ, ಮಿನುಗುತಿದೆ ಯಾಕೋ ಹೊಸ ಮುಗುಳು ನಗೆ
ನಾ ನುಡಿವ ಮೊದಲೆನೆ, ತೊದಲುತಿದೆ ಹೃದಯವಿದು ಒಳಗೊಳಗೇ..
ನಾ ನಡೆವ ಮೊದಲೆನೆ, ಎಳೆಯುತಿದೆ ದಾರಿ ಇದು ನಿನ್ನೆಡೆಗೆ,
ನಾ ಅರಿವ ಮೊದಲೆನೆ ಉರಿಯುತಿದೆ ದೀಪವಿದು ನನ್ನೊಳಗೆ,
ಒಂದು ಬಾರಿ ಹೇಳು ಮೆಲ್ಲಗೆ, ಯಾರು ಯಾರು ನೀ ನನಗೆ....

ಒಂದೇ ನಿನ್ನ ನೋಟ ಸಾಕು - ಮನಸಾರೆ(2009)

ಒಂದೇ ನಿನ್ನ ನೋಟ ಸಾಕು - ಮನಸಾರೆ(2009)
ಗಾಯಕ: ಸೋನು ನಿಗಮ್
ಸಾಹಿತ್ಯ: ಜಯಂತ್ ಕೈಕಿಣಿ

ಒಂದೇ ನಿನ್ನ ನೋಟ ಸಾಕು ಮಳ್ಳನಾಗೋಕೆ
ಹೇಳು ಏನು ಮಾಡಬೇಕು ನಲ್ಲ ನಾಗೋಕೆ
ಒಂದೇ ನಿನ್ನ ಮಾತು ಸಾಕು ಮೂಕನಾಗೋಕೆ
ಹೇಳು ಏನು ನೀಡಬೇಕು ಮಾತನಾಡೋಕೆ..

ಕಾಣದ ಒಂದು ಕಾಮನಬಿಲ್ಲು ಮೂಡಿದೆ ನನ್ನೆದುರಲ್ಲೂ...
ಹೂವಿನ ಬಾಣ ನಾಟಿದೆ ಏನು.. ಲೂಟಿಯಾಗಿ ಹೊದೆನಾನು...

ಒಂದೇ ನಿನ್ನ ನೋಟ ಸಾಕು ಮಳ್ಳನಾಗೋಕೆ
ಹೇಳು ಏನು ಮಾಡಬೇಕು ನಲ್ಲ ನಾಗೋಕೆ....

ಎಲ್ಲೇ ನೋಡಿದಲ್ಲೂ ನೀನೆ ಅಡಗಿ ಕೂತಂತೆ
ಹರಿದ ನೋಟಿನಂತೆ ನಾನೇ ತಿರುಗಿ ಬಂದಂತೆ
ಬಾರೆ ಬಿಡಿಸೋಣ... ಕನಸ್ಸುಗಳ ಕಂತೆ
ನನ್ನ ತುಂಬಾ ನೀನೆ ತಾಜಾ ಸುದ್ದಿಯಾದಂತೆ..
ನಿನ್ನ ಮುಂದೆ ಚಂದ್ರ ಕೂಡ ರದ್ದಿಯಾದಂತೆ..
ಸುಂದರವಾದ ಸುಂಟರಗಾಳಿ ನಿನ್ನಯ ರೂಪವ ತಾಳಿ
ಮಿಂಚಿನ ದಾಳಿ ಮಾಡಿದೆ ಏನು, ಲೂಟಿಯಾಗಿ ಹೊದೆನಾನು...

ಒಂದೇ ನಿನ್ನ ನೋಟ ಸಾಕು ಮಳ್ಳನಾಗೋಕೆ
ಹೇಳು ಏನು ಮಾಡಬೇಕು ನಲ್ಲ ನಾಗೋಕೆ....

ನೀನು ಕೇಳಲೆಂದೇ ಕಾದ ಒಂದು ಪದವಾಗಿ,
ನಿನ್ನ ಕಾಸ ಕೋಣೆಯಲ್ಲಿ ಸಣ್ಣ ಕದ ವಾಗಿ,
ಇರಬೇಕು ನಾನು.. ನಿನ್ನ ಜೊತೆಯಾಗಿ
ಓದಲೆಂದೇ ನೀನು ಮಡಿಸಿ ಇಟ್ಟ ಪುಟವಾಗಿ
ಇನ್ನು ಚಂದಗೊಳಿಸುವಂತ ನಿನ್ನ ಹಠವಾಗಿ
ಕಣ್ಣಲಿ ಕಸವ ಬೀಳಿಸಿಕೊಂಡು ಊದಲೂ ಕರೆದರೆ ನಿನ್ನ
ನಿನ್ನದೇ ಬಿಂಬವು ನೋಡಲು ನೀನು, ಲೂಟಿಯಾಗಿ ಹೊದೆನಾನು...

ಒಂದೇ ನಿನ್ನ ನೋಟ ಸಾಕು ಮಳ್ಳನಾಗೋಕೆ
ಹೇಳು ಏನು ಮಾಡಬೇಕು ನಲ್ಲ ನಾಗೋಕೆ
ಒಂದೇ ನಿನ್ನ ಮಾತು ಸಾಕು ಮೂಕನಾಗೋಕೆ
ಹೇಳು ಏನು ನೀಡಬೇಕು ಮಾತನಾಡೋಕೆ

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು