About Me

ಎಲ್ಲರಿಗೂ ನಮಸ್ಕಾರ. ನನ್ನ ಹೆಸರು ಮಂಜುನಾಥ್ ಹಿರೇಮಠ್ , ವೃತ್ತಿಯಲ್ಲಿ ಸಾಫ್ಟ್ ವೇರ್ ಇಂಜಿನಿಯರ್. ಮೂಲತಃ ಚಿತ್ರದುರ್ಗ ಜಿಲ್ಲೆಯ ಮೋಳಕಾಲ್ಮುರು ತಾಲ್ಲೂಕಿನವನು. ಉದ್ಯೋಗ ನಿಮಿತ್ತ ಬೆಂಗಳೂರಿನ ಪ್ರತಿಷ್ಠಿತ ಈ ಕಾಮರ್ಸ್ ಕಂಪೆನಿಯಲ್ಲಿ ಕೆಲಸ ಮಾಡಿ, ಈಗ ಮೈಸೂರಿನಲ್ಲಿ ವಾಸವಾಗಿದ್ದೇನೆ.  
 
ನನಗೆ ಸಂಗೀತ ಹಾಗೂ ಸಾಹಿತ್ಯ ಎರಡರಲ್ಲ್ಲೂ ಸ್ವಲ್ಪ ಆಸಕ್ತಿ ಹೆಚ್ಚೇ ಇದ್ದಿದ್ದರಿಂದ, ಮೊದಲಿನಿಂದ ಹಾಡುಗಳನ್ನು ಹಾಡುವುದು ಇದ್ದೇ ಇತ್ತು. ಕ್ರಮೇಣ ಕೀಬೋರ್ಡ್ ಕೂಡ ಕಲಿತು (ಶಾಸ್ತ್ರೀಯವಾಗಿ ಅಲ್ಲ) ಸ್ವಲ್ಪ ಮಟ್ಟಿಗೆ ನುಡಿಸುತ್ತೇನೆ. ನಾನು ನಂಜನಗೂಡಿನಲ್ಲಿ ಡಿಪ್ಲೊಮಾ ಓದುವಾಗಿನಿಂದ ಅಂತರ್ಜಾಲದಲ್ಲಿ ಕನ್ನಡ ಹಾಡುಗಳ ಸಾಹಿತ್ಯವನ್ನು ಓದುಗರಿಗೆ ಸಂಗೀತ ಪ್ರೇಮಿಗಳಿಗೆ ಒದಗಿಸಬೇಕು ಎಂದು ಆಸಕ್ತಿಯಿತ್ತು. ಆಗ ನನ್ನ ನೆರವಿಗೆ ಬಂದಿದ್ದು, ಉಚಿತ ಬ್ಲಾಗ್. 
 
ಗೂಗಲ್ ನ ಈ ಬ್ಲಾಗ್ ಸಹಾಯದಿಂದ ನನ್ನ ಕೈಲಾಗುವಷ್ಟು ಹಾಡುಗಳ ಸಾಹಿತ್ಯವನ್ನು ಕೊಡಲು ಪ್ರಯತ್ನಿಸಿದ್ದೇನೆ. ಎಲ್ಲಾದರೂ ವ್ಯಾಕರಣ, ಒತ್ತಕ್ಷರ ತಪ್ಪುಗಳಿದ್ದರೆ ಕಾಮೆಂಟ್ ಮಾಡಿ ತಿದ್ದಲು ಸಹಾಯ ಮಾಡಿ. ಹಾಗೆ ಯಾವುದಾದರೂ ಗೀತೆಯ ಸಾಹಿತ್ಯ ಬೇಕಿದ್ದರೂ, ಅದನ್ನು ತಿಳಿಸಿ ಖಂಡಿತ ಅದನ್ನು ಇಲ್ಲಿ ಪೋಸ್ಟ್ ಮಾಡಲು ಪ್ರಯತ್ನ ಮಾಡುತ್ತೇವೆ.
Me at suttur as a volunteer, in Jan 2008




ಹೀಗೆ ಯಾರಾದರೂ ಏಕಲವ್ಯ ವಿದ್ಯೆಯಾಗಿ ಕೀಬೋರ್ಡ್ ಕಲಿಯುವ ಆಸಕ್ತರಿದ್ದರೆ, ನನ್ನ ಯೌಟ್ಯೂಬ್ ಚಾನಲ್ ಇದೆ,  ಇಲ್ಲಿ ಕ್ಲಿಕ್ ಮಾಡಿ ನೋಡಬಹುದು. ಅಲ್ಲಿ ಕನ್ನಡ ಹಾಡುಗಳನ್ನು ಹೇಗೆ ನುಡಿಸಬೇಕೆಂದು ಮಾಹಿತಿ ಇದೆ.