Music : Mysore Anantha Swamy
Album : Deepothsava
Singer: Sunitha Ananthaswamy
ಸಂಗೀತ: ಮೈಸೂರು ಅನಂತಸ್ವಾಮಿ
ಆಲ್ಬಂ: ದೀಪೋತ್ಸವ
ಗಾಯನ: ಸುನಿತ ಅನಂತಸ್ವಾಮಿ
ಪ್ರೀತಿಯ ಕರೆ ಕೇಳಿ
ಆತ್ಮನ ಮೊರೆ ಕೇಳಿ
ನೀ ಬಂದು ನಿಂದಿಲ್ಲಿ ದೀಪ ಹಚ್ಚ
ಮೆಲ್ಲ ನೀ ಬಂದಂದು ಕಣ್ಣಾರೆ ಕಂಡಂದು
ಮನೆಯೆಲ್ಲ ಹೊಳೆದಂತೆ ದೀಪ ಹಚ್ಚ
ಕರಿ ಗೆಜ್ಜೆ ಕುಣಿಸುತ್ತ
ಕಣ್ಣೀರ ಮಿಡಿಯುತ್ತ
ಇರುಳಾಕೆ ಬಂದಳು ದೀಪ ಹಚ್ಚ
ಬಾನಿನಂಗಳದಲ್ಲಿ ಚುಕ್ಕಿ ಹೊಳೆದೆಸೆವಂತೆ
ನನ್ನ ಮನದಂಗಳದಿ ದೀಪ ಹಚ್ಚ
ಹಳೆ ಬಾಳು ಸತ್ತಿತ್ತು
ಕೊಳೆ ಬಾಳು ಸುಟ್ಟಿತ್ತು
ಹೊಸ ಬಾಳು ಹುಟ್ಟಿತ್ತು ದೀಪ ಹಚ್ಚ
ಪ್ರೀತಿಯ ರತಿಗೆ ನೀ ಬೆಳಕಿನ ಆರತಿ
ಬೆಳಗಿ ಕಲ್ಲಾರತಿ ದೀಪ ಹಚ್ಚ
ವಿಶ್ವ ಮೋಹಿತ ಚರಣಾ
ವಿವಿಧ ವಿಶ್ವಾಭರಣಾ
ಆನಂದದ ಕಿರಣಾ ದೀಪ ಹಚ್ಚ
ನೀನೆಂಬ ಜೋತಿಯಲಿ
ನಾನೆಂಬ ಪತಂಗ
ಸೋತ ಉಲಿ ಏಳಲಿ ದೀಪ ಹಚ್ಚ
ನನ್ನಂತರಂಗದೀ ನಂದದೆ ನಿಂದಿಪ
ನಂದಾ ದೀಪವಾಗಿರಲಿ ದೀಪ ಹಚ್ಚ
0 ಕಾಮೆಂಟ್‌ಗಳು