ಸೂರ್ಯ ಕಣ್ಣು ಹೊಡೆದ ಕೈಲಿ ರೋಜ ಹಿಡಿದ
ಹೆಸ್ರು ಯೇನೆ ಅ೦ದ ನನ್ ಹುಡುಗಿ ನೋಡಿ
ಚ೦ದ್ರ ಕಯ್ಯ ಹಿಡಿದ ಪ್ರೀತಿ ಮಾಡೆ ಅ೦ದ
ಇವ್ಳ ಹಿ೦ದೆ ಓಡ್ದ ಆಕಾಶ ಖಾಲಿ ಹೋ...
ನನ್ನ ಹುಡುಗಿ ಜಾನಪದ ಸಾದ ಸೀದ ಹಳ್ಳಿ ನಾದ
ನನ್ನ ಹುಡುಗಿ ಜೀವಪದ ಬದುಕೊ ಕನಸೆ ಇವಳಿ೦ದ
ತೆಗೆದೆ ಬಿಟ್ಳು ಮಳ್ಳಿ ಪ್ರೀತಿಯ ಕದನ
ಸೂರ್ಯ ಕಣ್ಣು ಹೊಡೆದ ಕೈಲಿ ರೋಜ ಹಿಡಿದ
ಹೆಸ್ರು ಯೇನೆ ಅ೦ದ ನನ್ ಹುಡುಗಿ ನೊಡಿ ಹೋ...
ನಿನ್ನ ಅ೦ದ ಕ೦ಡು ಕ೦ದ ಬೊ೦ಬೆ ಬೇಕು ಅ೦ದ
ಭೂಮಿಗ್ಯಾಕೆ ಇಳಿದಳೀಕೆ ಅ೦ತ ಇ೦ದ್ರ ನೊ೦ದ
ಚಿನ್ನ.. ನಿನ್ನ.. ದಿನ ನೋಡೋ ಆಸೆ ನೊಡೀ ಹಾಡೊ ಆಸೆ
ಹಾಡಿ ಕೂಡಿ ಮುದ್ದಾಡೊ ಆಸೆ.. ಆಸೆ
ನನ್ನ ಹುಡುಗಿ ತ೦ಗಾಳಿ ಅವಳೆ ಇರದೆ ನಾನು ಖಾಲಿ
ನನ್ನ ಹುಡುಗಿ ಸುವ್ವಾಲಿ ಸುವ್ವಿ ಹಾಡು ಮಾತಲ್ಲಿ
ಇವಳು ನಕ್ರೆ ಸಕ್ರೆ ಚೆಲ್ಲುತ್ತೆ ಇಲ್ಲಿ
ದೀಪವಿರದ ಲೋಕದಲ್ಲಿ ಇವಳ ಕಣ್ಣೆ ಬೆಳಕು
ನಾದವಿರದ ನಾಡಿನಲ್ಲಿ ಇವಳ ಉಸಿರೆ ಪಲುಕು
ಅ೦ದ.. ಚ೦ದ.. ಸಾಲ ಕೇಳದ೦ತ ಸಾಲು ಕಟ್ಟಿ ನಿ೦ತ
ಇಡಿ ಸೃಷ್ಟಿ ಕ೦ಡಾಗ ಮೂಕ ನಾನು
ನನ್ನ ಹುಡುಗಿ ಕನ್ನಡತಿ ಸಹನೆ ಕರುಣೆ ಇವಳ ನೀತಿ
ನನ್ನ ಹುಡುಗಿ ಪ್ರಾಣಸಖಿ ಪ್ರಣಯ ಇವಳ ಕಿವಿ ಝುಮುಕಿ
ಲಲಲಾಲಾಲಾಲಾಲಾಲಾಲಾಲಾಲ
ಸೂರ್ಯ ಕಣ್ಣು ಹೊಡೆದ ಕೈಲಿ ರೋಜ ಹಿಡಿದ
ಹೆಸ್ರು ಯೇನೆ ಅ೦ದ ನನ್ ಹುಡುಗಿ ನೋಡಿ
ಚ೦ದ್ರ ಕಯ್ಯ ಹಿಡಿದ ಪ್ರೀತಿ ಮಾಡೆ ಅ೦ದ
ಇವ್ಳ ಹಿ೦ದೆ ಓಡ್ದ ಆಕಾಶ ಖಾಲಿ
0 ಕಾಮೆಂಟ್‌ಗಳು