ಹೃದಯವೆ ಬಯಸಿದೆ ನಿನ್ನನೆ,,,,,,
ಚಿತ್ರ : ಕೃಷ್ನನ್ ಲವ್ ಸ್ಟೋರಿ
ಸಂಗೀತ : ವಿ. ಶ್ರೀಧರ್
ಗಾಯಕರು : ಸೋನು ನಿಗಮ, ವಿಧ್ಯಾಶ್ರೀ
*********************************
ಸಂಗೀತ : ವಿ. ಶ್ರೀಧರ್
ಗಾಯಕರು : ಸೋನು ನಿಗಮ, ವಿಧ್ಯಾಶ್ರೀ
*********************************
[ಕೋರಸ್] : ಸಂತೆಯಲ್ಲೆ ನಿಂತರೂನು
ಸಂತೆಯಲ್ಲೆ ನಿಂತರೂನು ನೋಡು ನೀನು ನನ್ನನ್ನೆ
ನಾನು ಮಾತ್ರ ಕೇಳುವಂತೆ ಕೂಗು ನೀನು ನನ್ನನ್ನೆ
ನನ್ನ ಕಟ್ಟಿಬಿಟ್ಟರೂನು ಈಗ ನಾನು ಕಾಣಬಲ್ಲೆ ನಿನ್ನನ್ನೆ
ಸೇರಬಲ್ಲೆ ನಿನ್ನನ್ನೆ, ನಾನು ಮಾತ್ರ ಬಲ್ಲೆ ನಿನ್ನನ್ನೆ
ಸಂತೆಯಲ್ಲೆ ನಿಂತರೂನು ನೋಡು ನೀನು ನನ್ನನ್ನೆ
ನಾನು ಮಾತ್ರ ಕೇಳುವಂತೆ ಕೂಗು ನೀನು ನನ್ನನ್ನೆ
ನನ್ನ ಕಟ್ಟಿಬಿಟ್ಟರೂನು ಈಗ ನಾನು ಕಾಣಬಲ್ಲೆ ನಿನ್ನನ್ನೆ
ಸೇರಬಲ್ಲೆ ನಿನ್ನನ್ನೆ, ನಾನು ಮಾತ್ರ ಬಲ್ಲೆ ನಿನ್ನನ್ನೆ
[ಗಾಯಕ] : ಹೃದಯವೆ ಬಯಸಿದೆ ನಿನ್ನನೆ
ತೆರೆಯುತ ಕನಸಿನ ಕಣ್ಣನೆ
ದಿನವಿಡಿ ನಿನ್ನೆಯಾ ನೆನಪನೆ ನೇಯುವೆ
ಸೆಳೆತಕೆ ಸೋಲುತಾ ನಾ ಸನಿಹಕೆ ಕಾಯುವೆ
ತೆರೆಯುತ ಕನಸಿನ ಕಣ್ಣನೆ
ದಿನವಿಡಿ ನಿನ್ನೆಯಾ ನೆನಪನೆ ನೇಯುವೆ
ಸೆಳೆತಕೆ ಸೋಲುತಾ ನಾ ಸನಿಹಕೆ ಕಾಯುವೆ
ಹೃದಯವೆ ಬಯಸಿದೆ ನಿನ್ನನೆ
ತೆರೆಯುತ ಕನಸಿನ ಕಣ್ಣನೆ
ತೆರೆಯುತ ಕನಸಿನ ಕಣ್ಣನೆ
[ಗಾಯಕಿ]: ಜೀವಗಳ ಭಾಷೆ ಇದು ಬೇಕೆ ಅನುರಾಗ
ಭಾವಗಳ ದೋಚುವುದು ಚೆಂದ ಅಪರಾಧ
ಭಾವಗಳ ದೋಚುವುದು ಚೆಂದ ಅಪರಾಧ
[ಗಾಯಕ]: ಯಾರಿಗು ಹೇಳದ ಮಾಹಿತಿ ನೀಡು
ಖಾತರಿ ಇದ್ದರು ಕಾಯಿಸಿ ನೊಡು
ಖಾತರಿ ಇದ್ದರು ಕಾಯಿಸಿ ನೊಡು
[ಗಾಯಕಿ]: ನಿನ್ನಿಂದ ನನ್ನ ನೀನೆ ಕಾಪಡು
ಹೃದಯವೆ.....
ಹೃದಯವೆ.....
[ಕೋರಸ್] : ಸಂತೆಯಲ್ಲೆ ನಿಂತರೂನು
ಸಂತೆಯಲ್ಲೆ ನಿಂತರೂನು ನೋಡು ನೀನು ನನ್ನನ್ನೆ
ನಾನು ಮಾತ್ರ ಕೇಳುವಂತೆ ಕೂಗು ನೀನು ನನ್ನನ್ನೆ
ನನ್ನ ಕಟ್ಟಿಬಿಟ್ಟರೂನು ಈಗ ನಾನು ಕಾಣಬಲ್ಲೆ ನಿನ್ನನ್ನೆ
ಸೇರಬಲ್ಲೆ ನಿನ್ನನ್ನೆ, ನಾನು ಮಾತ್ರ ಬಲ್ಲೆ ನಿನ್ನನ್ನೆ
ಸಂತೆಯಲ್ಲೆ ನಿಂತರೂನು ನೋಡು ನೀನು ನನ್ನನ್ನೆ
ನಾನು ಮಾತ್ರ ಕೇಳುವಂತೆ ಕೂಗು ನೀನು ನನ್ನನ್ನೆ
ನನ್ನ ಕಟ್ಟಿಬಿಟ್ಟರೂನು ಈಗ ನಾನು ಕಾಣಬಲ್ಲೆ ನಿನ್ನನ್ನೆ
ಸೇರಬಲ್ಲೆ ನಿನ್ನನ್ನೆ, ನಾನು ಮಾತ್ರ ಬಲ್ಲೆ ನಿನ್ನನ್ನೆ
[ಗಾಯಕಿ]: ಕಣ್ಣಿನಲೆ ದಾರಿ ಇದೆ ನನ್ನ ಸಲುವಾಗಿ
ಮೆಲ್ಲಗೆನೆ ಕೈಯ್ಯ ಹಿಡಿ ಇನ್ನು ಬಲವಾಗಿ
ಮೆಲ್ಲಗೆನೆ ಕೈಯ್ಯ ಹಿಡಿ ಇನ್ನು ಬಲವಾಗಿ
[ಗಾಯಕ]: ನನ್ನೆಯ ತೋಳಲಿ ನೀನಿರೆ ಇಂದು
ಸಾವಿಗು ಹೇಳುವೆ ನಾಳೆ ಬಾ ಎಂದು
ಸಾವಿಗು ಹೇಳುವೆ ನಾಳೆ ಬಾ ಎಂದು
[ಗಾಯಕಿ]: ಆಗಲೆ ಬೇಡ ದೂರ ಇನ್ನೆಂದು
ಹೃದಯವೆ.....
ಹೃದಯವೆ.....
[ಗಾಯಕ]: ಹೃದಯವೆ ಬಯಸಿದೆ ನಿನ್ನನೆ
ತೆರೆಯುತ ಕನಸಿನ ಕಣ್ಣನೆ
ದಿನವಿಡಿ ನಿನ್ನೆಯಾ ನೆನಪನೆ ನೇಯುವೆ
ಸೆಳೆತಕೆ ಸೋಲುತಾ ನಾ ಸನಿಹಕೆ ಕಾಯುವೆ
ತೆರೆಯುತ ಕನಸಿನ ಕಣ್ಣನೆ
ದಿನವಿಡಿ ನಿನ್ನೆಯಾ ನೆನಪನೆ ನೇಯುವೆ
ಸೆಳೆತಕೆ ಸೋಲುತಾ ನಾ ಸನಿಹಕೆ ಕಾಯುವೆ
[ಕೋರಸ್] : ಸಂತೆಯಲ್ಲೆ ನಿಂತರೂನು.....
0 ಕಾಮೆಂಟ್‌ಗಳು