Thanmayalaadenu from Shreya ghoshal in Paramaathma
ಚಿತ್ರ: ಪರಮಾತ್ಮ (2011),
ಹಾಡು:ತನ್ಮಯಳಾದೇನು, ಸಂಗೀತ: ವೀ ಹರಿಕೃಷ್ಣ, ಹಾಡಿದವರು: ಶ್ರೇಯಾ ಗೋಶಲ್ , ಸಾಹಿತ್ಯ: ಜಯಂತ್ ಕಾಯ್ಕಿಣಿ
ತನ್ಮಯಳಾದೇನು ತಿಳಿಯುವ ಮುನ್ನವೇ, ಕಣ್ಮರೆಯಾಗಲೇ ಹೇಳು ಮರೆಯುವ ಮುನ್ನವೇ..
ನಿನ್ನಲಿ ಜೀವವನ್ನು ಅಡವಿಟ್ಟೂ ಬಂದೆ ನಾನು, ಕಣ್ಮುಚ್ಚಿಯೇ ನಾನ್ ಓದಲೇ ಪುಟ ಒಂದನು.. ಹರಿಯುವ ಮುನ್ನವೇ..
ತನ್ಮಯಳಾದೇನು ತಿಳಿಯುವ ಮುನ್ನವೇ ಕಣ್ಮರೆಯಾಗಲೇ ಹೇಳು ಮರೆಯುವ ಮುನ್ನವೇ...
ನಿನ್ನಲಿ ಜೀವವನ್ನು ಅಡವಿಟ್ಟೂ ಬಂದೆ ನಾನು, ಕಣ್ಮುಚ್ಚಿಯೇ ನಾನ್ ಓದಲೇ ಪುಟ ಒಂದನು.. ಹರಿಯುವ ಮುನ್ನವೇ..
ತನ್ಮಯಳಾದೇನು ತಿಳಿಯುವ ಮುನ್ನವೇ ಕಣ್ಮರೆಯಾಗಲೇ ಹೇಳು ಮರೆಯುವ ಮುನ್ನವೇ...
ತಪ್ಪು ತಿಳಿಯಬೇಡ ನೀನು ಕನಸಿನಲ್ಲಿ ಕಂಡರೆ..
ಬೇರೆ ಏನು ಹೇಳುವಾಗ ಕಣ್ಣು ತುಂಬಿ ಬಂದರೆ..
ಈ ಮಾನಸಿಗೆ ಭಾಸವೂ .. ಎಲ್ಲೇ ನೀನು ನನ್ನ ಕೂಗಿದಂತೆ..
ಸಣ್ಣ ಸಲ್ಲಾಪವನ್ನು ಒಂಟಿಯಾಗಿ ನಡೆಸುತ್ತಾ ನಾ ನಿಂತೆ..
ಮನಸಲ್ಲಿ ಅಂದ ಮಾತು ತಡವಾಗಿ ಕೇಳಿತೇನು..
ಗೊತ್ತಿಲ್ಲದೇ ನಾ ಗೀಚಲೆ ನಾ ಹೆಸರೊಂದನು.. ಅಳಿಸುವ ಮುನ್ನವೇ..

ತನ್ಮಯಳಾದೇನು ತಿಳಿಯುವ ಮುನ್ನವೇ ಕಣ್ಮರೆಯಾಗಲೇ ಹೇಳು ಮರೆಯುವ ಮುನ್ನವೇ..
ಪ್ರತಿಸಲ ಬಾಗಿಲ ಸದ್ದಿಗೆ ಎದೆಯ ವಿಸ್ಪಂದನ..
ತೆರೆದರೆ ಬೀಸುವ ಗಾಳಿಯೂ ಹೀಳಿದೇ ಸಾಂತ್ವಾನ..
ಓ... ನನ್ನ ವಿರಹವು ನಿನ್ನಿಂದ ಇನ್ನು ಚೆಂದ..
ವಿವರಿಸಲಾರೆಯೆಲ್ಲ ನಾ ದೂರದಿಂದ..
ನೆನಪನ್ನು ರಾಶಿಹಾಕಿ ಎಣಿಸುತ್ತಾ ಕೂರಲೇನು..
ಕನ್ನಡಿಯಲಿ ನಾ ಹುಡುಕಲೆ ನಗುವೊಂದನು.. ಉರಿಸುವ ಮುನ್ನವೇ..

0 ಕಾಮೆಂಟ್‌ಗಳು