Kallarali Hoovaagi(2006) - Baarappa o belli deepa - lyrics by Hamsalekha

ಸಾಹಿತ್ಯ: ಹಂಸಲೇಖ
ಸಂಗೀತ: ಹಂಸಲೇಖ
ಗಾಯನ: ಕುನಾಲ್ ಗಾಂಜಾವಾಲ
ಬಾರಪ್ಪ ಓ ಬೆಳ್ಳಿ ದೀಪ
ತೇಲಪ್ಪ ನಮ್ಮೂರಲಿ ಸ್ವಲ್ಪ
ತೋರಪ್ಪ ನಿನ್ನ ತಂಪಿನ ರೂಪ
ತಣಿಸಪ್ಪ ನಮ್ ಧರಣಿ ತಾಪ
ಓಡ್ ಬಾ ಓಡ್ ಬಾರೋ
ತಿಂಗಳ ಮಾವ
ಓಡ್ ಬಾ ಓಡ್ ಬಾರೋ
ನಮ್ಮೂರಂದಾವ ನೋಡ್ ಬಾ ನೋಡ್ ಬಾರೋ
ಗಣಪನ ನೆತ್ತಿಗೆ ತಂಪನೆರೆದು ಹೋಗಪ್ಪ
ಬಸವನ ಹೊಟ್ಟೆಯ ತಣ್ಣಗಿಟ್ಟು ಹೋಗಪ್ಪ
ಜನಪದರ ಸ್ವಪ್ನಕ್ಕೆ ಶಿವನ ಕರುಣೆ ತುಂಬಪ್ಪ
ಧರೆಯಾಳೋ ದೊರೆಗಳ ಧರ್ಮವ ಕಾಯಪ್ಪ
ನೋಡಪ್ಪ ಓ ಬೆಳ್ಳಿ ದೀಪ
ತೇಲಪ್ಪ ನಮ್ಮೂರಲಿ ಸ್ವಲ್ಪ
ತೋರಪ್ಪ ನಿನ್ನ ತಂಪಿನ ರೂಪ
ತಣಿಸಪ್ಪ ನಮ್ ಧರಣಿ ತಾಪ
ಓಡ್ ಬಾ ಓಡ್ ಬಾರೋ
ತಿಂಗಳ ಮಾವ
ಓಡ್ ಬಾ ಓಡ್ ಬಾರೋ
ನಮ್ಮೂರಂದಾವ ನೋಡ್ ಬಾ ನೋಡ್ ಬಾರೋ
ನೋಡಪ್ಪ ಓ ಬೆಳ್ಳಿ ದೀಪ
ಮಕ್ಕಳು ಹಾಡಿ ದಣಿದರು ಸ್ವಲ್ಪ
ಇನ್ನು ಮುಂದೆ ನೀನು ಹಾಡು
ಅವರ ಹಾಡಲ್ಲೈತೀ ನಾಡು
ಸೂರ್ಯ ಇರೋವರೆಗೂ ತಿಂಗಳ ಮಾವ
ನೀನೆ ಹಾಡಬೇಕು
ನಿನ್ನ ಬೆಳಕಲ್ಲಿ ಈ ಮಕ್ಕಳ
ಪ್ರೀತಿ ಚೆಲ್ಲಬೇಕು

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು