ಚಿತ್ರ: ನನ್ನ ತಮ್ಮ ೧೯೭೦
ನಿರ್ದೇಶನ: ಕೆ. ಬಾಬು ರಾವ್
ನಿರ್ಮಾಣ:ಕೆ.ವಿ. ಗುಪ್ತ
ಸಂಗೀತ: ಘಂಟಸಾಲ ವೆಂಕಟೇಶ್ವರ ರಾವ್
ಗಾಯನ: ಪಿ. ಬಿ. ಶ್ರೀನಿವಾಸ್
ಒಂದು ಚಿಕ್ಕ ಘಟನೆ ಮೆಲುಕು: ಇದರ ಒರಿಜಿನಲ್ ಸಂಗೀತ ತೆಲುಗಿನ "ಜರಿಗಿನ ಕಥ" ಚಿತ್ರದ್ದು , ಚಿತ್ರ ಕೂಡ ರಿಮೇಕ್ ಆದರೂ, ತೆಲುಗಿನಲ್ಲಿ ಘಂಟಸಾಲ ಅವರ ಗಾಯನಕ್ಕೆ ಒಂದು ಚೂರು ಕೂಡಾ ಚ್ಯುತಿ ಬಾರದಂತೆ ಅದ್ಭುತವಾಗಿ ಹಾದಿ ನಮಗೆ ಒಂದು ಅಮೂಲ್ಯ ರತ್ನದಂಥ ಹಾಡನ್ನು ಕೊಟ್ಟಿದಾರೆ. ಇದರ ಸಂಯೋಜನೆ ಘಂಟಸಾಲ ಅವರು ಒಮ್ಮೆ ಅವರ ಸಮುದ್ರ ತೀರದ ಬಳಿಯ ಮನೆಯ ಟೆರೇಸಿನ ಮೇಲೆ ಕುಳಿತು ಇದರ ಧಾಟಿಯನ್ನು ಗುನುಣುಗುಣಿಸಿದಾಗ ಪಕ್ಕದಲ್ಲೇ ಇದ್ದ ಸಿ. ನಾರಾಯಣ ರೆಡ್ಡಿ ಅವರು ತೆಲುಗಿನ ಈ ಅದ್ಭುತ ಗೀತೆಯ ಪದಗಳನ್ನು ಬರೆದು ಕೊಟ್ಟರಂತೆ. ಅದೇ ಹಾಡು ಕನ್ನಡದ್ಲಲ್ಲೂ ಅಜರಾಮರ ಈನುವಂತೆ ಹಾಡಿದ್ದಾರೆ ನಮ್ಮ ಮೆಚ್ಚಿನ ಪಿ.ಬಿ.ಎಸ್.
ಇದೇ ಹೊಸಾ ಹಾಡು , ಹೃದಯ ಸಾಕ್ಷಿ ಹಾಡು
ಹೃದಯಾಸೆ ಭಾಷೆ ಈ ಹಾಡು ಆ ಆ ಆ ......
ಹೃದಯಾಸೆ ಭಾಷೆ ಈ ಹಾಡು .........
ಮನದಿ ನೆನೆದ ಮಾತುಗಳೆಲ್ಲ
ಮಧುವಾಗಿ ಸವಿಯುವ ಹಾಡು ...
ಸವಿಯಾದ ಜೀವನವೆಲ್ಲ
ಹಾಯಾದ ಒಲವಿನ ಹಾಡು ...... ।।೨।।
ಒಲವು ಚೆಲುವು ಒಂದಾದ್ದೆಲ್ಲಾ ಎಂದು ಯಾರೂ ಮರೆಯದ ಹಾಡು......... !!!
ಇದೇ ಹೊಸಾ ಹಾಡು , ಹೃದಯ ಸಾಕ್ಷಿ ಹಾಡು
ಹೃದಯಾಸೆ ಭಾಷೆ ಈ ಹಾಡು ಆ ಆ ಆ ......
ಹೃದಯಾಸೆ ಭಾಷೆ ಈ ಹಾಡು .........
ಚಂದ್ರ ಕಾಂತಿ ಚಿಮ್ಮಿದ ಹಾಡು
ಮೈ ಮರೆತು ನಗಿಸೋ ಹಾಡು
ಮುಂಬಾಳ್ವೆಯ ಮುನ್ನಡೆ ಹಾಡು
ತಾಯಿ ದೇವಿ ಹರಸಿದ ಹಾಡು
ಜನ್ಮ ಜನ್ಮದ ಪುಣ್ಯದ ಹಾಡು ಕನ್ನಡಾಂಬೆ ಹಾಡು........ !!!!!
ಇದೇ ಹೊಸಾ ಹಾಡು , ಹೃದಯ ಸಾಕ್ಷಿ ಹಾಡು
ಹೃದಯಾಸೆ ಭಾಷೆ ಈ ಹಾಡು ಆ ಆ ಆ ......
ಹೃದಯಾಸೆ ಭಾಷೆ ಈ ಹಾಡು .........
0 ಕಾಮೆಂಟ್‌ಗಳು