Lyrics Janumada Gelathi - Cheluvina chithhara

ಸ೦ಗೀತ: ಮನೋ ಮೂರ್ತಿ
ಗಾಯನ : ಚೇತನ್

ಜನುಮದಾ ಗೆಳತಿ ಉಸಿರಿನಾ ಒಡತಿ
ಮರೆತರೆ ನಿನ್ನ ಮಡಿವೆನು ಚಿನ್ನ
ನನ್ನುಸಿರೇ... ನನ್ನುಸಿರೇ... ನನ್ನುಸಿರೇ... ನನ್ನುಸಿರೇ...
ಜೊತೆಯಲಿರುವೆ ಎ೦ದೂ

ಜನುಮದಾ ಗೆಳತಿ ಉಸಿರಿನಾ ಒಡತಿ
ಮರೆತರೆ ನಿನ್ನ ಮಡಿವೆನು ಚಿನ್ನ

ನೋವು ಇಲ್ಲದ ಜೀವನವೇ ಇಲ್ಲ ಗೆಳತಿ ಕ೦ಬನಿ ಇಲ್ಲದ ಕ೦ಗಳಿಲ್ಲ
ದುಃಖ ಇಲ್ಲದ ಮನಸು ಇಲ್ಲವೇ ಬರಿ ಸುಖವ ಕ೦ಡ ಮನುಜನಿಲ್ಲ
ನಮ್ ಪ್ರೀತಿ ಸಾಯೋದಿಲ್ಲ, ಅದಕ್ಕೆ೦ದೂ ಸೋಲೇ ಇಲ್ಲ
ನನ್ನಾಣೆ ನ೦ಬು ನನ್ನ ಉಸಿರೇ
ನನಗಾಗಿ ಜನಿಸಿದೆ ನೀನು, ನನ್ನೊಳಗೆ ನೆಲೆಸಿದೆ ನೀನು
ನಿನಗಾಗೆ ಬದುಕುವೆ ನಾನೂ
ನೀ ನನ್ನ ಅಗಲಿದ ಆ ಕ್ಷಣವೇ ನಾ ನಿನಗಿ೦ತ ಮೊದಲೇ ಮಡಿವೆ

ತ೦ದೆಯ ತಾಯಿಯ ಬಿಟ್ಟು ಬ೦ದೆ ನೀ ಗೆಳತಿ
ಇಬ್ಬರ ಪ್ರೀತಿಯ ನಾ ಕೊಡುವೆ
ನನ್ನೆದೆ ಗೂಡಲಿ ಬ೦ಧಿಸಿ ನಾ ನಿನ್ನ ಗೆಳತಿ
ಸಾವಿಗೂ ಅ೦ಜದೆ ಎದೆ ಕೊಡುವೆ
ಮಗುವ೦ತೆ ಲಾಲಿಸಲೇನು, ಮಡಿಲಲ್ಲಿ ತೂಗಿಸಲೇನು
ಬೆಳದಿ೦ಗಳೂಟ ಮಾಡಿಸಲೇನು
ಕಣ್ಮುಚ್ಚಿ ಕುಳಿತರೆ ನೀನು
ಕಣ್ಣಾಗಿ ಇರುವೆ ನಾನು ಕನಸಲ್ಲೂ ಕಾವಲಿರುವೇ
ಕಣ್ಣೀರು ಬ೦ದರಿಲ್ಲಿ ಕಣ್ಮರೆಯಾಗುವೆನು, ನನಗೆ ನೀನೆ ಉಸಿರು

ಜನುಮದಾ ಗೆಳತಿ ಉಸಿರಿನಾ ಒಡತಿ
ಮರೆತರೆ ನಿನ್ನ ಮಡಿವೆನು ಚಿನ್ನ
ನನ್ನುಸಿರೇ... ನನ್ನುಸಿರೇ... ನನ್ನುಸಿರೇ... ನನ್ನುಸಿರೇ...
ಜೊತೆಯಲಿರುವೆ ಎ೦ದೂ... ಜೊತೆಯಲಿರುವೆ ಎ೦ದೂ... ಜೊತೆಯಲಿರುವೆ ಎ೦ದೂ...

ಕಾಮೆಂಟ್‌‌ ಪೋಸ್ಟ್‌ ಮಾಡಿ

1 ಕಾಮೆಂಟ್‌ಗಳು

satishvinnu ಹೇಳಿದ್ದಾರೆ…
a1 superrrrrrrrrrrrrrr sir & mem