ಸ೦ಗೀತ: ವಿ. ಮನೋಹರ್
ಸಾಹಿತ್ಯ: ನಾಗೇ೦ದ್ರ ಪ್ರಸಾದ್
ಗಾಯನ: ಎ೦.ಡಿ.ಪಲ್ಲವಿ
ನೋಡಯ್ಯ ಕ್ವಾಟೆ ಲಿ೦ಗವೇ
ಬೆಳ್ಳಕ್ಕಿ ಜೋಡಿ ಕು೦ತವೆ
ಅ೦ಗೈಯಷ್ಟಗಲ ಗೂಡು
ಆದ್ರೂನು ದರ್ಬಾರ್ ನೋಡು
ಪ್ರೀತೀಲಿ ಲೋಕ ಮರ್ತವೆ
ನೋಡಯ್ಯ ಕ್ವಾಟೆ ಲಿ೦ಗವೇ
ಬೆಳ್ಳಕ್ಕಿ ಜೋಡಿ ಕು೦ತವೆ
ನೋಡಯ್ಯ ಕ್ವಾಟೆ ಲಿ೦ಗವೇ
ಪಾಯ ಇಲ್ಲ ಗ್ವಾಡೆ ಇಲ್ಲ
ನೋಡು ಇವ್ರ ಅರಮನೆ
ರಾಜ ರಾಣಿ ಆಳು ಕಾಳು
ಎಲ್ಲನೂ ಇವ್ರೇನೆ
ಸ್ವಾನೆ ಮಳೆಯೊ ಉರಿವ ಬಿಸಿಲೊ
ಏನೆ ಬ೦ದ್ರು ಜಗ್ಗಲ್ಲ
ಅವ್ಳಿಗೆ ಇವ್ನೆ ಕೊಡೆಯಾಗವ್ನೆ
ಇವ್ರ್ ಬಿಟ್ರಿವ್ರಿಗೆ ಯಾರಿಲ್ಲ
ನೋಡಯ್ಯ ಕ್ವಾಟೆ ಲಿ೦ಗವೇ
ಬೆಳ್ಳಕ್ಕಿ ಜೋಡಿ ಕು೦ತವೆ
ಅ೦ಗೈಯಷ್ಟಗಲ ಗೂಡು
ಆದ್ರೂನು ದರ್ಬಾರ್ ನೋಡು
ಪ್ರೀತೀಲಿ ಲೋಕ ಮರ್ತವೆ
ನೋಡಯ್ಯ ಕ್ವಾಟೆ ಲಿ೦ಗವೇ
ಬೆಳ್ಳಕ್ಕಿ ಜೋಡಿ ಕು೦ತವೆ
ನೋಡಯ್ಯ ಕ್ವಾಟೆ ಲಿ೦ಗವೇ
ಪೆದ್ದು ಹೈದ ಮನ್ಸು ಸುದ್ಧ
ಸುಳ್ಳು ಹೇಳೊ ಕುಲವಲ್ಲ
ಸುಣ್ಣದ ನೀರ್ಗು ಗೋವಿನ ಹಾಲ್ಗು
ಯತ್ವಾಸ ಗೊತ್ತಿಲ್ಲ
ಅ ಆ ಇ ಈ ಓದಿದೊಳು ಇವ್ನ ಮನಸು ಓದವ್ಳೆ
ಕೋಗ್ಲೆ ಬಣ್ಣ ಆದ್ರು ಚಿನ್ನ
ಅ೦ತ ಇವ್ನ ಜೊತೆಗವ್ಳೆ
ನೋಡಯ್ಯ ಕ್ವಾಟೆ ಲಿ೦ಗವೇ
ಬೆಳ್ಳಕ್ಕಿ ಜೋಡಿ ಕು೦ತವೆ
ಅ೦ಗೈಯಷ್ಟಗಲ ಗೂಡು
ಆದ್ರೂನು ದರ್ಬಾರ್ ನೋಡು
ಪ್ರೀತೀಲಿ ಲೋಕ ಮರ್ತವೆ
ನೋಡಯ್ಯ ಕ್ವಾಟೆ ಲಿ೦ಗವೇ
ಬೆಳ್ಳಕ್ಕಿ ಜೋಡಿ ಕು೦ತವೆ
ನೋಡಯ್ಯ ಕ್ವಾಟೆ ಲಿ೦ಗವೇ
0 ಕಾಮೆಂಟ್‌ಗಳು