ಚಿತ್ರ: ಅಮೃತವರ್ಷಿಣಿ
ಸಂಗೀತ: ದೇವಾ
ಗಾಯನ: ಎಸ್. ಪಿ. ಬಿ. ಮತ್ತು ಕೆ. ಎಸ್. ಚಿತ್ರ
ಈ ಸುಂದರ ಬೆಳದಿಂಗಳ
ಈ ತಂಪಿನ ಅಂಗಳದಲಿ
ನನ್ನ ನಿನ್ನ ನಡುವಿನಲ್ಲಿ..
ಈ ಸುಂದರ ಬೆಳದಿಂಗಳ
ಈ ತಂಪಿನ ಅಂಗಳದಲಿ
ಉಸಿರೇ ಭಾವವು
ನಿನ್ನ ಈ ನಗೆಯ ಸವಿ ಶ್ರುತಿಯಲ್ಲಿ ಒಹೋ...
ದಿನಾ ದಿನಾ .... ಕ್ಷಣ ಕ್ಷಣ ಚಿನ್ನ ನನ್ನ
ನಿನ್ನ ಹಾಡಲೇ ಕುಣಿಸಿರುವೆ
ಮನ ಮನ ನಗೋಥರ ಕಣ್ಣಂಚಲೇ ನಗಿಸಿರುವೆ
ಒಲವೇ .....ಆ ಆ
ಒಲವೇ ನಿನ್ನ ನಳಿವೊಂದೇ ವರವೆನ್ನುತಾ ನಾ ನಲಿವೆ
ಒಲವೇ ನಿನ್ನ ಗೆಲುವೊಂದೇ ಬಲವೆನ್ನುತಾ ನಾ ಬೆಳೆವೆ
ನನ್ನ ಎದೆಯೊಳಗಿನ ಸ್ವರ ನುಡಿಸುವ ಕೈಗಳೇ ನಿನದು
ನಿನ್ನ ಕೈಗಳ ಜೊತೆ ಕೈ ಸೇರಿಸಿ ಜಗವ ಕೊಳ್ಳೋ ಮನಸು ನನದು
।।ಈ ಸುಂದರ।।
ಸಮ ಸಮಾ
ಸರಿಗಮ ಸಮಾಗಮ ಇಂಥ ವಿಸ್ಮಯ ಇದೆ ಮೊದಲು.
ಘಮ ಘಮಾ ಎದೆಯೆಲ್ಲಾ ಇನ್ನು ಮಾತು ಬರಿ ತೊದಲು
ಉಸಿರೇ
ಉಸಿರೇ ನಿನ್ನ ಉಸಿರಾಗಿ, ಈ ಉಸಿರ ಬರೆದಿರುವೆ
ನಮ್ಮ ಹಾಡಿಗೆ, ಹೆಸರಾಗಲಿ, ಕಾವೇರಿ ಕಲರವವೇ
ನಿನ್ನ ನೆರಳಿನ ಸನಿ ಸನಿಹಕೆ , ನನ್ನ ಕೊರಳಿನ ದನಿ ಹರಿಸಿ ಹರಿಸಿ,
ನಿನ್ನ ಕನಸಿಗೆ ಹೊಸ ಹೆಸರನು ಬರೆಸಿ ಮೆರೆಸಿ ರಮಿಸಲಿರುವೆ
।। ಈ ಸುಂದರ ।।
0 ಕಾಮೆಂಟ್‌ಗಳು