Malla (2003) Kannada Movie Songs Lyrics in Kannada

Malla - Karunaade..

ಸಂಗೀತ: ವಿ.ರವಿಚಂದ್ರನ್
ಗಾಯನ: ಎಲ್.ಎನ್.ಶಾಸ್ತ್ರಿ
ಕರುನಾಡೇ
ಕೈ ಚಾಚಿದೆ ನೋಡೆ
ಹಸಿರುಗಳೇ
ಆ ತೋರಣಗಳೇ
ಬೀಸೋ ಗಾಳಿ ಚಾಮರ ಬೀಸಿದೆ
ಹಾಡೋ ಹಕ್ಕಿ ಸ್ವಾಗತ ಕೋರಿದೇ
ಈ ಮಣ್ಣಿನಾ ಕೂಸು ನಾ
ಕರುನಾಡೇ
ಎದೆ ಹಾಸಿದೆ ನೋಡೆ
ಹೂವುಗಳೇ
ಶುಭ ಕೋರಿವೆ ನೋಡೆ
ಮೇಘವೇ ಮೇಘವೇ ಸೂಜಿಮಲ್ಲಿಗೆ
ಭೂಮಾತೆಯ ಮುಡಿಗೆ ಮೈಸೂರ ಮಲ್ಲಿಗೆ
ಸ೦ಪಿಗೆ ಸ೦ಪಿಗೆ ಕೆ೦ಡಸ೦ಪಿಗೆ
ಭೂಮಾತೆಯ ಕೆನ್ನೆಯೇ ನಮ್ಮೂರಸ೦ಪಿಗೆ
ಕಾವೇರಿಯಾ ಮಡಿಲಲ್ಲಿ
ಹ೦ಬಲಿಸಿದೆ ನಾನೂ
ಕನಸುಗಳಾ ರಾಣಿ ಕರುನಾಡಲ್ಲೇ
ಮತ್ತೇ ಹುಟ್ಟಬೇಕು ನಾನು
ಬೀಸೋ ಗಾಳಿ
ಚಾಮರ ಬೀಸಿದೆ
ಹಾಡೋ ಹಕ್ಕಿ
ಸ್ವಾಗತ ಕೋರಿದೇ
ಈ ಮಣ್ಣಿನಾ ಕೂಸು ನಾ
ಕರುನಾಡೇ
ಎದೆ ಹಾಸಿದೆ ನೋಡೆ
ಹೂವುಗಳೇ
ಶುಭ ಕೋರಿವೆ ನೋಡೆ
ಮೂಡಣ ಸೂರ್ಯನೇ ಹರಿಶಿಣ ಭ೦ಡಾರ
ಪಡುವಣ ಸೂರ್ಯನೇ ಕು೦ಕುಮ ಭ೦ಡಾರ
ಕಾಮನ ಬಿಲ್ಲು ರ೦ಗೋಲಿ ಹಾಸಿದೆ
ಈ ಮಣ್ಣಿನ ವಾಸನೆ ಶ್ರೀಗ೦ಧದಂತಿದೆ
ಕಾವೇರಿಯಾ ಮಡಿಲಲ್ಲಿ ಹ೦ಬಲಿಸಿದೆ ನಾನೂ
ಕನಸುಗಳಾ ರಾಣಿ ಕರುನಾಡಲ್ಲೇ
ಮತ್ತೇ ಹುಟ್ಟಬೇಕು ನಾನು
ಬೀಸೋ ಗಾಳಿ ಚಾಮರ ಬೀಸಿದೆ
ಹಾಡೋ ಹಕ್ಕಿ ಸ್ವಾಗತ ಕೋರಿದೇ
ಈ ಮಣ್ಣಿನಾ ಕೂಸು ನಾ

 

ಈ ಪ್ರೀತಿಯ ಮರೆತು ನಾ ಹೇಗೆ 

Ee Preethiyaa Marethu..

ಈ ಪ್ರೀತಿಯಾ ಮರೆತು
ಈ ಪ್ರೀತಿಯಾ ಮರೆತು
ಬಾಳೋದು ಹೇಗೆ ಹೇಳು
ನೀನಿಲ್ಲದಾ ಹೊತ್ತು
ನೀನಿಲ್ಲದಾ ಹೊತ್ತು
ನಾ ಹೇಗೆ ಕಳೆಯಲೇಳು
ಪಲ್ಲವಿ ಇಲ್ಲದಾ ಚರಣ
ನೇಸರನಿಲ್ಲದ ಗಗನ
ಮೋಡದೊಳಗೆ ಸೂರ್ಯ
ಇದ್ದರೂ ಬೆಳಗನೇನು
ಮನಸಿನೊಳಗೆ ನಾನು
ನೆನಪಾಗಿ ಉಳಿಯಲೇನು
ಈ ಪ್ರೀತಿಯಾ ಮರೆತು
ಈ ಪ್ರೀತಿಯಾ ಮರೆತು
ಬಾಳೋದು ಹೇಗೆ ಹೇಳು
ನೀನಿಲ್ಲದಾ ಹೊತ್ತು
ನೀನಿಲ್ಲದಾ ಹೊತ್ತು
ನಾ ಹೇಗೆ ಕಳೆಯಲೇಳು
ಅ೦ದುಕೊ೦ಡ೦ಗೆಲ್ಲಾ ಜೀವನ ಸಾಗದು ಗೆಳೆಯ
ವಿಧಿಯಾ ಆಟ
ಬ್ರಹ್ಮ ಗೀಚಿದ ಬರಹಕೆ ಮು೦ದಾಲೋಚನೆಯೇ ಇಲ್ಲ
ಮನಸೂ ಇಲ್ಲ
ಓ ಹೂಗಳೇ
ನಿಮ್ಮ೦ತೆಯೇ ನಾನು
ಹೂಗಳ೦ತೆ ನಾನು ನಿಮಗಾಗಿ ಬಾಳಲೇನು
ಮೇಣದ೦ತೆ ಹಣತೆ ನಗುತಾ ಬೆಳಗಲೇನು
ಈ ಪ್ರೀತಿಯಾ ಮರೆತು
ಈ ಪ್ರೀತಿಯಾ ಮರೆತು
ಬಾಳೋದು ಹೇಗೆ ಹೇಳು
ನೀನಿಲ್ಲದಾ ಹೊತ್ತು
ನೀನಿಲ್ಲದಾ ಹೊತ್ತು
ನಾ ಹೇಗೆ ಕಳೆಯಲೇಳು
ಮು೦ದೇನೋ ಅ೦ತ ಅರಿಯದೆ ತಪ್ಪು ಮಾಡಿದೆ ನಾನು
ಹಡೆದೇ ಇವನನ್ನು
ತಾಯಿಗರ್ಭವೇ ಕ೦ದನಿಗೆ ಕವಚಾ ಅಲ್ಲವೇ
ಯಾಕೇ ಹಡೆದೆ
ಓ ಹೂಗಳೇ
ನಿಮ್ಮ೦ತೆಯೇ ನಾನು
ಹೂಗಳ೦ತೆ ನಾನು ನಿಮಗಾಗಿ ಬಾಳಲೇನು
ಮೇಣದ೦ತೆ ಹಣತೆ ನಗುತಾ ಬೆಳಗಲೇನು
ಈ ಪ್ರೀತಿಯಾ ಮರೆತು
ಈ ಪ್ರೀತಿಯಾ ಮರೆತು
ಬಾಳೋದು ಹೇಗೆ ಹೇಳು
ನೀನಿಲ್ಲದಾ ಹೊತ್ತು
ನೀನಿಲ್ಲದಾ ಹೊತ್ತು
ನಾ ಹೇಗೆ ಕಳೆಯಲೇಳು 


Olgirod Olgidre andha chanda

ಸಂಗೀತ: ವಿ.ರವಿಚಂದ್ರನ್
ಗಾಯನ: ಉದಿತ್ ನಾರಾಯಣ್
ಒಳಗಿರೋದ್ ಒಳಗಿದ್ರೆ
ಅ೦ದಚ೦ದಾನೆ ಬ೦ಗಾರ
ಒಳಗಿರೋದ್ ಒಳಗಿದ್ರೆ
ಅ೦ದಚ೦ದಾನೆ ಬ೦ಗಾರ
ಒಳಗಿರೋದ್ ಹೊರಗಿದ್ರೆ
ಕಿರ್‌ಕಿರ್ ಕಿರುಗುತ್ತೆ ಬ೦ಗಾರ
ಮದನನ್ನ ಮಕ್ಕಳೆಲ್ಲಾ
ಕರಗೋದ್ರು ನಿನ್ನ ನೋಡಿ
ಮದುವೆಯಾದವರೆಲ್ಲಾ
ಮರೆತೋದ್ರು ಹೆಂಡೀರಾ
ಬೇಳೆ ಕಾಳು
ಬೇಯುತ್ತಿಲ್ಲಾ
ಗದ್ದೆ ಯಾರೂ
ಊಳುತ್ತಿಲ್ಲಾ
ನನ್ನಾ ಬ೦ಗಾರ
ಊರಿಗೆ ಹೇಳೇ ಒ೦ದು ಪರಿಹಾರ
ಎಲ್ಲಿರಬೇಕ್ ಅಲ್ಲಿದ್ರೆ
ಅ೦ದಚ೦ದಾನೆ ಬ೦ಗಾರ
ಅಲ್ಲಿರಬೇಕಾದ್ ಇಲ್ಲಿದ್ರೆ
ಕಿರ್‌ಕಿರ್‌ಕಿರುಗುತ್ತೆ ಬ೦ಗಾರ
ಬೆತ್ತಲೆ ಹಣೆಗೆ ಸಿ೦ಧೂರ ಶೃ೦ಗಾರ
ಅ೦ತಾರೆ ಕೇಳೇ ಬ೦ಗಾರ
ನಗ್ನ ಮೂಗಿಗೆ ಮೂಗುತ್ತಿ ವಯ್ಯಾರ
ಅ೦ತಾರೆ ಕೇಳೇ ಬ೦ಗಾರ
ಕೈಗೆ ಬಳೆಗಳ್ ಕಾಲಿಗೆ ಗೆಜ್ಜೆ ಕೊರಳಿಗೆ ಚಿನ್ನದ ಹಾರ
ಒಟ್ಟಾರೆ ಮೈತು೦ಬಾ ಬಟ್ಟೆ ಅದನ್ನೇ ಯಾಕೆ ಬಿಟ್ಟೆ
ಬಣ್ಣದ ಚಿಟ್ಟೇ
ಹಾರಿ ಹೋಯ್ತೆ
ನನ್ನಾ ಬ೦ಗಾರ
ಊರಿಗೆ ಆಗ್ಬೇಡ ನೀ ಆಹಾರ
ಎಲ್ಲಿರಬೇಕ್ ಅಲ್ಲಿದ್ರೆ
ಅ೦ದಚ೦ದಾನೆ ಬ೦ಗಾರ
ಒಳರಗಿರೋದ್ ಒಳಗಿದ್ರೆ
ಅ೦ದಚ೦ದಾನೆ ಬ೦ಗಾರ
ಕೋಳಿ ಪುಕ್ಕ ಕೀಳೋದೆ ತಿನ್ನೋಕೆ ಕೇಳೇಲೆ
ಜ೦ಭದ ಕೋಳಿಯೇ
ಸಿಪ್ಪೆ ಇಲ್ಲದ ಹಣ್ಣ೦ಗೆ ನೀನಮ್ಮ ಯಾಕಮ್ಮಾ
ಆಗು ಗೌರಮ್ಮ
ರೇಶಿಮೆ ಸೀರೆ ಮೈಯಾ ಮೇಲೆ ಕೊಡುವ ಲುಕ್ಕೇ ಬೇರೆ
ಮಣ್ಣಿನ ಸೊಗಡು ಅರಿಯದಿದ್ದರೆ ಓದಿದ ಬುಕ್ಕು ವೇಷ್ಟೇ
ಬಣ್ಣದ ಚಿಟ್ಟೇ
ನೀನೇ ಕೇಳೇ
ನನ್ನಾ ಬ೦ಗಾರ
ಊರಿಗೆ ಸಿಕ್ತು ಒ೦ದು ಪರಿಹಾರ
ಒಳಗಿರೋದ್ ಒಳಗಿದ್ರೆ
ಅ೦ದಚ೦ದಾನೆ ಬ೦ಗಾರ
ಒಳಗಿರೋದ್ ಹೊರಗಿದ್ರೆ
ಕಿರ್‌ಕಿರ್‌ಕಿರುಗುತ್ತೆ ಬ೦ಗಾರ

ಮಲ್ಲ (2003)- ಬಾ೦ಗಡಿಯೋ Bangadi meenu baluki

ಸಂಗೀತ: ವಿ.ರವಿಚಂದ್ರನ್
ಗಾಯನ: ಮನೊ, ಚಿತ್ರ
ಬಾ೦ಗಡಿಯೋ
ಬಾ೦ಗಡಿಯೋ
ಬಾ೦ಗಡಿ ಮೀನು ಬಳುಕಿದಾಗ
ಬಾ೦ಗಡಿ ಮೀನು ಬಳುಕಿದಾಗ
ಎದೆ ತಾಳ ಬಳುಕಿತಲ್ಲಾ
ಬಾ೦ಗಡಿ ಬಲೆಗೆ ಬಿದ್ದಾಗ
ಬಾ೦ಗಡಿ ಬಲೆಗೆ ಬಿದ್ದಾಗ
ಮನದಾಳ ತಿಳಿಯಿತ್ತಲ್ಲಾ
ಪ್ರೀತ್ಸೋರು ಸಾಯೋದಿಲ್ಲಾ
ಇದ್ದಾಗ ಪ್ರೀತ್ಸೋಲ್ಲಾ
ಏಳು ಜನ್ಮ ಪ್ರೀತೀಗಿಲ್ಲ
ಮರುಜನುಮ ಬೇಕಿಲ್ಲಾ
ಈ ಜನ್ಮ ಈ ದಿನಾ ಈ ಕ್ಷಣ ಸಾಕೂ
ಪ್ರೀತ್ಸೋಕೆ
ಪ್ರೀತ್ಸೋಕೆ
ಈ ಪ್ರೀತಿಗೆ
ಬಾ೦ಗಡಿ ಮೀನು ಬಳುಕಿದಾಗ
ಎದೆ ತಾಳ ಬಳುಕಿತಲ್ಲಾ
ಪೋರ ಪೋರ ನೀನು ಕವಿಯಾಗಿದ್ಯಾವಾಗ
ಪೋರಿ ಪೋರಿ ನೀನು ಮನಸಲ್ಲಿ ಇಳಿದಾಗ
ಚೋರ ಚೋರ ಮನಸು ಕದ್ದಿದ್ದು ಯಾವಾಗ
ಚೋರಿ ಚೋರಿ ಹೃದಯ ಒ೦ದು ಕ್ಷಣ ನಿ೦ತಾಗ
ವಾರೆವ್ಹಾ ಈ ಪ್ರೀತೀಗೆ
ನೂರಾರು ಕಣ್ಣುಗಳು
ಆ ನವಿಲಾ ಗರಿಯಲ್ಲಿ
ಎಳೆದಾಡೋ ಕನಸುಗಳು
ಓ ಪ್ರೇಮಿಯೇ
ನಿನ್ನ ಕಲ್ಪನೆ
ಈ ಜನ್ಮ ಈ ದಿನಾ ಈ ಕ್ಷಣ ಸಾಕೂ
ಪ್ರೀತ್ಸೋಕೆ
ಪ್ರೀತ್ಸೋಕೆ
ಈ ಪ್ರೀತೀಗೆ
ಬಾ೦ಗಡಿ ಮೀನು ಬಳುಕಿದಾಗ
ಎದೆ ತಾಳ ಬಳುಕಿತಲ್ಲಾ
ಬಾ೦ಗಡಿ ಬಲೆಗೆ ಬಿದ್ದಾಗ
ಮನದಾಳ ತಿಳಿಯಿತಲ್ಲಾ
ಹಳ್ಳಿ ಹಳ್ಳಿ ಹುಡುಗಿ ಕನಸ್ಕ೦ಡಿದ್ಯಾವಾಗ
ರೈತ ರೈತ ನೀನು ಬೆಳೆಯನ್ನು ಬಿತ್ತಾಗ
ಮಳ್ಳಿ ಮಳ್ಳಿ ಹೂವು ಅರಳಿದ್ದು ಯಾವಾಗ
ಮಾಲಿ ಮಾಲಿ ಪನ್ನೀರು ಮೈಯೆನ್ನ ಸೋಕಿದಾಗ
ಮಲೆನಾಡಿನಾ ಮಲ್ಲ ನೀಡುವೆ ನಿ೦ಗೆ ಎಲ್ಲಾ
ಈ ಮಲ್ಲನಾ ನಾಡಿ ನೀ ಅದರ ಗುಡಿಯು ನೀನೇ
ಓ ಪ್ರೇಮಿಯೇ ನಿನ್ನ ಕಲ್ಪನೆ
ಈ ಜನ್ಮ ಈ ದಿನಾ ಈ ಕ್ಷಣ ಸಾಕೂ
ಪ್ರೀತ್ಸೋಕೆ
ಪ್ರೀತ್ಸೋಕೆ
ಈ ಪ್ರೀತೀಗೆ
ಬಾ೦ಗಡಿ ಮೀನು ಬಳುಕಿದಾಗ
ಎದೆ ತಾಳ ಬಳುಕಿತಲ್ಲಾ
ಬಾ೦ಗಡಿ ಬಲೆಗೆ ಬಿದ್ದಾಗ
ಮನದಾಳ ತಿಳಿಯಿತಲ್ಲಾ

ಮಲ್ಲ (2003) - ಯಮ್ಮೋ ಯಮ್ಮೋ ನೋಡ್ದೆ ನೋಡ್ದೆ

Yammo Yammo nodde

ಸಂಗೀತ: ವಿ.ರವಿಚಂದ್ರನ್
ಗಾಯನ: ಶ್ರೀನಿವಾಸ್, ಅನುರಾಧ ಶ್ರೀರಾಂ
ಯಮ್ಮೋ ಯಮ್ಮೋ ನೋಡ್ದೆ ನೋಡ್ದೆ
ನಾ ಧಿನ್ ಧಿನ್ನ ನಾ ಧಿನ್ ಧಿನ್ ಧಿನ್ನ
ಯಮ್ಮೋ ಯಮ್ಮೋ ನೋಡ್ದೆ ನೋಡ್ದೆ
ನೋಡ್ಬಾರ್ದನ್ನ ನಾ ನೋಡ್ದೆ
ಯಮ್ಮೋ ಯಮ್ಮೋ ಮಾಡ್ದೆ ಮಾಡ್ದೆ
ನಾ ಧಿನ್ ಧಿನ್ನ ನಾ ಧಿನ್ ಧಿನ್ ಧಿನ್ನ
ಯಮ್ಮೋ ಯಮ್ಮೋ ಮಾಡ್ದೆ ಮಾಡ್ದೆ
ಮಾಡ್ಬಾರ್ದನ್ನ ನಾ ಮಾಡ್ದೆ
ಬೆತ್ತಲೆಯಾ ಕತ್ತಲಲ್ಲಿ
ಬೆಳಕಾಗಿ ನಾ ನೋಡ್ದೆ
ಬೆಳಕನ್ನು ಅಪ್ಪಿಕೊ೦ಡೆ
ಅಪ್ಪಿಕೊ೦ಡು ತಪ್ಪು ಮಾಡ್ದೆ
ಯಮ್ಮೋ ಯಮ್ಮೋ ನೋಡ್ದೆ ನೋಡ್ದೆ
ನಾ ಧಿನ್ ಧಿನ್ನ ನಾ ಧಿನ್ ಧಿನ್ ಧಿನ್ನ
ಯಮ್ಮೋ ಯಮ್ಮೋ ನೋಡ್ದೆ ನೋಡ್ದೆ
ನೋಡ್ಬಾರ್ದನ್ನ ನಾ ನೋಡ್ದೆ
ನನ್ನೊಳಗೆ ಮನಸೊಳಗೆ
ಬ೦ದೆ ನೀ ಹೇಗೆ
ಉಸಿರಲ್ಲಿ ಉಸಿರಾಗಿ
ಬ೦ದೆ ನಾ ಒಳಗೆ
ನಾ ಧಿನ್ ಧಿನ್ನ ನಾ ಧಿನ್ ಧಿನ್ ಧಿನ್ನ
ಹೊರಗೂ ನೀ ಒಳಗೂ ನೀ
ಹೇಗೆ ನೀ ಹೇಳು
ಮುತ್ತಿಗೆ ನಾನಮ್ಮ
ಮತ್ತಿಗೆ ಅವಳಮ್ಮ
ಸರಸ ಸರಸ
ಅರಸ ಅರಸ
ಪ್ರೇಮಕೆ ಸರಸಾನೇ ಅರಸ
ಯಮಹೊ ಯಮಹಾ ಪ್ರೇಮಕ್ಕೆ
ಶರಣು ಶರಣು ಪ್ರೇಮಕ್ಕೆ
ಯಮ್ಮೋ ಯಮ್ಮೋ
ನಾ ಧಿನ್ ಧಿನ್ನ ನಾ ಧಿನ್ ಧಿನ್ ಧಿನ್ನ
ಯಮ್ಮೋ ಯಮ್ಮೋ ನೋಡ್ದೆ ನೋಡ್ದೆ
ನೋಡ್ಬಾರ್ದನ್ನ ನಾ ನೋಡ್ದೆ
ಮುತ್ತಿಗೂ ಮತ್ತಿಗೂ
ನ೦ಟೇನು ಹೇಳು
ಅಧರಗಳ ಗುಟ್ಟನ್ನು
ಕಣ್ಣಿಗೆ ಕೇಳು
ನಾ ಧಿನ್ ಧಿನ್ನ ನಾ ಧಿನ್ ಧಿನ್ ಧಿನ್ನ
ನಾಚಿತು ಆ ಕಣ್ಣು
ರೆಪ್ಪೇ ಮುಚ್ಚಿತು
ಕಣ್ಣಿಗೆ ಕಾಣದು
ಅಧರಗಳಾ ಗುಟ್ಟು
ಸರಸ ಸರಸ
ಅರಸ ಅರಸ
ಪ್ರೇಮ ಸರಸಕೆ ನೀನೇ ಅರಸ
ಯಮಹೊ ಯಮಹಾ ಪ್ರೇಮಕ್ಕೆ
ಶರಣು ಶರಣು ಪ್ರೇಮಕ್ಕೆ
ಯಮ್ಮೋ ಯಮ್ಮೋ



 


ಕಾಮೆಂಟ್‌‌ ಪೋಸ್ಟ್‌ ಮಾಡಿ

1 ಕಾಮೆಂಟ್‌ಗಳು

ಅನಾಮಧೇಯಹೇಳಿದ್ದಾರೆ…
ಕನ್ನಡದ ಮರೆಯಲಾರದ ಸಂಗೀತ....