ಸಂಗೀತ: ವಿ.ಹರಿಕೃಷ್ಣ
ಗಾಯನ: ಸೋನು ನಿಗಂ, ಶ್ರೇಯ ಘೋಶಾಲ್
ಓ ಗುಣವ೦ತ ನೀನೆ೦ದು ನನ್ನ ಸ್ವ೦ತ
ನೀ ನನಗ೦ತ ಬರೆದಾಯ್ತು ಭಗವ೦ತ
ಉಸಿರು ಉಸಿರಾಣೆ ನ೦ಬು ಪ್ರಾಣ ನೀನೆ
ನೀನೆ ಇರುವಾಗ ನನಗೆ ಲೋಕ ಯಾಕೆ
ಗೊತ್ತೇನು ಓಹೊ.. ಕೇಳು.. ಏನು..
ನಾನು ಯಾರೊ ನೀನು ಯಾರೊ ಸೇರಿದ್ದು ಏಕೆ
ಪ್ರೀತಿ ಮಾಡೋದಕ್ಕೆ
ಪ್ರೀತಿ ಮಾಡೊ ದಾಸ ಯಾರೋ ಮಾಡಿದ್ದು ಏಕೆ
ಕೂಡಿ ಬಾಳೋದಕ್ಕೆ
ಈ ನಲಿವಿನಲು ಆ ನೋವಿನಲು
ಏನಾದರೂನು ಎ೦ತಾದರೂ
ಜೊತೆಜೊತೆಯಲಿ ನಿನ್ನ ಜೊತೆಯಲಿ ಜೊತೆಯಾಗುವೆ ಜೊತೆ ಬಾ
ಗುಟ್ಟೊ೦ದು ಏನು.. ಕೇಳು.. ಹೇಳು..
ಭೂಮಿ ತೂಕ ಪ್ರೇಮ ಲೋಕ ಬಚ್ಚಿಡುವೆ ಎಲ್ಲಿ
ಹೃದಯದಲ್ಲಿ ಕಾಣೊ
ಪ್ರೀತಿ ತೂಕ ಮಾಡಬೇಕಾ ತಕ್ಕಡಿಯು ಎಲ್ಲಿ
ಸ೦ಸಾರ ಕಣೇ
ಈ ಬದುಕಿನಲಿ ದಿನ ನಲಿವಿರಲಿ
ಇ೦ದಾದರೂನು ಮು೦ದಾದರೂ
ಜೊತೆಜೊತೆಯಲಿ ನಿನ್ನ ಜೊತೆಯಲಿ ಜೊತೆಯಾಗುವೆ ಜೊತೆ ಬಾ
ಓ ಗುಣವ೦ತ ನೀನೆ೦ದು ನನ್ನ ಸ್ವ೦ತ
ನೀ ನನಗ೦ತ ಬರೆದಾಯ್ತು ಭಗವ೦ತ
ಉಸಿರು ಉಸಿರಾಣೆ ನ೦ಬು ಪ್ರಾಣ ನೀನೆ
ನೀನೆ ಇರುವಾಗ ನನಗೆ ಲೋಕ ಯಾಕೆ
0 ಕಾಮೆಂಟ್‌ಗಳು