ABHI (2003) - Vidhi Baraha Entha Ghora Lyrics

ಚಿತ್ರ: ಅಭಿ
ಸಂಗೀತ: ಗುರುಕಿರಣ್
ಹಾಡಿರುವವರು: ಡಾ|ರಾಜ್ ಕುಮಾರ್
ಸಾಹಿತ್ಯ: ಕವಿರಾಜ್
ವಿಧಿ ಬರಹ ಎಂಥ ಘೋರ
ಪ್ರೇಮಿಗಳು ದೂರ ದೂರ
ಹಸಿರಾಗೊ ಪ್ರೇಮ ಕಥೆಗೆ
ವಿಷವಾಗೊ ಜಗವು ಕ್ರೂರ
ಬದುಕು ಪ್ರತಿ ಘಳಿಗೆ
ಒಲವ ಸುಳಿಯೊಳಗೆ
ಏಕೊ ಇಂಥ ಸಮರ
ನೀನೆ ಜೀವ ನೀನೆ ಭಾವ ಅನ್ನೋ ಮಾತಿಗೆ
ಮಾತು ನೀಡಿ ಮನಸೂ ನೀಡಿ ಆಡೋ ಪ್ರೀತಿಗೆ
ಸನಿಹ ವಿರಹ ಕಲಹ ಹಣೆಯ ಬರಹ
ನೋವು ನಲಿವು ಸೋಲು ಗೆಲುವು ಉಂಟು ಪ್ರೀತಿಗೆ
ಯಾರೊ ಬಂಧು ಯಾರೊ ಬಳಗ ಬಾಳ ಪಯಣಕೆ
ಕನಸೋ ಭ್ರಮೆಯೋ ಜಗವೇ ಕುರುಡಾಗಿದೆ

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು