Lyrics of Paris Pranaya

ಕೃಷ್ಣ ನೀ ಬೇಗನೆ ಬಾರೋ ಶ್ರೀಕೃಷ್ಣ ನೀ ಬೇಗನೆ ಬಾರೋ
ಈ ರಾಧೆಯ ಕೂಗು ನೀ ಕೇಳಲಿಲ್ಲವೇನೋ
ಈ ರಾಧೆಯ ಕೂಗು ನೀ ಕೇಳಲಿಲ್ಲವೇನೋ
ವಾಸುದೇವ ವೇಣುಗೋಪ ಬಾ.. ಕೃಷ್ಣ ಬಾ.. ನೀ ಬೇಗ ಬಾ

ಆತ್ಮವು ನೀನೆ ಜೀವವು ನೀನೆ
ನನ್ನೆದೆ ಹಾಡೆ ನೀನೆ ಹಾಡಿನ ಪ್ರಾಣವು ನೀನೆ
ಪ್ರೀತಿಯ ರಾಧೆ ಪ್ರತಿಕ್ಷಣ ಕಾದೆ
ಏನನು ಮಾಡಲಿ ನಾನು ಯಾರಿಗೆ ಹೇಳಲಿ ಏನು
ಗೋಪಾಲ ಗೋಪಿ ಕೃಷ್ಣ ಮಾಯಾವಿ ಮಾಯಾ ಕೃಷ್ಣ
ನೀನಿರದೆ ನಾನಿಲ್ಲ ನೀ ಬರದೆ ಬಾಳಿಲ್ಲ
ಮಾಧವ ಮುಕು೦ದನೆ ಬಾ.. ಬೇಗ ಬಾ.. ನೀ ಬೇಗ ಬಾ

ಕೃಷ್ಣ ನೀ ಬೇಗನೆ ಬಾರೋ ಶ್ರೀಕೃಷ್ಣ ನೀ ಬೇಗನೆ ಬಾರೋ
ಈ ರಾಧೆಯ ಕೂಗು ನೀ ಕೇಳಲಿಲ್ಲವೇನೋ
ಈ ರಾಧೆಯ ಕೂಗು ನೀ ಕೇಳಲಿಲ್ಲವೇನೋ
ವಾಸುದೇವ ವೇಣುಗೋಪ ಬಾ.. ಕೃಷ್ಣ ಬಾ.. ನೀ ಬೇಗ ಬಾ

ಜನನವು ನೀನೆ ಮರಣವು ನೀನೆ
ನನ್ನೆದೆ ಧ್ಯಾನವು ನೀನೆ ಧ್ಯಾನದ ಪ್ರಣತಿಯು ನಾನೆ
ಬೆಳಗುವೆ ದೀಪ ತೋರಿಸೊ ರೂಪ ಎ೦ದಿಗೆ ಬರುವೆಯೊ ನೀನು
ಎನ್ನುತ ಕಾಯುವೆ ನಾನು
ಗೋಪಾಲ ಗೋಪಿ ಕೃಷ್ಣ ಮಾಯಾವಿ ಮಾಯಾ ಕೃಷ್ಣ
ನೀನಿರದೆ ನಾನಿಲ್ಲ ನೀ ಬರದೆ ಬಾಳಿಲ್ಲ
ಕೇಶವ ಜನಾರ್ಧನ ಬಾ.. ಬೇಗ ಬಾ.. ನೀ ಬೇಗ ಬಾ

ಕೃಷ್ಣ ನೀ ಬೇಗನೆ ಬಾರೋ ಶ್ರೀಕೃಷ್ಣ ನೀ ಬೇಗನೆ ಬಾರೋ
ಈ ರಾಧೆಯ ಕೂಗು ನೀ ಕೇಳಲಿಲ್ಲವೇನೋ
ಈ ರಾಧೆಯ ಕೂಗು ನೀ ಕೇಳಲಿಲ್ಲವೇನೋ
ವಾಸುದೇವ ವೇಣುಗೋಪ ಬಾ.. ಕೃಷ್ಣ ಬಾ.. ನೀ ಬೇಗ ಬಾ


BILIYARA DESHADA BAKARA

ಸಂಗೀತ: ಪ್ರಯೋಗ್
ಗಾಯನ: ಚಿತ್ರ, ರಾಜೇಶ್, ಮಧು ಬಾಲಕೃಷ್ಣಾ

ಚಿತ್ರ: ಸ ಪ ಸ.....
ಆ ಬಿಳಿಯರ ದೇಶದ ಬಕರ
ನಮ್ಮೀ ಮಿಲನ ಶುಭ ಸಂಗೀತದ ಸವಿಧಾರಾ
ಮಧುರ ಅತಿ ಮಧುರ
ನಿಮ್ಮೂರಲಿ ಹಾಡೆಂದರೆ ಬರಿ ಕಿರುಚುವುದಾ?

ಗಾಯಕ: ಆ ಆ ಆ
ನೀನೀಗ ಹಾಡಿದ ರಾಗ ಶಂಕರಾಭರಣಂ
ಅಲ್ಲಿರುವುದು ಅಯೊನಿ-ಯನ್ ರಾಗ ಅದುವೇ ಸರಿಯು
ಈ ಪೂರ್ವಕೆ ಪಶ್ಚಿಮ ಎಂದಿಗೂ ಸರಿಸಮವೂ....

ಚಿತ್ರ: ಸಾ ಸಾ ಸಾ ಸಾ.. ಸ ರಿ ಗ ಮ ಪ ದ ನಿ ಸ
ನಮ್ಮ ನಾಡಿನಲಿ ಪ್ರೀತಿಯೆಂಬುದದು ಚಿರಸ್ಥಾಯಿಯದು
ಹೆಣ್ಣನು ಬದಲಿಸಿ ಬದುಕುವ ಜನಕೆ ಒಲವಿನ ಬೆಲೆಯು ತಿಳಿವುದೇ ಗೂಬೆ?

ಗಾಯಕ: ಡೊ ಡೊ ಡೋ ಡೋ.. ಡೊ ರೆ ಮಿ ಫ ಸೊ ಲ ಟಿ ಡೊ
ನೀವು ಹುಡುಗಿಯರು hypocritesಗಳು
ಬರಿ ಸೋಲುಗಳು ಓಳಗೊಂದ್ ಹೊರಗೊಂದ್
ಕರಹರಪ್ರಿಯಲಿ ಡೊರಿಯನ್ ಮೋಡಿಗೆ
ತಿಳುದುಕೊ ಕೋತಿ..

ಚಿತ್ರ: ತೋಡಿಗೆ ಸರಿಸಮವು ಇದೆಯೆ? ಕೂಗದೆ ಕಿರುಚದೆ
ಬಾಯ್ಬಾಯ್ ಬಡಿಯದೆ ಹಾಡಲು ಕೇಳುವೆ

ಪ ಮ ಗ ಮ ಗ ರಿ ಸ

ಗಾಯಕ: ತೋಡಿಗೆ ಬ್ರಿಟಿಯನ್ ರಾಗವಿದೆ prejudiced ಆಗದೆ
ಕೇಳುವೆಯಾದರೆ ಈಗಲೆ ಹಾಡುವೆ ಸೊ ಫ ಮಿ ಫ ಮಿ ರೆ ಡೊ

ಚಿತ್ರ: ಸ ಪ ಮ ದ ನಿ ಸ ನೀ ದ ಪ ಮ ಗ ರಿ ಸ
ಮೋಸದ ಪ್ರೀತಿಯ ನಟಿಸಿ ಮೋಡಿಯ ಮಾಡಿದೆ ಕಪಟಿ

ಗಾಯಕ: ಡೊ ಸ ಮೋ ಲಾ ನೀ ಡೊ..
ಕಣ್ಣಿಗೆ ಕಂಡರೂ ಕೂಡ ಮನಸಿನ ತರ್ಕದಿ ನೋಡ

ಚಿತ್ರ: ಈ ನಾಟಕ ಸಾಕಿನ್ನು ಎನ್ನ ಮರೆತು ಬಿಡು
ಇದುವೇ ಕೊನೆಯಾ ಮನವಿ.......

ಗಾಯಕ: ಈ ಪ್ರಾಣವ ಬಿಟ್ಟೇನು ನಾನು ಮರೆಯದಿರು
ನಿನ್ನ ಬಿಡೆನು ಗೆಳತಿ.......

ಚಿತ್ರ: ಸ ರಿ ಗ ಮ ಪ ದ ನಿ ಸ
ಸಾ ನಿ ದ ಪ ಮ ಗ ರಿ ಸ
ರೀ ಗ ಮ ಪ ದ ದ ಮ ಪ ದ ನಿ ಮ ಪ ದ ನಿ ಸ ಪ ದ ನಿ ಸ ರಿ
ಗ ರಿ ಸ ನಿ ಸ

ಗಾಯಕ: ಡೊ ರೆ ಮಿ ಫ ಸೊ ಲ ಟಿ ಡೊ
ಡೊ ಟಿ ಲ ಸೊ ಫ ಮಿ ರೆ ಡೊ
ರೆ ಮಿ ಫ ಸೊ ಲ ಲ ಫ ಸೊ ಲ ಟಿ ಫ ಸೊ ಲ ಟಿ ಡೊ ಸೊ ಲ ಟಿ ಡೊ ರೆ
ಮಿ ರೆ ದೊ ಟಿ ಡೊ

ಗ ರಿ ಸ ನಿ ಸ ನಿ ದ ಪ ಮ ಪ ಗ ರಿ ಸ ನಿ ಸ
ಲೋಕಮಾನ್ಯ ಪೂರ್ಣ ಸಂಗೀತ ಜೀವ ಸನಿಲಧಾರ
ಸರಸದ ವಿಷಯಕೆ ವಿರಸವಿದೇಕೆ ಸ್ನೇಹವಿರಲಿ ಜೊತೆಗೆ
ಗ ಮ ಪ ದ ನಿ ಸ ಈ ನೀತಿ ನಿನಗೆ ಕೇಳು
ಗ ಮ ಪ ದ ನಿ ಸ ಏ ಪೂರ್ವಿ ನಿನದೇ ಸೋಲು

ಚಿತ್ರ: ತಲೆ ಇಲ್ಲದ ಜನರಿಗೆ ಎಂದೂ ತಲೆ ಬಾಗಿಸಲಾರೆ

ಗಾಯಕ: ಹಟ ಮಾಡುವ ಹುಡುಗಿಯ ಕೂಡ ನಾ ಪ್ರೀತಿಸಬಲ್ಲೆ

ಡೊ ರೆ ಮಿ ಫ ರೆ ಮಿ ಫ ಸೊ ಮಿ ಫ ಸೊ ಲ ಫ ಸೊ ಲ ಟಿ
ಡೊ ಸೊ ಡೊ ಟಿ ಸೊ ಮಿ ಲ ಫ ಲ ಸೊ ಫ ಮೆ ರೆ ಮಿ ಫ ಸೊ ಟಿ
ಆ..........ಅಹ.........
ಡೊ..ರೆ..ಮೀ.......ಆ.......
ಬರಲಿದೆ ಸವಿಗಳಿಗೆ
ಹರಸಿರಿ ಕಿರಿಯರಿಗೆ....
ಇದುವೇ ಶುಭ ಮಿಲನ..
ದೊ ರೆ ಮಿ ಫ ಸೊ ಲ ಟಿ ಡೊ

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು