YUDHDHA KAANDA - Kudiyodhe nanna weaknessu Kannada Lyrics



HAMSALEKHA AVARE NIMAGE NAMMA NAMANAGALU


ಕುಡಿಯೋದೆ ನನ್ನ ವೀಕ್ನೆಸ್ಸು
ಆದರೆ ನ್ಯಾಯಕೆ ದುಡಿಯೋದೆ ನನ್ನ ಬಿಸಿನೆಸ್ಸು
ಹಿರಿಯರ ಮುಂದೆ ಬಾಲಕ ಬಡವರ ಮನೆಗೆ ಸೇವಕ
ಕುಡುಕರಿಗೆಲ್ಲ ನಾಯಕ ಹ್ಯಾಗಿದೆ ನನ್ನ ಜಾತಕ

ಒಂದು ಪೆಗ್ಗಿನ ಕಥೆಯಿದು ಇದರ ಒಳಗಿನ ವ್ಯಥೆ ಇದು
ದೇವ ದಾನವರ ಸೈನ್ಯವು ಕಡಲು ಕಡೆಯುವ ಸಮಯವು
ಜನಿಸಿತು ನೊಡಿ ಸುರಪಾನ ಆಯಿತು ಲೋಕಕೆ ಮಧುಪಾನ
ಸೃಷ್ಟಿಯೆ ನೀಡಿದ ಶಾಪವಿದು ದೆವರೆ ಮಾಡಿದ ಪಾಪವಿದು
ಇದರ ಮುಂದೆ ದೇವರು ಗುಲಾಮ ನಾನು ಇದನು ಆಳೊ ಸಾರ್ವಭೌಮ
ಈ ಮಾತು ಸುಳ್ಳಲ್ಲ ಕುಡುಕನ ಬರವಣಿಗೆ

ಒಮ್ಮೆ ರಾತ್ರಿಯ ಮಬ್ಬಲಿ ದೆವಲೋಕದ ಕ್ಲಬ್ಬಲಿ
ವಿಸ್ಕಿಯೊಂದಿಗೆ ಸೂರ್ಯನು ಐಸಿನೊಂದಿಗೆ ಚಂದ್ರನು
ರಂಭೆಯ ಡಿಸ್ಕೋ ವೀಕ್ಷಿಸಲು ಒಂದೆ ಚೇರಲಿ ಕುಳಿತಿರಲು
ಸ್ನೇಹವ ಮರೆತ ಚಂದಿರನು ರಂಭೆಯ ಹಿಂದೆ ಓಡಿದನು
ಅವನ ಸುಡಲು ಸೂರ್ಯ ಎದ್ದು ನಿಂತ ಪ್ರಾಣ ಭಯದಿ ಚಂದ್ರ ಅವಿತು ಕುಳಿತ
ಆ ದಿಂದ ಇಬ್ಬರಿಗು ಸ್ನೇಹವೆ ಕೂಡಿಲ್ಲ
ಅವರಿಗು ಕುಡಿಯೋ ವೀಕ್ ನೆಸ್ಸು
ಆದರೆ ಭೂಮಿಯ ಬೆಳಗೋದೆ ಅವರ ಬಿಸನೆಸ್ಸು

ಕುಡಿಯದಿದ್ದರೆ ಈ ಜನ ನಡೆಯಲಾರದೊ ಜೀವನ
ಹುಟ್ಟಿ ಸಾಯಲು ಸ್ಥಳವಿದೆ ಹೊಟ್ಟೆ ಬಟ್ಟೆಗೆ ಬರವಿದೆ
ನಿಷೆಧ ಹೇರುವ ಸರಕಾರ ಒಳಗೆ ಕೊಡುವುದು ಸಹಕಾರ
ಸರಕಾರದ ಈ ರೂಲ್ಸುಗಳು ಬಲ್ಬೆ ಇಲ್ಲದ ಕಂಭಗಳು
ಬೆಳಕು ಕೊಡುವೆ ಎಂದು ಓಟು ಪಡೆವ ನಮ್ಮ ಜನರ ಕತ್ತಲಲ್ಲಿ ಇಡುವ
ಕಿರುಚಾಡೊ ನಾಯಕರು ಕುಡಿಯುತ ಎಲ್ಲಿಹರೊ
ಕುರ್ಚೀನೆ ಅವರ ವೀಕ್ನೆಸ್ಸು
ಕುರ್ಚಿಯ ಕಾಲನು ಮುರಿಯೋದೆ ನನ್ನ ಬಿಸಿನೆಸ್ಸು

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು