Kannada Song Lyrics of Pancharangi - Lifu Ishtene

ಚಿತ್ರ: ಪಂಚರಂಗಿ
ಸಂಗೀತ: ಮನೋಮೂರ್ತಿ
ಗಾಯಕರು: ಚೇತನ್ ಸೋಸ್ಕ, ಯೋಗರಾಜ್ ಭಟ್, ಅನನ್ಯ ಭಗತ್, ಅಕ್ಷತ ರಾಮನಾಥ್
ಸಾಹಿತ್ಯ: ಯೋಗರಾಜ್ ಭಟ್
ಆ ಗಿಜಿಬಿಜಿಗಿಜಿ ಓ..ಓ.ಓ.. ಓ ಲೈಫ಼ು ಇಷ್ಟೇನೆ
ಕಿರಿಕಿರಿ ಕಯ ಕಯ ಕೊ ಕೊ ಕೋ.. ಲೈಫ಼ು ಹಿಂಗೇನೆ
ಹಾಂ...
ಮುದ್ದು ಕಂದನಾಗಿ ಹುಟ್ಟಿ ಹೆಸರೂ ಗಿಸರೂ ಇಟ್ಟುಕೊಂಡು ಹಂಗೂ ಹಿಂಗೂ ದೊಡ್ಡೊನಾಗು ಲೈಫ಼ು ಇಷ್ಟೇನೆ
ಎದ್ವಾತದ್ವಾ ಮಾರ್ಕ್ಸು ತೆಗೆದೂ ಅಪ್ಪಾ ಹೇಳೋ ಕೋರ್ಸು ಮುಗಿಸಿ ಸ್ನಾನ ಮಾಡ್ಕೊಂಡ್ ಕೆಲಸ ಹುಡುಕು ಲೈಫ಼ು ಇಷ್ಟೇನೆ
ಸಂಬಳಾ ಬರುವಾ ಕೆಲಸಾ ಹಿಡಿದೂ ಸಿಂಬಳಾ ಸುರಿವಾ ಮಕ್ಕಳ ಹಡೆದೂ ಕುಂಬಳಕಾಯಿ ಹಲ್ವ ಮಾಡು ಲೈಫ಼ು ಇಷ್ಟೇನೆ
ನಮ್ಮ ಮಂದಿ ಪಾಪದೋರು ಸ್ವಲ್ಪ ಹಂಗೇನೆ ಕಣ್ಣು ಮುಚ್ಚಿಕ್ಕೊಂಡು ನೋಡು ಲೈಫ಼ು ಹಿಂಗೇನೆ
ಆ ಗಿಜಿಬಿಜಿಗಿಜಿ ಓ..ಓ.ಓ..
ಕಿರಿಕಿರಿ ಕಯ ಕಯ ಕೊ ಕೊ ಕೋ..
ಕಿರಿಯರ ಸರಿಗಮ ಅ ಆ ಇ ಉ ಊ ಎ ಏ ಏ ಒ ಓ ಓ
ಅಪ್ಪಾ ನಿನಗೆ ಟೆನ್ಷನ್ ಯಾಕೊ ಬಿಳಿಯಾ ಕೂದಲಿಗೆ ಕಪ್ಪು ಬಳಕೊ ಡಯಾಬಿಟೀಸಿಗೆ ವಾಕಿಂಗ್ ಮಾಡ್ಕೊ ಲೈಫ಼ು ಇಷ್ಟೇನೆ
ಅಮ್ಮಾ ನೋಡು ರಾಹುಕಾಲ ಬಿಗಿಯಾಗ್ ಹಿಡ್ಕೊ ದೇವರ ಕಾಲು ದೇವರೆ ಕೈಯ ಮುಗಿಯಲಿ ನಿಂಗೆ ಲೈಫ಼ು ಇಷ್ಟೇನೆ
ಗಂಡ ಹೆಂಡತಿ ಇಬ್ಬರೂ ದುಡುದು ಸಾಲ ಮಾಡಿ ಮನೆಯಾ ಕಟ್ಟಿ ಮಕ್ಳೂ ಎಲ್ಲ್ ಹೋದ್ರಂತ ಹುಡುಕಿ ಲೈಫ಼ು ಇಷ್ಟೇನೆ
ಓಡ ಬೇಡ ಸ್ಟೇಜ಼್ ನಿಂದ ಪಾರ್ಟು ನಿಂದೇನೆ ಬಣ್ಣ ಹಚ್ಚಿಕ್ಕೊಂಡ ಮೇಲೆ ಲೈಫ಼ು ಹಿಂಗೇನೆ
ಆ ಗಿಜಿಬಿಜಿ ಬಜಿಬಜಿ ಬೋ ಬೋ
ಕಿರಿಕಿರಿ ಕಯಿ ಕಯಿ ಲಬೊ ಲಬ್ಬೋ
ಹಿರಿಮಗ ಕಿರಿಮಗ ಬೆಬೆ ಬೆಪ್ಪೋ
ಲಬೊ ಲಬ್ಬೋ ಲಬೊ ಲಬ್ಬೋ..
ಹುಡುಗಿ ಜೊತೆಗೆ ಜಗಳ ಆಡು ಹಗಲೂ ರಾತ್ರಿ ಮೆಸೇಜು ಮಾಡು ಕ್ಯಾಂಟೀನಲ್ಲೆ ಓತ್ಲಾ ಹೊಡ್ಕೊ ಲೈಫ಼ು ಇಷ್ಟೇನೆ
ನೋಕಿಯಾದಲ್ಲಿ ಏನೇನುಂಟು ಏರ್ ಟೆಲ್ ನಲ್ಲಿ ಏನೇನಿಲ್ಲ ಸಿಲಬಸ್ ಗಿಂತ ಜಾಸ್ತಿ ತಿಳ್ಕೊ ಲೈಫ಼ು ಇಷ್ಟೇನೆ
ಅಪ್ಪ ಅಮ್ಮ ಬೈತಾರಂತ ದಿನವೂ ಕಾಲೇಜ್ ಕಡೆಗೆ ಹೋಗು ಎಕ್ಸಾಂ ಟೈಂಮಲ್ಲಿ ಮೇಷ್ಟ್ರಿಗೆ ಬೈಯಿ ಲೈಫ಼ು ಇಷ್ಟೇನೆ
ಪ್ರಾಯವೆಂಬ ಸ್ಕೂಲಿನಲ್ಲಿ ಎಲ್ಲ ಸಂಡೇನೆ ರೆಕ್ಕೆ ಬಿಚ್ಚಿಕ್ಕೊಂಡು ಹಾರು ಲೈಫ಼ು ಹಿಂಗೇನೆ
ಬದುಕು ನೀನು ವಾಸ್ತು ಪ್ರಕಾರ ಕುಬೇರ ಮೂಲೆ ಮಾತ್ರ ಕಟ್ಸು ಟಾಯ್ಲೆಟ್ ಒಳಗೆ ಹೋಗಿ ಮಲ್ಕೊ ಲೈಫ಼ು ಇಷ್ಟೇನೆ
ಹಿಂದಿನ ಜನ್ಮದ ರಹಸ್ಯ ತಿಳ್ಕೊ ಮುಂದಿನ ಜನ್ಮದ ಭವಿಷ್ಯ ತಿಳ್ಕೊ ಈಗಿನ ಜನ್ಮ ಹಾಳಾಗೊಗ್ಲಿ ಲೈಫ಼ು ಇಷ್ಟೇನೆ
ತುಂಬಾ ಒಳ್ಳೆವ್ರಪ್ಪ ನೀವು ಪೂರ್ತಿ ಕೆಟ್ಟೊವ್ರಪ್ಪ ನಾವು ನಮ್ಮ ಹಾಡನು ಕೇಳಲೆ ಬೇಡಿ ಲೈಫ಼ು ಇಷ್ಟೇನೆ
ನಾನು ಕಂಡ ತುಂಬ ದೊಡ್ಡ ಲೂಸು ನೀನೇನೆ ಬಾಯಿ ಮುಚ್ಚಿಕ್ಕೊಂಡು ಹಾಡು ಲೈಫ಼ು ಹಿಂಗೇನೆ
ಆ ಗಿಜಿಬಿಜಿ ತರ ತರ ರಂ ಪೋ
ಕಿರಿಯರ ಕಲರವ ಅಯ್ಯಯ್ಯಪ್ಪೋ
ಹಿರಿಯರ ಬದುಕಿದು ಮುಗಿತಪ್ಪೋ
ತರ ತರ ರಂ ಪೋ
ತರ ತರ ರಂ ಪೋ
ಆ ಗಿಜಿಬಿಜಿಗಿಜಿ ಓ..ಓ.ಓ..
ಕಿರಿಕಿರಿ ಕಯ ಕಯ ಕೊ ಕೊ ಕೋ..
ಕಿರಿಯರ ಸರಿಗಮ ಅ ಆ ಇ ಉ ಊ ಎ ಏ ಏ ಒ ಓ ಓ

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು