Malaya Maarutha(1986) - Kannada Movie Songs Lyrics

Ellelloo Sangeethave Lyrics


ಸಾಹಿತ್ಯ: ಚಿ.ಉದಯಶಂಕರ್
ಸಂಗೀತ: ವಿಜಯಭಾಸ್ಕರ್
ಗಾಯನ: ಕೆ.ಜೆ.ಯೇಸುದಾಸ್
ಎಲ್ಲೆಲ್ಲು ಸಂಗೀತವೇ ಎಲ್ಲೆಲ್ಲು ಸಂಗೀತವೇ
ಎಲ್ಲೆಲ್ಲು ಸೌಂದರ್ಯವೇ
ಎಲ್ಲೆಲ್ಲು ಸಂಗೀತವೇ, ಎಲ್ಲೆಲ್ಲು ಸೌಂದರ್ಯವೇ
ಕೇಳುವ ಕಿವಿಯಿರಲು, ನೋಡುವ ಕಣ್ಣಿರಲು
ಎಲ್ಲೆಲ್ಲು ಸಂಗೀತ
(ಸ್ವರ ಸಂಚಾರ)
ಎಲ್ಲೆಲ್ಲು ಸಂಗೀತವೇ||
ಸಂಧ್ಯೆಯು ಬಂದಾಗ ಆಗಸ ಅಂದಾ
ಆ ಉಷೆ ನಗುವಾಗ ಲೋಕವೆ ಚಂದಾ..
(ಆಲಾಪನೆ)
ಸಂಧ್ಯೆಯು ಬಂದಾಗ ಆಗಸ ಅಂದಾ
ಆ ಉಷೆ ನಗುವಾಗ ಲೋಕವೆ ಚಂದ
ಬಳುಕುವ ಲತೆಯಿಂದ ಅರಳುವ ಹೂವಿಂದ
ಆ ಸುಮ ಚೆಲ್ಲುವ ಪರಿಮಳದಿಂದ
ಎಲ್ಲೆಲ್ಲು ಸೌಂದರ್ಯವೇ..||
ಹರಿಯುವ ನೀರಲಿ
ಕಲ ಕಲರವವೂ
ಕೋಗಿಲೆ ಕೊರಳಿನ ಸುಮಧುರ ಸ್ವರವೂ
ಹರಿಯುವ ನೀರಲಿ ಕಲ ಕಲರವವು
ಕೋಗಿಲೆ ಕೊರಳಿನ ಸುಮಧುರ ಸ್ವರವೂ
ಭ್ರಮರದ ಝೇಂಕಾರ
ಮುನಿಗಳ ಓಂಕಾರ
ಈ ಜಗ ತುಂಬಿದೆ ಮಾಧುರ್ಯದಿಂದಾ||
ಎಲ್ಲೆಲ್ಲು ಸಂಗೀತವೇ
ಸಂಗೀತ ಎಂದಿಗು ಸುರಗಂಗೆಯಂತೇ
ಸಂಗೀತ ಎಂದಿಗು ರವಿಕಾಂತಿಯಂತೇ
(ಆಲಾಪನೆ)
ಸಂಗೀತ ಎಂದಿಗು ಸುರಗಂಗೆಯಂತೆ
ಸಂಗೀತ ಎಂದಿಗು ರವಿಕಾಂತಿಯಂತೇ
ಬಿಸಿಲಲಿ ತಂಗಾಳಿ ಹೊಸ ಜೀವ ತಂದಂತೆ
ಆ ದೈವ ಸುಧೆಯಿಂದ ಪರಮಾರ್ಥವಂತೆ||
ಎಲ್ಲೆಲ್ಲು ಸಂಗೀತವೇ, ಎಲ್ಲೆಲ್ಲು ಸೌಂದರ್ಯವೇ
ಕೇಳುವ ಕಿವಿಯಿರಲು, ನೋಡುವ ಕಣ್ಣಿರಲು
ಎಲ್ಲೆಲ್ಲು ಸಂಗೀತವೇ


 Malaya Maarutha - Adharam Madhuram

ಸಂಗೀತ: ವಿಜಯಭಾಸ್ಕರ್
ಸಾಹಿತ್ಯ: ವಲ್ಲಭಾಚಾರ್ಯ
ವಾಣಿ: ಸ
ಎಸ್ ಪಿ ಬಿ: ಸ
ವಾಣಿ: ಅಧರಂ ಮಧುರಂ ವದನಂ ಮಧುರಂ
ನಯನಂ ಮಧುರಂ ಹಸಿತಂ ಮಧುರಂ
ಎಸ್ ಪಿ ಬಿ: ಮಧುರಂ ಮಧುರಂ
ವಾಣಿ: ಹೃದಯಂ ಮಧುರಂ ಗಮನಂ ಮಧುರಂ
ಮಧುರಾಧಿಪತೆಹೇ ಅಖಿಲಂ ಮಧುರಂ
ಎಸ್ ಪಿ ಬಿ: ಮಧುರಂ ಮಧುರಂ
ವಾಣಿ: ರಿ
ಎಸ್ ಪಿ ಬಿ: ರಿ
ವಾಣಿ: ವಚನಂ ಮಧುರಂ ಚರಿತಂ ಮಧುರಂ
ವಸನಂ ಮಧುರಂ ವಲಿತಂ ಮಧುರಂ
ಎಸ್ ಪಿ ಬಿ: ಮಧುರಂ ಮಧುರಂ
ವಾಣಿ: ಚಲಿತಂ ಮಧುರಂ ಭ್ರಮಿತಂ ಮಧುರಂ
ಮಧುರಾಧಿಪತೆಹೇ ಅಖಿಲಂ ಮಧುರಂ
ಎಸ್ ಪಿ ಬಿ: ಮಧುರಂ ಮಧುರಂ
ವಾಣಿ: ಗ
ಎಸ್ ಪಿ ಬಿ: ಗ
ವಾಣಿ: ವೇಣುಃ ಮಧುರಃ ರೆಣುರಃ ಮಧುರಃ
ಪಾಣಿಃ ಮಧುರಃ ಪಾದೌ ಮಧುರೌ
ಎಸ್ ಪಿ ಬಿ: ಮಧುರೌ ಮಧುರೌ
ವಾಣಿ: ನೃತ್ಯಂ ಮಧುರಂ ಸಖ್ಯಂ ಮಧುರಂ
ಮಧುರಾಧಿಪತೆಹೇ ಅಖಿಲಂ ಮಧುರಂ
ಎಸ್ ಪಿ ಬಿ: ಮಧುರಂ ಮಧುರಂ
ವಾಣಿ: ಮ
ಎಸ್ ಪಿ ಬಿ: ಮ
ವಾಣಿ: ಗೀತಂ ಮಧುರಂ ಪೀತಂ ಮಧುರಂ
ಭುಕ್ತಂ ಮಧುರಂ ಸುಪ್ತಂ ಮಧುರಂ
ಎಸ್ ಪಿ ಬಿ: ಮಧುರಂ ಮಧುರಂ
ವಾಣಿ: ರೂಪಂ ಮಧುರಂ ತಿಲಕಂ ಮಧುರಂ
ಮಧುರಾಧಿಪತೆಹೇ ಅಖಿಲಂ ಮಧುರಂ
ಎಸ್ ಪಿ ಬಿ: ಮಧುರಂ ಮಧುರಂ
ವಾಣಿ: ಪ
ಎಸ್ ಪಿ ಬಿ: ಪ
ವಾಣಿ: ಕರಣಂ ಮಧುರಂ ತರಣಂ ಮಧುರಂ
ಹರಣಂ ಮಧುರಂ ರಮಣಂ ಮಧುರಂ
ಎಸ್ ಪಿ ಬಿ: ಮಧುರಂ ಮಧುರಂ
ವಾಣಿ: ವಮಿತಂ ಮಧುರಂ ಶಮಿತಂ ಮಧುರಂ
ಮಧುರಾಧಿಪತೆಹೇ ಅಖಿಲಂ ಮಧುರಂ
ಎಸ್ ಪಿ ಬಿ: ಮಧುರಂ ಮಧುರಂ
ವಾಣಿ: ದ
ಎಸ್ ಪಿ ಬಿ: ದ
ವಾಣಿ: ಗುಂಜಾ ಮಧುರಾ ಮಾಲಾ ಮಧುರಾ
ಯಮುನಾ ಮಧುರಾ ವೀಛಿ ಮಧುರಾ
ಎಸ್ ಪಿ ಬಿ: ಮಧುರಾ ಮಧುರಾ
ವಾಣಿ: ಸಲಿಲಂ ಮಧುರಂ ಕಮಲಂ ಮಧುರಂ
ಮಧುರಾಧಿಪತೆಹೇ ಅಖಿಲಂ ಮಧುರಂ
ಎಸ್ ಪಿ ಬಿ: ಮಧುರಂ ಮಧುರಂ
ವಾಣಿ: ನಿ
ಎಸ್ ಪಿ ಬಿ: ನಿ
ವಾಣಿ: ಗೋಪಿ ಮಧುರಾ ಲೀಲಾ ಮಧುರಾ
ಯುಕ್ತಂ ಮಧುರಂ ಭುಕ್ತಂ ಮಧುರಂ
ಎಸ್ ಪಿ ಬಿ: ಮಧುರಂ ಮಧುರಂ
ವಾಣಿ: ದೃಷ್ಟಂ ಮಧುರಂ ಶಿಶ್ಟಂ ಮಧುರಂ
ಮಧುರಾಧಿಪತೇ ಅಖಿಲಂ ಮಧುರಂ
ಎಸ್ ಪಿ ಬಿ: ಮಧುರಂ ಮಧುರಂ
ವಾಣಿ: ಸಾ
ಎಸ್ ಪಿ ಬಿ: ಸಾ
ವಾಣಿ: ಗೋಪಾ ಮಧುರಾ ಗಾವೊ ಮಧುರಾ
ಯಷ್ಟಿರ್ ಮಧುರಾ ಸೃಷ್ಟಿರ್ ಮಧುರಾ
ಎಸ್ ಪಿ ಬಿ: ಮಧುರಾ ಮಧುರಾ
ವಾಣಿ: ದಲಿತಂ ಮಧುರಂ ಫಲಿತಂ ಮಧುರಂ
ಮಧುರಾಧಿಪತೇಯೇ ಅಖಿಲಂ ಮಧುರಂ
ಎಸ್ ಪಿ ಬಿ: ಮಧುರಂ ಮಧುರಂ
ವಾಣಿ: ಮಧುರಂ ಮಧುರಂ
ಎಸ್ ಪಿ ಬಿ: ಮಧುರಂ ಮಧುರಂ
ವಾಣಿ: ಮಧುರಂ ಮಧುರಂ
ಎಸ್ ಪಿ ಬಿ: ಮಧುರಂ ಮಧುರಂ
ಎಸ್ ಪಿ ಬಿ: ಮಧುರಂ ಮಧುರಂ
ವಾಣಿ: ಮಧುರಂ ಮಧುರಂ


Hindangali Hidivadeda Kunjara



ಸಂಗೀತ: ವಿಜಯಭಾಸ್ಕರ್
ಕರ್ತೃ: ಅಕ್ಕಮಹಾದೇವಿ
ವಾಣಿ: ಹಿಂಡನಗಲಿ ಹಿಡಿವಡೆದ ಕುಂಜರ ತನ್ನ ವಿಂಧ್ಯವ ನೆನೆವಂತೆ ನೆನೆವೆನಯ್ಯ
ಬಂಧನಕ್ಕೆ ಬಂದ ಗಿಳಿ ತನ್ನ ಬಂಧುವ ನೆನೆವಂತೆ ನೆನೆವೆನಯ್ಯ
ಕಂದಾ ನೀನಿತ್ತ ಬಾ ಎಂದು ನೀವು ನಿಮ್ಮಂದವ ತೋರಯ್ಯ ಚೆನ್ನ ಮಲ್ಲಿಕಾರ್ಜುನ ಚೆನ್ನ ಮಲ್ಲಿಕಾರ್ಜುನ
ಕೇಜೇವೈ: ಹಿಂಡನಗಲಿ ಹಿಡಿವಡೆದ ಕುಂಜರಾ ತನ್ನ ವಿಂಧ್ಯವ ನೆನೆವಂತೆ ನೆನೆವೆನಯ್ಯ
ಬಂಧನಕ್ಕೆ ಬಂದ ಗಿಳಿ ತನ್ನ ಬಂಧುವ ನೆನೆವಂತೆ ನೆನೆವೆನಯ್ಯ
ಕಂದಾ ನೀನಿತ್ತ ಬಾ ಎಂದು ನೀವು ನಿಮ್ಮಂದವ ತೋರಯ್ಯ ಚೆನ್ನ ಮಲ್ಲಿಕಾರ್ಜುನ ಶ್ರೀ ಚೆನ್ನ ಮಲ್ಲಿಕಾರ್ಜುನ




ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು