ಚಿತ್ರ: ಪ್ರೇಮದ ಕಾಣಿಕೆ (೧೯೭೬)
ಗಾಯಕ: ಡಾ. ರಾಜ್ ಕುಮಾರ್
ಏ ಹೇ ಹೇ , ಎ ಹೇ ಹೇ ಹೆ. ಆ ಹಾ.. ಹ್ಮ್ಮ್ ..
ಬಾನಿಗೊಂದು ಎಲ್ಲೇ ಎಲ್ಲಿದೇ... ನಿನ್ನಾಸೆಗೆಲ್ಲಿ ಕೊನೆಯಿದೇ ..!!
ಏಕೇ ಕನಸು ಕಾಣುವೆ, ನಿಧಾನಿಸೂ ... ನಿಧಾನಿಸೂ.... !!
ಆಸೆಯೆಂಬ ಬಿಸಿಲು ಕುದುರೆ ಏಕೆ ಏರುವೆ, ಮರಳುಗಾಡಿನಲ್ಲಿ ಸುಮ್ಮನೇಕೆ ಅಲೆಯುವೆ.. !!
ಅವನ ನಿಯಮ ಮೀರಿ ಇಲ್ಲಿ ಏನು ಸಾಗದು , ನಾವು ನೆನೆಸಿದಂತೆ ಬಾಳಲೇನು ನಡೆಯದು.. !!
ವಿಷಾದವಾಗಲಿ ವಿನೋದವಾಗಲೀ ಅವನೇ ಕಾರಣ...!!!!!
ಬಾನಿಗೊಂದು ಎಲ್ಲೇ ಎಲ್ಲಿದೇ....... !!
ಹುಟ್ಟು ಸಾವು ಬಾಳಿನಲ್ಲಿ ಎರಡು ಕೊನೆಗಳು, ಬಯಸಿದಾಗ ಕಾಣದಿರುವ ಎರಡು ಮುಖಗಳು .... !!
ಹರುಷವೊಂದೆ ಯಾರಿಗುಂಟು ಹೇಳು ಜಗದಲಿ , ಹೂವು ಮುಳ್ಳು ಎರಡು ಉಂಟು ಬಾಳ ಲತೆಯಲಿ ...!!
ದುರಾಸೆಯೇತಕೆ ನಿರಾಸೆಯೆತಕೆ ಅದೇನೇ ಬಂದರೂ ಅವನ ಕಾಣಿಕೆ ...!!
ಬಾನಿಗೊಂದು ಎಲ್ಲೇ ಎಲ್ಲಿದೇ... ನಿನ್ನಾಸೆಗೆಲ್ಲಿ ಕೊನೆಯಿದೇ ..!!
ಏಕೇ ಕನಸು ಕಾಣುವೆ, ನಿಧಾನಿಸೂ ... ನಿಧಾನಿಸೂ.... !!
0 ಕಾಮೆಂಟ್‌ಗಳು