ಎಲ್ಲಿ ಜಾರಿತೋ ಮನವು ಎಲ್ಲೇ ಮೀರಿತೋ Elli Jaaritho, Kannada Lyrics

Lyrics: N S Lakshmi Narayana Bhat

ಎಲ್ಲಿ ಜಾರಿತೋ ಮನವು ಎಲ್ಲೇ ಮೀರಿತೋ
ಎಲ್ಲಿ ಅಲೆಯುತಿಹುದೋ ಏಕೆ ನಿಲ್ಲದಾಯಿತೋ
 
ದೂರದೊಂದು ತೀರದಿಂದ 
ತೇಲಿ ಪಾರಿಜಾತ ಗಂಧ
ದಾಟಿ ಬಂತು ಬೇಲಿ ಸಾಲ,,
ಮೀಟಿ ಹಳೆಯ ಮಧುರ ನೋವ

ಎಲ್ಲಿ ಜಾರಿತೋ ಮನವು ಎಲ್ಲೇ ಮೀರಿತೋ ...

ಬಾನಿನಲ್ಲಿ ಒಂಟಿ ತಾರೆ...
ಸೋನೇ ಸುರಿವ ಇರುಳಾ ಮೋರೆ...
ಕತ್ತಲಲ್ಲಿ ಕುಳಿತು ಒಳಗೆ......
ಬಿಕ್ಕುತಿಹಳು ಯಾರೋ ನೀರೇ ...
ಎಲ್ಲಿ ಜಾರಿತೋ ...........................

ಹಿಂದೆ ಯಾವ ಜನ್ಮದಲ್ಲೋ,
ಮಿಂದ ಪ್ರೇಮ ಜಲದ ಕಂಪು 
ಬಂದು ಚೀರುವೆದೆಯಾ ಭಾವ
ಹೇಳಲಾರೆ ತಾಳಲಾರೆ
ಎಲ್ಲಿ ಜಾರಿತೋ

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು