ಚಿತ್ರ: ಗಡಿಬಿಡಿ ಗಂಡ
ಸಂಗೀತ/ಸಾಹಿತ್ಯ: ಹಂಸಲೇಖ
ಗಾಯಕ/ಗಾಯಕಿ: ಎಸ್.ಪಿ.ಬಿ, ಚಿತ್ರ
ಸಂಗೀತ/ಸಾಹಿತ್ಯ: ಹಂಸಲೇಖ
ಗಾಯಕ/ಗಾಯಕಿ: ಎಸ್.ಪಿ.ಬಿ, ಚಿತ್ರ
[ಎಸ್.ಪಿ.ಬಿ]
ಮುದ್ದಾಡೆಂದಿದೆ ಮಲ್ಲಿಗೆ ಹೂ..ಮನಸಿ ಎಂದಿದೆ ಸಂಪಿಗೆ ಹೂ
ಮಲ್ಲಿಗೆಯ..ಮೊದಲು ಸಂಪಿಗೆಯ
ಸಂಪಿಗೆಯ..ಮೊದಲು ಮಲ್ಲಿಗೆಯ
ಮಲ್ಲಿಗೆಯ..ಮೊದಲು ಸಂಪಿಗೆಯ
ಸಂಪಿಗೆಯ..ಮೊದಲು ಮಲ್ಲಿಗೆಯ
ಮುದ್ದಾಡೆಂದಿದೆ ಮಲ್ಲಿಗೆ ಹೂ..ಮನಸಿ ಎಂದಿದೆ ಸಂಪಿಗೆ ಹೂ
ಇಡಬೇಕೋ..ಮನಸು ಕೊಡಬೇಕೋ
ಕೊಡಬೇಕೋ..ಮನಸು ಇಡಬೇಕೋ
ಇಡಬೇಕೋ..ಮನಸು ಕೊಡಬೇಕೋ
ಕೊಡಬೇಕೋ..ಮನಸು ಇಡಬೇಕೋ
-------------------------೧-----------------------------
[ಚಿತ್ರ]
ಆ ಆ ಆ ......
[ಚಿತ್ರ]
ಆ ಆ ಆ ......
ಮುಡಿಯಲಿ ಮಲ್ಲಿಗೆಯ ಮುಡಿದವಳ
ಮೊದಲು ಮುಡಿಯಬೇಕು
ಮಡದಿಗೆ ಪ್ರತಿದಿನವೂ
ಮೊದಲಿರುಳಿರಬೇಕು
ಮೊದಲು ಮುಡಿಯಬೇಕು
ಮಡದಿಗೆ ಪ್ರತಿದಿನವೂ
ಮೊದಲಿರುಳಿರಬೇಕು
[ಎಸ್.ಪಿ.ಬಿ]
ಮನಸಿನ ಮಧುವಿನ ಮಹಲೊಳಗೆ
ಮದನ ಮಣಿಯಬೇಕು
ಸುರತಿಯ ಪರಮಾನ್ನ
ಹಿತಮಿತವಿರಬೇಕು
[ಚಿತ್ರ]
ವಿರಹಬಾಧೆ ದಹಿಸುವಾಗ..ಬಾಲಬೋಧೆ ಏಕೆ
[ಎಸ್.ಪಿ.ಬಿ]
ಪ್ರಣಯ ನದಿಯೆ ತುಳುಕುವಾಗ..ಮದನ ಮಳೆಯು ಬೇಕೆ
[ಚಿತ್ರ]
ಹಿಡುದುಕೊ..ಮೆಲ್ಲಗೆ
[ಎಸ್.ಪಿ.ಬಿ]
ತಡೆದುಕೊ..ಮಲ್ಲಿಗೆ
[ಚಿತ್ರ]
ಹರೆಯ..ನೆರೆಯ..ತಡೆಯೊ..ಇನಿಯ
ಮನಸಿನ ಮಧುವಿನ ಮಹಲೊಳಗೆ
ಮದನ ಮಣಿಯಬೇಕು
ಸುರತಿಯ ಪರಮಾನ್ನ
ಹಿತಮಿತವಿರಬೇಕು
[ಚಿತ್ರ]
ವಿರಹಬಾಧೆ ದಹಿಸುವಾಗ..ಬಾಲಬೋಧೆ ಏಕೆ
[ಎಸ್.ಪಿ.ಬಿ]
ಪ್ರಣಯ ನದಿಯೆ ತುಳುಕುವಾಗ..ಮದನ ಮಳೆಯು ಬೇಕೆ
[ಚಿತ್ರ]
ಹಿಡುದುಕೊ..ಮೆಲ್ಲಗೆ
[ಎಸ್.ಪಿ.ಬಿ]
ತಡೆದುಕೊ..ಮಲ್ಲಿಗೆ
[ಚಿತ್ರ]
ಹರೆಯ..ನೆರೆಯ..ತಡೆಯೊ..ಇನಿಯ
ಮುದ್ದಾಡೆಂದಿದೆ ಮಲ್ಲಿಗೆ ಹೂ..ಮನಸಿ ಎಂದಿದೆ ಸಂಪಿಗೆ ಹೂ
ಮಲ್ಲಿಗೆಯ..ಮೊದಲು ಸಂಪಿಗೆಯ
ಸಂಪಿಗೆಯ..ಮೊದಲು ಮಲ್ಲಿಗೆಯ
[ಎಸ್.ಪಿ.ಬಿ]
ಮುದ್ದಾಡೆಂದಿದೆ ಮಲ್ಲಿಗೆ ಹೂ..ಮನಸಿ ಎಂದಿದೆ ಸಂಪಿಗೆ ಹೂ
ಇಡಬೇಕೋ..ಮನಸು ಕೊಡಬೇಕೋ
ಕೊಡಬೇಕೋ..ಮನಸು ಇಡಬೇಕೋ
ಮಲ್ಲಿಗೆಯ..ಮೊದಲು ಸಂಪಿಗೆಯ
ಸಂಪಿಗೆಯ..ಮೊದಲು ಮಲ್ಲಿಗೆಯ
[ಎಸ್.ಪಿ.ಬಿ]
ಮುದ್ದಾಡೆಂದಿದೆ ಮಲ್ಲಿಗೆ ಹೂ..ಮನಸಿ ಎಂದಿದೆ ಸಂಪಿಗೆ ಹೂ
ಇಡಬೇಕೋ..ಮನಸು ಕೊಡಬೇಕೋ
ಕೊಡಬೇಕೋ..ಮನಸು ಇಡಬೇಕೋ
----------------------------೨--------------------------------
[ಚಿತ್ರ]
ಆ ಆ ಆ ......
[ಚಿತ್ರ]
ಆ ಆ ಆ ......
ಘಮ ಘಮ ಸಂಪಿಗೆಯ ಸುಮತಿಯನು
ಕೆಣಕಿ ಕಾಯಿಸದಿರು
ಕುಸುಮದ ಎದೆಯೊಳಗೆ
ಪ್ರಳಯವ ತಾರದಿರು
ಕೆಣಕಿ ಕಾಯಿಸದಿರು
ಕುಸುಮದ ಎದೆಯೊಳಗೆ
ಪ್ರಳಯವ ತಾರದಿರು
[ಎಸ್.ಪಿ.ಬಿ]
ಹಿಡಿಯಲಿ ಹಿಡಿಯುವ ನಡುವಿನಲಿ
ಬಳುಕಿ ಬೇಯಿಸದಿರು
ತುಂಬಿದ ನಿಶೆ ಒಲೆಗೇ
ಚಂದ್ರನ ಕೂಗದಿರು
[ಚಿತ್ರ]
ಎದೆಯ ಸೆರಗ ಮೋಡದಲ್ಲಿ..ನೀನೆ ಚಂದ್ರನೀಗ
[ಎಸ್.ಪಿ.ಬಿ]
ಹೃದಯ ಮೇರು ಗಿರಿಗಳಲ್ಲಿ..ಕರಗಬೇಕೆ ಈಗ
[ಚಿತ್ರ]
ಬಳಸಿಕೊ..ಕಂಪಿಗೆ
[ಎಸ್.ಪಿ.ಬಿ]
ಸಹಿಸಿಕೊ..ಸಂಪಿಗೆ
[ಚಿತ್ರ]
ಹರೆಯ..ಹೊರೆಯ..ಇಳಿಸೊ..ಇನಿಯ
ಹಿಡಿಯಲಿ ಹಿಡಿಯುವ ನಡುವಿನಲಿ
ಬಳುಕಿ ಬೇಯಿಸದಿರು
ತುಂಬಿದ ನಿಶೆ ಒಲೆಗೇ
ಚಂದ್ರನ ಕೂಗದಿರು
[ಚಿತ್ರ]
ಎದೆಯ ಸೆರಗ ಮೋಡದಲ್ಲಿ..ನೀನೆ ಚಂದ್ರನೀಗ
[ಎಸ್.ಪಿ.ಬಿ]
ಹೃದಯ ಮೇರು ಗಿರಿಗಳಲ್ಲಿ..ಕರಗಬೇಕೆ ಈಗ
[ಚಿತ್ರ]
ಬಳಸಿಕೊ..ಕಂಪಿಗೆ
[ಎಸ್.ಪಿ.ಬಿ]
ಸಹಿಸಿಕೊ..ಸಂಪಿಗೆ
[ಚಿತ್ರ]
ಹರೆಯ..ಹೊರೆಯ..ಇಳಿಸೊ..ಇನಿಯ
ಮುದ್ದಾಡೆಂದಿದೆ ಮಲ್ಲಿಗೆ ಹೂ..ಮನಸಿ ಎಂದಿದೆ ಸಂಪಿಗೆ ಹೂ
ಮಲ್ಲಿಗೆಯ..ಮೊದಲು ಸಂಪಿಗೆಯ
ಸಂಪಿಗೆಯ..ಮೊದಲು ಮಲ್ಲಿಗೆಯ
[ಎಸ್.ಪಿ.ಬಿ]
ಮುದ್ದಾಡೆಂದಿದೆ ಮಲ್ಲಿಗೆ ಹೂ..ಮನಸಿ ಎಂದಿದೆ ಸಂಪಿಗೆ ಹೂ
ಇಡಬೇಕೋ..ಮನಸು ಕೊಡಬೇಕೋ
ಕೊಡಬೇಕೋ..ಮನಸು ಇಡಬೇಕೋ
ಮಲ್ಲಿಗೆಯ..ಮೊದಲು ಸಂಪಿಗೆಯ
ಸಂಪಿಗೆಯ..ಮೊದಲು ಮಲ್ಲಿಗೆಯ
[ಎಸ್.ಪಿ.ಬಿ]
ಮುದ್ದಾಡೆಂದಿದೆ ಮಲ್ಲಿಗೆ ಹೂ..ಮನಸಿ ಎಂದಿದೆ ಸಂಪಿಗೆ ಹೂ
ಇಡಬೇಕೋ..ಮನಸು ಕೊಡಬೇಕೋ
ಕೊಡಬೇಕೋ..ಮನಸು ಇಡಬೇಕೋ
9 ಕಾಮೆಂಟ್‌ಗಳು
Plz upload kannada movie SNEHITARU all songs lyrics in kannada language...