SHABDHAVEDHI - JANARINDA NANU, THAYYA RE THAYYA

ಚಿತ್ರ: ಶಬ್ದವೇದಿ
ಸಾಹಿತ್ಯ, ಸಂಗೀತ: ಹಂಸಲೇಖ
ಹಾಡಿರುವವರು: ಡಾ|| ರಾಜ್

ಜನರಿಂದ ನಾನು ಮೇಲೆ ಬಂದೆ ಜನರನ್ನೆ ನನ್ನ ದೇವರೆಂದೆ
ಜನರಿದ್ದರೆ ನನ್ನ ಬೆನ್ನ ಹಿಂದೆ ಹೋರಾಡಲು ನಾನೆಂದು ಮುಂದೆ
ಈ ದೇವರು ಮಾಡಿದ ಅಜ್ಞೆ ನಾ ಮೀರುವುದುಂಟೇನು
ಈ ಮಣ್ಣಲಿ ಹುಟ್ಟಿದ ಋಣವ ನಾ ಮರೆಯುವುದುಂಟೇನು
ಛೆ ಛೆ ಆಗದು ಆಗದು

ಹಣವನು ದೋಚುವ ದೆಸೆಯಿಂದ ಮಾರಕ ಮಾದಕ
ಕೊಡುವುದೇ ಸುಖ ಪಡುವುದೇ
ನಾಳಿನ ಪ್ರಜೆಗಳ ಕಂಗೆಡಿಸಿ ನಾಡನು ನರಕಕೆ
ತಳ್ಳಲು ಗುಣಿ ತೆಗೆವುದೆ
ಸತ್ಯಕೆ ಸಾವಿಲ್ಲ ಮೋಸಕೆ ಉಳಿವಿಲ್ಲ
ನ್ಯಾಯದ ದಾರಿಗೆ ಭಯವಿಲ್ಲ

ಯುವಕರ ಓದಿನ ಉಪಯೋಗ ನಾಡಿಗೆ ದೊರೆತರೆ
ಚಿನ್ನದ ಬೆಳೆ ಬೆಳೆವುದು
ಯುವಜನ ಶಕ್ತಿಯು ಮನಸಿಟ್ಟು ದುಡಿದರೆ ನಡೆದರೆ
ಭೂಮಿಗೆ ಸ್ವರ್ಗ ಇಳಿವುದು
ಯುವಕರೆ ಮೇಲೇಳಿ ಸಂಸ್ಕೃತಿ ಕಾಪಾಡಿ
ಯುವಕರೆ ನಾಡಿನ ಶಿಲ್ಪಿಗಳು

THAYYA RE THAYYA THAYYA RE THAYYA

ಚಿತ್ರ: ಶಬ್ದವೇದಿ
ಸಾಹಿತ್ಯ ಸಂಗೀತ: ಹಂಸಲೇಖ
ಗಾಯನ: ಡಾ. ರಾಜ್‍ಕುಮಾರ್, ಚಿತ್ರ

ಥಯ್ಯಾರೆ ಥಯ್ಯ ಥಯ್ಯಾರೆ ಥಯ್ಯ
ಏನೆಂದು ಹೇಳಲಯ್ಯ ಅಂದ ಚಂದವ
ಇವ್ಳಂದಚಂದವ
ಅಂತರಂಗವ ಇವಳಂತರಂಗವ
ಥಯ್ಯಾರೆ ಥಯ್ಯ ಥಯ್ಯಾರೆ ಥಯ್ಯ
ಏನೆಂದು ಹಾಡಲಯ್ಯ ಅಂದ ಚಂದವ
ಇವನಂದಚಂದವ
ಅಂತರಂಗವ ಇವನಂತರಂಗವ

ಈ ಕೆನ್ನೆ ಕೆಂದಾವರೆ ಅನ್ನೋದು ಕವಿಗಳ ಸವಿಮಾತು
ಬಾಡಲ್ಲ ಎಂಬುದೆನ್ನ ಪಿಸುಮಾತು
ಈ ಕಣ್ಣು ಮೂಗಂದವೋ ಕಟ್ಟಾಳು ಗಂಡಸಿನ ತೋಳಂದವೋ
ತೋಳಲ್ಲಿ ನನ್ನ ಜೀವಕಾನಂದವೋ
ಹೊಂಬಾಳೆಯೆ ಹೆಣ್ಣಾಯಿತೊ
ಬಂಗಾರವೆ ಗಂಡಾಯಿತೋ

ಓ ಇವ್ಳ ಕಾಲಂದವೋ ಕಾಲಲ್ಲಿ ಕಿರುಗೆಜ್ಜೆ ಘಲ್ಲೆಂದವೋ
ಘಲ್ಲಂದ್ರೆ ನನ್ನ ಎದೆ ಝಲ್ಲೆಂದವೋ
ಆ ಸ್ವರ್ಗ ಬಾನಲ್ಲಿದೆ ಅನ್ನೋದು ಲೋಕದ ರೂಢಿ ಮಾತು
ಪ್ರೀತೀಲಿ ಎಂಬುದೆನ್ನ ಎದೆ ಮಾತು
ಈ ಪ್ರೀತಿಯಾ ಹೂವಾದೆ ನೀ
ಈ ಹೂವಿನ ಜೇನಾದೆ ನೀ


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು