ಚಿತ್ರ: ಡ್ರಾಮಾ (2012), ಹಾಡು:ಹಂಬಲದ ಹೂವನ್ನು , ಸಂಗೀತ: ವೀ ಹರಿಕೃಷ್ಣ, ಗಾಯನ:ಸುನಿತಾ ಗೋಪುರಾಜ್ , ಸಾಹಿತ್ಯ: ಜಯಂತ್ ಕಾಯ್ಕಣಿ
ಹಂಬಲದ ಹೂವನ್ನು ಕಣ್ಣಲ್ಲಿ ಅರಳಿಸುತ, ಅಂಗಳದಿ ನಿಂತಿರುವ ಸಂಚಾರಿ..
ಜೋಳಿಗೆಯ ತುಂಬೆಲ್ಲ ನಾಜೂಕು ಬಣ್ಣಗಳ, ಸ್ವಪ್ನವನು ತಂದಿರುವ ವ್ಯಾಪಾರಿ..
ಬೆಳದೀತೆ ಆಸೆಗಳ ಈ-ಯಾದಿ , ಕಳದೀತೆ ನಡುವೆಲ್ಲ ಈ ಹಾದಿ…
ಬೇಕೇನು ಈ ಪ್ರೀತಿ ಇತ್ಯಾದಿ..

ಜೋಳಿಗೆಯ ತುಂಬೆಲ್ಲ ನಾಜೂಕು ಬಣ್ಣಗಳ, ಸ್ವಪ್ನಗಳ ತಂದಿರುವ ವ್ಯಾಪಾರಿ..

ಹಿಡಿಯಷ್ಟು ಹೃದಯದಲಿ ಹಿಡಿಸಲಾಗದೆ ಹೋದ ಮೌನವನು ಶ್ರುತಿ ಮಾಡೋ ವ್ಯಾಯಮವೇಕೆ..
ಅಚ್ಚು-ಮೆಚ್ಚಾಗಿರುವ ಈ ಭಾವ ಸರಿತೆಯಲಿ ಅಚ್ಚಿನ ದೋಷಗಳು ಮೈದೂರಬೇಕೇ…
ಹರಿವಾಗ ಈ ಬಾಳು ನದಿಯಾಗಿ, ಇರಬೇಕೇ ನೀ ಸಣ್ಣ ಸುಳಿಯಾಗಿ
ಬೇಕೇನು ಈ ಪ್ರೀತಿ ಇತ್ಯಾದಿ..
ಅಚ್ಚು-ಮೆಚ್ಚಾಗಿರುವ ಈ ಭಾವ ಸರಿತೆಯಲಿ ಅಚ್ಚಿನ ದೋಷಗಳು ಮೈದೂರಬೇಕೇ…
ಹರಿವಾಗ ಈ ಬಾಳು ನದಿಯಾಗಿ, ಇರಬೇಕೇ ನೀ ಸಣ್ಣ ಸುಳಿಯಾಗಿ
ಬೇಕೇನು ಈ ಪ್ರೀತಿ ಇತ್ಯಾದಿ..
ಹಂಬಲದ ಹೂವನ್ನು…..
ಚಂದಿರನ ಮೊಗದಲ್ಲಿ ಕಂಬನಿಯ ಕಲೆಗಳಿವೆ, ಉಂಟಲ್ಲ ಅದರಲ್ಲಿ ನಮಗೊಂದು ಪಾಠ..
ಈ ಪುಟ್ಟ ಕಂಗಳಲಿ, ಲೋಕವೇ ಬಿಂಬಿಸಲಿ, ಮೋಹದಲಿ ಸಂಕುಚಿತ-ವಾದೀತೆ..ನೋಟ..
ಬಾಡೀತೆ ಈ ಜೀವ ಬಿಡಿಯಾಗಿ, ಬದುಕನ್ನೇ ನೋಡೋಣ ಇಡಿಯಾಗಿ..

0 ಕಾಮೆಂಟ್‌ಗಳು