ಚಿತ್ರ: ಎದ್ದೇಳು ಮಂಜುನಾಥ
ಸಂಗೀತ: ಅನೂಪ್ ಸೀಳಿನ್
ಹಾಡಿರುವವರು: ಬಿ.ಕೆ. ಸುಮಿತ್ರ / ಅನೂಪ್ ಸೀಳಿನ್
ಸಾಹಿತ್ಯ: ಶಾರದಸುತ
ಆರತಿ ಎತ್ತಿರೇ ಕಳ್ ಮಂಜಂಗೆ ನಮ್ ಸುಳ್ಳ್ ಮಂಜಂಗೆ !ಒ ಹೋ ಒಹೋ
ಆರತಿ ಎತ್ತಿರೇ ಕಳ್ ಮಂಜಂಗೆ ನಮ್ ಸುಳ್ಳ್ ಮಂಜಂಗೆ
ಸುಸ್ತಾಗದ ಮನ್ಮಥ, ಸದಾ ಸುಖಿ ಶ್ರ್ರೀಯುತ
ಬಾಯಿಬಿಟ್ಟರೆ ಸಂಸ್ಕೃತ, ತಲೆಕೆಟ್ಟರೆ ವಿಕೃತ
ನವರಸಗಳನು ಗಟಗಟ ಕುಡಿದ ಮಗನೇ
ಆರತಿ ಎತ್ತಿರೇ ಕಳ್ ಮಂಜಂಗೆ ನಮ್ ಸುಳ್ಳ್ ಮಂಜಂಗೆ......
ಅಡ್ಡ ಅರಳಿಕಟ್ಟೇ, ದುಂದು ಸಿಕ್ಕಾಪಟೆ, ಸೋಮಾರಿ ಗೆಳೆಯರ ಬಳಗದ ಲೀಡರ್
ಮಾತಲ್ಲಿ ಬಲುತೀಟೆ, ಕಾಸ್ ಕೊಟ್ರೆಮೇಲ್ಕೋಟೆ ಯಾಮಾರ್ದ್ರೆ ಬಿಳಿ ಎರಡು ಒಂದ್ ಕೆಂಪು
ರಾತ್ರಿಯೆಲ್ಲಾ ಮಲಗೋಲ್ಲ, ಮಧ್ಯಾಹ್ನವಾದ್ರೂ ಏಳಲ್ಲಾ
ಊರಲೆಲ್ಲ ಕೈ ಸಾಲ, ಮುಂಡೇದು ಶೋಕಿಲಾಲ
ಅತ್ತೆಯ ಒಡವೆ ದಾನ ಮಾಡುವ ಅಳಿಯಾ
ಆರತಿ ಎತ್ತಿರೇ ಕಳ್ ಮಂಜಗೆ ನಮ್ ಸುಳ್ಳ್ ಮಂಜಂಗೆ
ಅಪ್ಪ ಲೆಕ್ಕಕಿಲ್ಲ, ಅಮ್ಮನ ಮಾತ್ ಕೇಳಲಿಲ್ಲ, ಗಿಡವಾಗಿ ಬಗ್ಗದ ಮುದ್ದು ಲೋಫರ್
ಶಾಲೇಲಿ ಕಲೀಲಿಲ್ಲ, ಕಾಲೇಜಲ್ ಬಲೀಲಿಲ್ಲ, ನೂರೆಂಟು ವಿದ್ಯೇಲೂ ಮಾಸ್ಟರ್
ತಲೆಹರಟೆ ಜಾತಕ, ಹೆಗ್ಹೆಜೆಗೂ ನಾಟಕ. ಅಣಕ ಮಾಡುವ ಘಟ, ಅತ್ಯುತ್ತಮ ಈ ನಟ
ರಾಜ್ಯ ಪ್ರಶಸ್ತಿ ವಂಚಿತನಾದ ಮಗನೇ......
ಒಹೋ ಒಹೋ !
ಆರತಿ ಎತ್ತಿರೇ ಕಳ್ ಮಂಜಂಗೆ ನಮ್ ಸುಳ್ಳ್ ಮಂಜಂಗೆ
ಎದ್ದೇಳು ಮಂಜುನಾಥ, ಎದ್ದೇಳಲೋ
ಎದ್ದೇಳು ಮಂಜುನಾಥ, ಎದ್ದೇಳಲೋ
ಎಳಯ್ಯ ಎವೆರೆಸ್ಟು, ಎಷ್ಟ್ ಮಾಡ್ತೀಯಾ ರೆಸ್ಟು
ಎಳಯ್ಯ ಎವೆರೆಸ್ಟು, ಎಷ್ಟ್ ಮಾಡ್ತೀಯಾ ರೆಸ್ಟು
ಸತ್ತ ಮೇಲೆ ಕೋಟಿ ವರುಷ ಮಾಡೋ ಇದೆ ರೆಸ್ಟು
ಎದ್ದೇಳು ಮಂಜುನಾಥ, ಎದ್ದೇಳು ಮಂಜುನಾಥ, ಎದ್ದೇಳು ಮಂಜುನಾಥ,
ಎದ್ದೇಳಲೋ ಎದ್ದೇಳಲೋ
ಎದ್ದೇಳಲೋ
ಎದ್ದೇಳು ಮಂಜುನಾಥ, ಎದ್ದೇಳಲೋ, ಎದ್ದೇಳಲೋ, ಎದ್ದೇಳಲೋ
0 ಕಾಮೆಂಟ್‌ಗಳು