Malaya Maarutha(1986) - Malaya marutha Gaana Kannada Movie Songs Lyrics

Malaya Maarutha Kannada Movie Songs Lyrics in Kannada For Free
Cast: Vishnuvardhan,Saritha,Madhavi

ಸಂಗೀತ: ವಿಜಯಭಾಸ್ಕರ್
ಕೆ.ಜೆ.ವೈ: ಮಲಯ ಮಾರುತ ಗಾನ
ಈ ಪ್ರಣಯ ಜೀವನ ಯಾನ
ಎಸ್.ಜೆ: ಮಲಯ ಮಾರುತ ಗಾನ
ಈ ಪ್ರಣಯ ಜೀವನ ಯಾನ
ಕೆ.ಜೆ.ವೈ: ಮಧುರ ತಾನ
ಸುಖ ಸೋಪಾನ
ಎಸ್.ಜೆ: ಮಧುರ ತಾನ
ಸುಖ ಸೋಪಾನ
ಇಬ್ರು: ಸಂಗೀತ ನಾಟ್ಯದ ಮಿಲನ
ಮಲಯ ಮಾರುತ ಗಾನ
ಎಸ್.ಜೆ: ಯೌವನ ತನುವಲಿ ಕುಣಿಯುತಲಿರಲು
ಹೃದಯದಿ ಸಾಗರದಂತೆ
ಯೌವನ ತನುವಲಿ ಕುಣಿಯುತಲಿರಲು
ಹೃದಯದಿ ಸಾಗರದಂತೆ
ಕೆ.ಜೆ.ವೈ: ಹೊಸ ಹೊಸ ಬಯಕೆಯ ಅಲೆಗಳು ಏಳುತ
ಹೊಸ ಹೊಸ ಬಯಕೆಯ ಅಲೆಗಳು ಏಳುತ
ತರುವುದು ಪ್ರಣಯದ ಚಿಂತೆ
ಎಸ್.ಜೆ: ರತಿಯೆ ಎದುರಲಿ ನಿಂತಿರುವಂತೆ
ಕೆ.ಜೆ.ವೈ: ಸನಿಹಕೆ ಸರಸಕೆ ಬಾ ಎಂದಂತೆ
ಇಬ್ರು: ಅಂದವೆ ಕಣ್ಣಲ್ಲಿ
ಆನಂದವೆ ಬಾಳಲ್ಲಿ
ಮಲಯ ಮಾರುತ ಗಾನಾ
ಈ ಪ್ರಣಯ ಜೀವನ ಯಾನಾ
ಸಂಗಡಿಗರು: ಸಾ ಪಾ ನಿ ಸ ನಿ ಸ ಪಾ
ಮಾ ನಿ ದ ನಿ ದ ನಿ ಮಾ
ಗ ಗಾ ಪ ದ ಪ ದ ದಾ
ರಿ ಪಾ ಪಾ ಗ ರಿ ಸಾ
ಕೆ.ಜೆ.ವೈ: ಒಲವಿನ ಬಲೆಯಲಿ ಸೆರೆಯಾಗಿರಲು
ಮೌನವು ಸಂಗೀತದಂತೆ
ಎಸ್.ಜೆ: ಸ ರಿ ಗ ಮಾ ಮ ಮ ಗ
ಕೆ.ಜೆ.ವೈ: ಮ ಪ ದ ನೀ ನಿ ನಿ ದ
ಎಸ್.ಜೆ: ಪ ದ ನಿ ಸಾ ಸ ಸ ನಿ
ಕೆ.ಜೆ.ವೈ: ದ ನಿ ಸ ರೀ ರಿ ರಿ ಸ
ಎಸ್.ಜೆ: ನಿ ದ ಪ ದ ಮ ಗ ರಿ
ಕೆ.ಜೆ.ವೈ: ರಿ ಗ ಮ ಪ ದ ನಿ ಸ
ಎಸ್.ಜೆ: ರಿ ಗ ಮ ಪ ದ ನಿ ಸ
ಇಬ್ರು: ಸ ನಿ ದ ನಿ ನಿ ದ ಪ ದ ನಿ ಸ
ಕೆ.ಜೆ.ವೈ: ಒಲವಿನ ಬಲೆಯಲಿ ಸೆರೆಯಾಗಿರಲು
ಮೌನವು ಸಂಗೀತದಂತೆ
ಎಸ್.ಜೆ: ನೇಹವು ಸುರಿಸುವ ಮಳೆ ನೀರೆಲ್ಲ
ಪನ್ನೀರಿನ ಹನಿ ಹನಿಯಂತೆ
ಕೇ.ಜೆ.ವೈ: ಕಾಮನ ಬಿಲ್ಲೆ ಬಳಿ ಕರೆದಂತೆ
ಎಸ್.ಜೆ: ಪ್ರೇಮದ ಎಲ್ಲೆಯ ಪೂಜಿಸಿದಂತೆ
ಇಬ್ರು: ಅಂದವೆ ಕಣ್ಣಲ್ಲಿ
ಆನಂದವೆ ಬಾಳಲ್ಲಿ
ಮಲಯ ಮಾರುತ ಗಾನಾ
ಈ ಪ್ರಣಯ ಜೀವನ ಯಾನ
ಕೆ.ಜೆ.ವೈ: ಮನಸಿಜ ಮನದಲಿ ಆಡುತಲಿರಲು
ಸೂರ್ಯನು ಚಂದಿರನಂತೆ
ಎಸ್.ಜೆ: ಗಾಳಿಗೆ ಆಡುವ ಹಸುರೆಲೆ ಎಲ್ಲ
ಅರಳಿದ ಕುಸುಮಗಳಂತೇ
ಕೆ.ಜೆ.ವೈ: ಮನಸಿಜ ಮನದಲಿ ಆಡುತಲಿರಲು
ಸೂರ್ಯನು ಚಂದಿರನಂತೆ
ಎಸ್.ಜೆ: ಗಾಳಿಗೆ ಆಡುವ ಹಸುರೆಲೆ ಎಲ್ಲ
ಅರಳಿದ ಕುಸುಮಗಳಂತೇ
ಕೆ.ಜೆ.ವೈ: ಜಗವೇ ಸುಂದರ ಹೂಬನದಂತೆ
ಎಸ್.ಜೆ: ಸುಖವೇ ಎಲ್ಲೆಡೆ ತುಂಬಿರುವಂತೆ
ಇಬ್ಬರು: ಅಂದವೆ ಕಣ್ಣಲ್ಲಿ
ಆನಂದವೆ ಬಾಳಲ್ಲಿ
ಮಲಯ ಮಾರುತ ಗಾನ
ಈ ಪ್ರಣಯ ಜೀವನ ಯಾನ
ಮಧುರ ತಾನ
ಸುಖ ಸೋಪಾನ
ಸಂಗೀತ ನಾಟ್ಯದ ಮಿಲನ
ಮಲಯ ಮಾರುತ ಗಾನ


NATANA VISHAARADA NATASHEKHARA 

ಸಂಗೀತ: ವಿಜಯಭಾಸ್ಕರ್
ಗಾಯನ: ಕೆ.ಜೆ.ವೈ
ತಾಂ ತರಿಗಿಡ ತದ್ದೀಂ
ತಕ ತಕಿಟ ತತ್ ದಿತ್
ತರಿಗಿಡ ತಾಂ ದಿತ್ತಾಂ
ತಕ ತಕಿಟ ತಜಣು
ತಕ ತಕಿಟ ತದಿಮಿ
ತದೀಂತ ತದೀಂತ ತದೀಂತ
ಕಿಡ್ತಕ ತಾಂ
ನಟನ ವಿಶಾರದ ನಟಶೇಖರ
ನಟನ ವಿಶಾರದ ನಟಶೇಖರ
ಸಂಗೀತ ಸಾಹಿತ್ಯ ಗಂಗಾಧರ
ನಟನ ವಿಶಾರದ ನಟಶೇಖರ
ನವ ವಿಧ ವಿನ್ಯಾಸ
ನವ ರಸ ನವ ಲಾಸ್ಯ
ನವ ಕಾವ್ಯ ಕಾರಣ
ನವ ಚೇತನ
ಮ ಗ ಮ ದ ನಿ ದ ಮ ದ ನಿ ದ ನಿ ದ ನಿ ಮ ದ ನಿ ಗ ಸ ಗ ನಿ ಸ ದ ನಿ ಗ ಮ ದ ನಿ ಸ
ಸ ಮ ಗ ಸ ಸ ನಿ ಸ ನಿ ದ ನಿ ದ ಮ ದ ನಿ ಸ ಸ ನಿ ದ ನಿ ದ ದ ಮ ಮ ದ ಮ ಗ ಸ
ನವ ವಿಧ ವಿನ್ಯಾಸ
ನವ ರಸ ನವ ಲಾಸ್ಯ
ನವ ಕಾವ್ಯ ಕಾರಣ
ನವ ಚೇತನ
ನವ ಕೋಟಿ ಲೀಲಾ ವಿನೋದಾ ವಿಲಾಸಾ
ನವ ಕೋಟಿ ಲೀಲಾ ವಿನೋದಾ ವಿಲಾಸಾ
ನವ ಭಾವ ಆನಂದ ಗೌರಿ ವರಾ
ನಟನ ....
ತಾಂಗು ತಕಿಟ ತಕ್ಕ ದಿಮ್ಮಿ
ತಜಂ ತಕಿಟ ತಕ್ಕ ದಿಮ್ಮಿ
ತಕಿಟ ತಕಿಟ ತಾಂ
ತಜಣು ತಜಣು
ತದ್ದಿಂತದೀಂತ ತಾಂಗು ತಕ ದಿಮಿ
ಕಿಡ್ತಕ ದೀಂತ ದೀಂತ
ತಾಂಕು ತಕದಿಮಿ
ತದ್ದೀಂ ತದ್ದೀಂ ತದ್ದೀಂ ತದ್ದೀಂ
ತಾಂ ತಾಂ ತಕ ತಾಂ ತಾಂ ತಕ ತಕಜಣು ತಾಂ ತಾಂ ತಕ ತಾಂ ತಾಂ ತಕ ಕಿಡ್ತಕತಾಂ
ಅಷ್ಟಾಂಗ ಯೋಗ ಶೀಲ
ಅದ್ವೈತ ತತ್ವ ಲೋಲ
ಇಶ್ಟಾರ್ಥ ಸಿದ್ಧಿ ಮಾಲ
ಅಧ್ಯಾತ್ಮ ತತ್ವ ಮೂಲ
ಅಷ್ಟಾಂಗ ಯೋಗ ಶೀಲ
ಅದ್ವೈತ ತತ್ವ ಲೋಲ
ಇಶ್ಟಾರ್ಥ ಸಿದ್ಧಿ ಮಾಲ
ಅಧ್ಯಾತ್ಮ ತತ್ವ ಮೂಲ
ಸಕಲ ಮಂತ್ರ
ನಿಖಿಲ ತಂತ್ರ
ಅಖಿಲ ಯಂತ್ರ ಸಂಚಿತ
ಏಕ ಮೇವ ಅದ್ವಿತೀಯ
ಲೋಕ ಲೋಕ ಪೂಜಿತ
ವಿಶ್ವನಾಥ ವಿಶ್ವರೂಪ
ವಿಶ್ವೇಶ್ವರ ವಿರೂಪಾಕ್ಷ
ವಿಶ್ವನಾಥ ವಿಶ್ವರೂಪ
ವಿಶ್ವೇಶ್ವರ ವಿರೂಪಾಕ್ಷ
ಪಾಹಿಮಾಂ ತ್ರಾಹಿಮಾಂ
ಪರಮೇಶ್ವರ ಪಾಲಾಕ್ಷ
ನಟನ ....

 SHREENIVASA ENNA BITTU

ಶ್ರೀನಿವಾಸ ಎನ್ನಬಿಟ್ಟು ನೀ ಅಗಲದೆ ಹೇ ಶ್ರೀನಿವಾಸ
ಮುನ್ನ ಮಾಡಿದ ದುಷ್ಕರ್ಮದಿ ಬಳಲಿದೆ
ಮುನ್ನ ಮಾಡಿದ ದುಷ್ಕರ್ಮದಿ ಬಳಲಿದೆ
ಇನ್ನಾದರು ಎನ್ನ ಕೈ ಪಿಡಿಯೊ
ಘನ್ನ ಮಹಿಮ ಶ್ರೀ ಪುರಂದರ ವಿಠಲ
ಘನ್ನ ಮಹಿಮ ಶ್ರೀ ಪುರಂದರ ವಿಠಲ
ಮನ್ನಿಸಿ ಎನ್ನನು ಕಾಯಬೇಕೊ
ಶ್ರೀನಿವಾಸ ಎನ್ನಬಿಟ್ಟು ನೀ ಅಗಲದೆ ಹೇ ಶ್ರೀನಿವಾಸ
ಶ್ರೀನಿವಾಸ ಎನ್ನಬಿಟ್ಟು ನೀ ಅಗಲದೆ ಹೇ ಶ್ರೀನಿವಾಸ
ಸಂಗೀತ ಜ್ಞಾನಮು ಭಕ್ತಿ ವಿನಾ
ಸನ್ಮಾರ್ಗಮುಗಲದೆ ಮನಸಾ ... ೪
ಸಂಗೀತ ಜ್ಞಾನಮು ಭಕ್ತಿ ವಿನಾ

EE SNEHA NINADE

ಸಂಗೀತ: ವಿಜಯಭಾಸ್ಕರ್
ವಾಣಿ: ಈ ಸ್ನೇಹ ನಿನದೆ
ಈ ಜೀವ ನಿನದೆ
ನನ್ನ ಎದೆಯಲಿ ನೀನು
ಮಿಡಿದಿಹ ಆಸೆ ಅಲೆಯಲಿ
ನಾನು ತೇಲಿದೆ
ಎಸ್ ಪಿ ಬಿ: ಈ ರಾಗ ನಿನದೆ
ಈ ಭಾವ ನಿನದೆ
ನನ್ನ ಎದೆಯಲಿ ನೀನು
ಮಿಡಿದಿಹ ಸ್ವರ ತರಂಗದೆ
ನಾನು ತೇಲಿದೆ
ವಾಣಿ: ಈ ಸ್ನೇಹ ನಿನದೆ
ಎಸ್ ಪಿ ಬಿ: ಈ ರಾಗ ನಿನದೆ
ವಾಣಿ: ಮುಂಜಾನೆ ಮಂಜಂತೆ
ತಂಪಾಗಿ ಬಂದೆ
ಚೈತ್ರದ ಚಿಗುರಂತೆ
ಹಸಿರನು ತಂದೆ
ಎಸ್ ಪಿ ಬಿ: ವಾಗ್ದೇವಿ ಒಲಿದಂತೆ
ನೀ ನಗುತ ಬಂದೆ
ಶೃಂಗಾರ ಶಿಲೆಯಂತೆ
ಕಣ್ತುಂಬಿ ನಿಂತೆ
ವಾಣಿ: ಅರಿಯದ ಸಂತೋಷ
ನಿನ್ನಲ್ಲಿ ಕಂಡೆ || ೨
ಎಸ್ ಪಿ ಬಿ: ಜೀವನ ಸಂಗೀತ
ನಿನ್ನಿಂದ ಕಂಡೆ
ವಾಣಿ: ಈ ಸ್ನೇಹ ನಿನದೆ
ಎಸ್ ಪಿ ಬಿ: ಈ ಜೀವ ನಿನದೆ
ಬಾನಲ್ಲಿ ಮಳೆಬಿಲ್ಲ ಆ ನಿನ್ನ ನೋಟ
ಅದರಲ್ಲಿ ನಾ ಕಂಡೆ ಹೊಸ ಪ್ರೇಮ ಪಾಠ
ವಾಣಿ: ಬಿಳಿ ಮುತ್ತ ಮಳೆಯಂತೆ
ಈ ನಿನ್ನ ಮಾತು
ಆ ಜೇನ ಸವಿಯಲ್ಲಿ
ನಾ ಹೋದೆ ಸೋತು
ಎಸ್ ಪಿ ಬಿ: ಬಾಡಿದ ಗಿಡದಲ್ಲಿ
ಹೊಸ ಜೀವ ತಂದೆ || ೨
ವಾಣಿ: ಬಾಳಿನ ಕತೆಯಲ್ಲಿ
ಹೊಸ ಅರ್ಥ ತಂದೆ
ಎಸ್ ಪಿ ಬಿ: ಈ ರಾಗ ನಿನದೆ
ಈ ಭಾವ ನಿನದೆ
ನನ್ನ ಎದೆಯಲಿ ನೀನು
ಮಿಡಿದಿಹ ಸ್ವರ ತರಂಗದೆ
ನಾನು ತೇಲಿದೆ
ವಾಣಿ: ಈ ಸ್ನೇಹ ನಿನದೆ
ಈ ಜೀವ ನಿನದೆ
ನನ್ನ ಎದೆಯಲಿ ನೀನು
ಮಿಡಿದಿಹ ಆಸೆ ಅಲೆಯಲಿ
ನಾನು ತೇಲಿದೆ
ವಾಣಿ ಮತ್ತು ಎಸ್ ಪಿ ಬಿ: ಈ ರಾಗ ನಿನದೆ
ಈ ಭಾವ ನಿನದೆ


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು