ಕನಸೊ ಇದು ನನಸೊ ಇದು
ನನ್ನೆದೆಯಲಿ ತಂದ ಮೊದಲ ಸಿಂಚನ
ನಾನಿಲ್ಲಲಿ ನೀನನ್ನಲಿ
ಅಂದುಕೊಂಡರೆ ಎಂಥ ರೋಮಾಂಚನ
ಅಂತರಂಗದಾ ಆಹ್ವಾನವೆ
ಹೃದಯ ಮೀಟುವ ಶುಭ ಆರಂಭವು
ಪ್ರೀತಿ ಜನಿಸುವ ಆ ಗರ್ಭಕೆ
ಕಣ್ಣ ಭಾಷೆಯು ಎಂಥಾ ಆಹ್ಲಾದವು
ಕನಸೊ ಇದು ನನಸೊ ಇದು
ನನ್ನೆದೆಯಲಿ ಬಂದ ಪ್ರೇಮ ಸಿಂಚನ
ನಾನಿಲ್ಲಲಿ ನೀನನ್ನಲಿ
ಅಂದುಕೊಂಡರೆ ಎಂಥ ರೋಮಾಂಚನ
ಪ್ರೀತಿ ನೀ ಹುಟ್ಟೊದೆಲ್ಲಿ ನಿನ್ನ ಆ ತವರೂರೆಲ್ಲಿ
ನಿಂಗೆ ತಾಯ್ತಂದೆ ಯಾರು ನೀ ಹೇಳೆಯ
ನಿನಗಿಂತಲೂ ರುಚಿ ಯಾವುದು
ನೀನಿದ್ದರೆ ಬೇರೆ ಬೇಕೆನಿಸದು
ಪ್ರೀತಿ ನಿಂಗಷ್ಟ ಯಾರು ನಿನ್ನ ಕೈಗೊಂಬೆ ಇವರು
ಇವರ ಆಸೆಯ ತುಂಬ ನೀ ಹರಿಯುವೆ
ನಿನ ಸ್ನೇಹವೇ ಬಲು ಸುಂದರ
ನೀನಿದ್ದರೆ ಇಲ್ಲಿ ಸುಖ ಸಾಗರ
ಕನಸೊ ಇದು ನನಸೊ ಇದು
ನನ್ನೆದೆಯಲಿ ಬಂದ ಪ್ರೇಮ ಸಿಂಚನ
ನಾನಿಲ್ಲಲಿ ನೀನನ್ನಲಿ
ಅಂದುಕೊಂಡರೆ ಎಂಥ ರೋಮಾಂಚನ
ಪ್ರೀತಿ ಈ ಹೃದಯಗಳನ್ನು ನೀನು ಆವರಿಸಿಕೊಣ್ಡೆ
ನಿನ್ನ ಇಷ್ಟಾನುಸಾರ ಕರೆದೊಯ್ಯುವೆ
ಇವರಿಬ್ಬರು ಮತಿಹೀನರು
ನಿನ ಮುಷ್ಠಿಗೆ ಇಲ್ಲಿ ಶರಣಾದರು
ಪ್ರೀತಿ ಈ ಸಂಭ್ರಮದಲ್ಲಿ ಇವರ ಈ ಸಂಗಮದಲ್ಲಿ
ಕಣ್ಣ ಕರೆಯೋಲೆಗಳಲ್ಲಿ ನೀನಿಲ್ಲವೆ
ನಿನಗಿಂತಲೂ ಹಿತ ಯಾವುದು
ನಿನ್ನಿದಂಲೆ ತಾನೆ ಜಗ ನಲಿವುದು
ಕನಸೊ ಇದು ನನಸೊ ಇದು
ನನ್ನೆದೆಯಲಿ ತಂದ ಮೊದಲ ಸಿಂಚನ
ಅಂತರಂಗದಾ ಆಹ್ವಾನವೆ
ಹೃದಯ ಮೀಟುವ ಶುಭ ಆರಂಭವು
ಪ್ರೀತಿ ಜನಿಸುವ ಆ ಗರ್ಭಕೆ
ಕಣ್ಣ ಭಾಷೆಯು ಎಂಥಾ ಆಹ್ಲಾದವು
0 ಕಾಮೆಂಟ್‌ಗಳು