Manedevru kannada - aparanju chinnavu ಅಪರಂಜಿ ಚಿನ್ನವು ಚಿನ್ನವು

ಹೆ:
ಅಪರಂಜಿ ಚಿನ್ನವು ಚಿನ್ನವು ನನ್ನ ಮನೆಯ ದೇವರು
ಗುಲಗಂಜಿ ದೋಷವು ದೋಷವು ಇರದಾ ಸುಗುಣ ಶೀಲರು
ಉರಿವ ಸೂರ್ಯನು ಅವನ್ಯಾಕೆ, ಕರಗೊ ಚಂದ್ರನು ಅವನ್ಯಾಕೆ ಹೋಲಿಕೆ.
ಗಂ:
ಅಪರಂಜಿ ಚಿನ್ನವು ಚಿನ್ನವು ನನ್ನ ಮನೆಯ ದೇವತೆ
ಗುಲಗಂಜಿ ದೋಷವು ದೋಷವು ಇರದಾ ಬಾಳ ಸ್ನೇಹಿತೆ
ಬಾಡೋ ಮಲ್ಲಿಗೆ ಹೂವ್ಯಾಕೆ, ಶಿಲೆಯ ಬಾಲಿಕೆ ಅವಳ್ಯಾಕೆ ಹೋಲಿಕೆ.
ಹೆ: ಮನದಲ್ಲಿ ನಲಿದಾಡೋ ನಾಯಕ ನೆನೆದಂತೆ ತಾ ಹಾಡೊ ಗಾಯಕ
ಗಂ: ಕಣ್ಣಲ್ಲೆ ಮಾತಾಡೋ ನಾಯಕಿ ನಿಜ ಹೇಳಿ ನನ್ನಾಳೊ ಪಾಲಕಿ
ಹೆ: ನಡೆಯಲ್ಲೂ ನುಡಿಯಲ್ಲೂ ಒಂದೆ ವಿಧವಾದ ಹೊಲಿಕೆ
ಗಂ: ನಗುವಲ್ಲೂ ಮುನಿಸಲ್ಲೂ ಪ್ರೀತಿ ಒಂದೇನೆ ಕಾಣಿಕೆ. (ಅಪರಂಜಿ)
ಹೆ: ಸುಖವಾದ ಸಂಸಾರ ನಮ್ಮದು, ನಮ್ಮಲ್ಲಿ ಅನುಮಾನ ಸುಳಿಯದೂ
ಗಂ: ಪ್ರತಿರಾತ್ರಿ ಆನಂದ ವಿರಸವೇ, ವಿರಸಕ್ಕೆ ಕೊನೆ ಎಂದೂ ಸರಸವೇ
ಹೆ: ಕೋಪಕ್ಕೆ ತಾಪಕ್ಕೆ ಎಣ್ಣೆ ಎರೆಯೋಲ್ಲ ಇಬ್ಬರೂ
ಗಂ: ಬಡತನವೇ ಸುಖವೆಂದು ಒಬ್ಬರ ಪರವಾಗಿ ಒಬ್ಬರೂ (ಅಪರಂಜಿ)

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು