Lankesh Patrike Kannada Movie - Endo Kanda Kanasu Lyrics Indrajit lankesh,Darshan thoogudeepa, Vasundhara Das, Rajesh Krishnan

ಎಂದೊ ಕಂಡ ಕನಸು
ಅದು ನಿನ್ನ ಮನಸು
ನಿನ್ನ ಮನಸಿಗಾಗಿ ಸೋತೇ
ನಿನ್ನ ಒಂದು ಸ್ಪರ್ಶ
ನಂಗೆ ನೂರು ವರುಷ
ನಿನ್ನ ನೆರಳಿಗಾಗಿ ಸೋತೇ
ನೂರಾರು ಮುಳ್ಳುಗಳಾ ನಡುವೆ ಹೂವಿದೇ
ನೂರಾರು ನೋವುಗಳಾ ನಡುವೆ ಒಲವಿದೇ
ನಿನಗಾಗಿ ಎದೆಯಲ್ಲಿ ಒಂದು ಹಾಡಿದೇ
ನೆನೆನೆನೆದು ಏಕಿರುವೆ ಮಾತನಾಡದೆ
ಕ್ಷಮಿಸು ಬಾ ಒಮ್ಮೆ ಕ್ಷಮಿಸು ಬಾ
ನೀ ತಾನೆ ನನ್ನ ಜೀವ
ಎಂದೊ ಕಂಡ ಕನಸು
ಅದು ನಿನ್ನ ಮನಸು
ನಿನ್ನ ಮನಸಿಗಾಗಿ ಸೋತೇ
---------
ಆ ಮೋಡದಿಂದ ಮಳೆಗೆ ಒಂದು ಸೂಕ್ತಿ ಇದೆ
ತಂಗಾಳಿಯಿಂದ ಹೂವಿಗೊಂದು ಕೀರ್ತಿ ಇದೆ
ನಿನ್ನ ಹೃದಯದಾಣೆ ನನ್ನ ಹೃದಯದಲ್ಲಿ ಪ್ರೀತಿ ಇದೆ
ಆ ಕತೆಗಳೆಲ್ಲ ಕಣ್ಣ ತುಂಬಿ ನೀರಾಗಿದೆ
ಇದು ಮರೆಯದ ಹಾಡು, ಮೌನಗಳೇ ಸಾಕ್ಷಿಗಳು
ಇದು ಮುಗಿಯದ ನೆನಪು, ವಿರಹಗಳೇ ಗುರುತುಗಳು
ಇದು ಮರೆಯದ ಹಾಡು, ಮೌನಗಳೇ ಸಾಕ್ಷಿಗಳು
ಇದು ಮುಗಿಯದ ನೆನಪು, ವಿರಹಗಳೇ ಗುರುತುಗಳು
ಕ್ಷಮಿಸುಬಾ ಒಮ್ಮೆ ಕ್ಷಮಿಸುಬಾ
ನೀ ತಾನೆ ನನ್ನ ಜೀವ
ಎಂದೊ ಕಂಡ ಕನಸು
ಅದು ನಿನ್ನ ಮನಸು
ನಿನ್ನ ಮನಸಿಗಾಗಿ ಸೋತೇ
---------
ಸಹಪ್ರೇಮಿಗಾಗಿ ಪ್ರೇಮಿಯೊಬ್ಬ ಇರದ ಕ್ಷಣಾ
ಈ ತಿರುಗೊ ಭೂಮಿ ತಿರುಗದೆಂದು ಒಂದೂ ಕ್ಷಣಾ
ಇಲ್ಲಿ ಸನಿಹವುಂಟು ವಿರಹವುಂಟು ಪ್ರತೀ ದಿನಾ
ಪ್ರತಿ ಹೆಜ್ಜೆಯಲ್ಲು ಕಾಯಬೇಕು ಮನಾಮನ
ನನ್ನಾಣೆಗು ನಿನ್ನಾ ಬಾಳೆಲ್ಲಾ ಬೆಳಕಿರಲೀ
ನಿನ್ನ ನಾಳೆಗಳೆಲ್ಲ ನಾನೆನೆಯೋ ಹಾಗಿರಲೀ
ನನ್ನಾಣೆಗು ನಿನ್ನಾ ಬಾಳೆಲ್ಲಾ ಬೆಳಕಿರಲೀ
ನಿನ್ನ ನಾಳೆಗಳೆಲ್ಲ ನಾನೆನೆಯೋ ಹಾಗಿರಲೀ
ಬಾ ಕ್ಷಮಿಸು ಬಾ ಇಂದೆ ಕ್ಷಮಿಸುಬಾ
ನೀ ತಾನೆ ನನ್ನ ಜೀವ
---------
ಎಂದೊ ಕಂಡ ಕನಸು
ಅದು ನಿನ್ನ ಮನಸು
ನಿನ್ನ ಮನಸಿಗಾಗಿ ಸೋತೇ
ನೂರಾರು ಮುಳ್ಳುಗಳಾ ನಡುವೆ ಹೂವಿದೇ
ನೂರಾರು ನೋವುಗಳಾ ನಡುವೆ ಒಲವಿದೇ
ನಿನಗಾಗಿ ಎದೆಯಲ್ಲಿ ಒಂದು ಹಾಡಿದೇ
ನೆನೆನೆನೆದು ಏಕಿರುವೆ ಮಾತನಾಡದೆ
ಕ್ಷಮಿಸುಬಾ ಒಮ್ಮೆ ಕ್ಷಮಿಸುಬಾ
ನೀ ತಾನೆ ನನ್ನ ಜೀವ
ಎಂದೊ ಕಂಡ ಕನಸು
ಅದು ನಿನ್ನ ಮನಸು
ನಿನ್ನ ಮನಸಿಗಾಗಿ ಸೋತೇ

ಕಾಮೆಂಟ್‌‌ ಪೋಸ್ಟ್‌ ಮಾಡಿ

2 ಕಾಮೆಂಟ್‌ಗಳು