Paramaathma(2011)- Kannada Movie songs Lyrics - Yavanig gotthu

Enu Madodu Onti Hoovondu Lyrics from Paramaathma 


ಸಂಗೀತ : ಹರಿಕೃಷ್ನ
ಗಾಯನ : ಟಿಪ್ಪು
ಸಾಹಿತ್ಯ : ಯೋಗ್ ರಾಜ್ ಭಟ್
-----------------------------------
ಏನು ಮಾಡೋದು ಒಂಟಿ ಹೂವೊಂದು
ರೋಡಲ್ಲಿ ಸಿಕ್ತು, ರೋಡಲ್ಲಿ ಸಿಕ್ತು
ಏನು ಹೇಳೋದು ಇಂತ ಟೈಮಲ್ಲಿ
ಯಾವನಿಗ್ ಗೊತ್ತು, ಯಾವನಿಗ್ ಗೊತ್ತು
ಎದೆಯಂಬ ಕಾಲಿ ಡಬಕ್ಕೆ ಒಂದು
ಸಣ್ಣ ಕಲ್ಲು ಬಿದ್ದಂಗಾಯ್ತು
ಡಬ್ಬ ಯಾತಕ್ಕೆ ಸೌಂಡು ಮಾಡುತ್ತೊ
ಯಾವನಿಗ್ ಗೊತ್ತು, ಯಾವನಿಗ್ ಗೊತ್ತು
ಇವ್ಳು ಸಿಕ್ತಾಳ, ಕೈ ಕೊಡ್ತಾಳ
ಯಾವನಿಗ್ ಗೊತ್ತು, ಯಾವನಿಗ್ ಗೊತ್ತು
ಅದು ಯಾವ್ದೊ ಒಂಟಿ ಹಕ್ಕಿ ಸದನ್ನ
ಕೇಳುತ್ತಾ ಮಲ್ಕೊಂಡಿದ್ದೆ ಮಧ್ಯಾನ
ಕಾಲ್ ಕೆಜಿ ಪ್ರೀತಿಗೊಂದು ಪದ್ಯಾನ
ಬರೆದಿಟ್ಟೂ ಕೆರೆದುಕೊಂಡೆ ಗಡ್ಡಾನ
ಕಾಳಿದಾಸ ಕಾವ್ಯ ನಮಪ್ಪನ್ನ ಕೇಳ್ರಿ
ಕಾಲಿ ಹಾಳೆಗಿಂತ ಒಳ್ಳೆ ಕಾವ್ಯ ಇಲ್ರಿ
ಹೃದಯದ ಮೇಲೆ, ಹೈ ಹೀಲ್ಡು ಹಾಕಿ
ರಾಜಕುಮಾರಿ ನಿಂತಂಗಾಯ್ತು
ಇಂತ ಟೈಮಲ್ಲಿ ಹಾಡು ಬೇಕಿತ್ತಾ
ಯಾವನಿಗ್ ಗೊತ್ತು, ಯಾವನಿಗ್ ಗೊತ್ತು
ದೇವ ದಾಸಾನು ಎಣ್ಣೆ ಬಿಟ್ಟಿದ್ನಾ
ಯಾವನಿಗ್ ಗೊತ್ತು, ಯಾವನಿಗ್ ಗೊತ್ತು, ಯಾವನಿಗ್ ಗೊತ್ತು.
ಕನಸಲ್ಲಿ ಯಾಕೊ ಯಾವ್ದು ಸಾಲಲ್ಲ
ಮೋಡಾನ ಮುದ್ದು ಮಾಡೊಕಾಗಲ್ಲಾ
ಚಿಟ್ಟೆಗೆ ಚಡ್ಡಿ ಹಾಕೊಕಾಗ್ಲಿಲ್ಲ
ನಿಮ್ಗೆ ಗೊತ್ತಲ್ವ ನಾನು ಮುಟ್ಟಾಳ
ಮತ್ತೆ ಮತ್ತೆ ಬಂತು ಎದೆಯಲ್ಲೊಂದು ಲಹರಿ
ತುಂಬ ಒಳ್ಳೆ ಕನ್ನಡ ಮಾತಾಡ್ಬಿಟ್ಟೆ ಕಣ್ರಿ
ಮೂಗು ಬೊಟ್ಟಾಗಿ ಹುಟ್ಟಿದ್ರೆ ನಾನು
ಇವಳ ಮೊತೀಲೆ ಇರಬಹುದಿತ್ತು
ನನ್ನ ಆಸೆಗೆ ಮೀನಿಂಗ್ ಇರಬಹುದ
ಯಾವನಿಗ್ ಗೊತ್ತು, ಯಾವನಿಗ್ ಗೊತ್ತು
ಮುಂದೆ ಎಲ್ಲಾದ್ರು ತಿಂಡಿ ಸಿಗಬಹುದ
ಯಾವನಿಗ್ ಗೊತ್ತು, ಯಾವನಿಗ್ ಗೊತ್ತು

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು